ನವದೆಹಲಿ, ಮೇ 22,ಅಂಫಾನ್ ಚಂಡಮಾರುತದ ನಂತರದ ಪರಿಸ್ಥಿತಿ ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬಂಗಾಳ ಮತ್ತು ಒಡಿಶಾಗೆ ಇಂದು ಭೇಟಿ ನೀಡುತ್ತಿದ್ದಾರೆ.
ಪರಿಹಾರ ಮತ್ತು ಪುನರ್ವಸತಿ ಕ್ರಮ ಕುರಿತು ಪ್ರಧಾನಿ ಉಭಯ ರಾಜ್ಯಗಳ ಸಿಎಂಗಳೊಂದಿಗೆ ಚರ್ಚಿಸಲಿದ್ದಾರೆ.ಪ್ರಧಾನಿ ಮೋದಿ ಅವರು ಬೆಳಿಗ್ಗೆ 10.45 ಗಂಟೆ ಸುಮಾರಿಗೆ ಕೋಲ್ಕತಾ ತಲುಪಲಿದ್ದು, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ವೈಮಾನಿಕ ಸಮೀಕ್ಷೆಗೆ ನಡೆಸಲಿದ್ದಾರೆ. ನಂತರ ಮೋದಿ ಅವರು ಮಧ್ಯಾಹ್ನ ಭುವನೇಶ್ವರಕ್ಕೆ ಆಗಮಿಸುವ ಮೊದಲು ಬಶೀರ್‌ಹತ್‌ನಲ್ಲಿ ಆಡಳಿತ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.