ಬೆಂಗಳೂರು 07: ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ತೀವ್ರ ಕುತೂಹಲ ಕೆರಳಿಸಿದ್ದ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ, ಜಾರಕಿಹೊಳಿ ಸಹೋದರರ ನಡುವೆ ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿ ಗ್ರಾಮೀಣ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹೈಕಮಾಂಡ್ ಮಧ್ಯ ಪ್ರವೇಶದ ಹಿನ್ನೆಲೆಯಲ್ಲಿ ಸುಖಾಂತ್ಯವಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ ಬಣದ ಕೈ ಮೇಲಾಗಿದ್ದು, ಜಾರಕಿಹೊಳಿ ಸೋದರರಿಗೆ ತೀವ್ರ ಹಿನ್ನಡೆಯಾಗಿದೆ.
ಲಕ್ಷ್ಮೀ ಹೆಬ್ಬಾಳ್ಕರ ಬಣದ ಮಹದೇವ ಪಾಟೀಲ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಬಾಪುಸಾಹೇಬ ಜಮಾದಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸತೀಶ ಜಾರಕಿಹೊಳಿ ಬಣದ ಯಾವೊಬ್ಬ ಸದಸ್ಯರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಘೋಷಿಸಿದರು. 14 ಸದಸ್ಯರ ಬಲದ ನಿದರ್ೆಶಕರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ ಬಣದಲ್ಲಿ 9 ಜನ ಗುರುತಿಸಿಕೊಂಡಿದ್ದರು. ಉಳಿದ ಐವರು ಸತೀಶ್ ಜಾರಕಿಹೊಳಿ ಬಣದಲ್ಲಿದ್ದರು.
ಕಳೆದ 18 ವರ್ಷಗಳಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯುತ್ತಾ ಬಂದಿತ್ತಲ್ಲದೆ. ಜಾರಕಿಹೊಳಿ ಸಹೋದರರು ಪಾರುಪತ್ಯ ಮೆರೆದಿದ್ದರು. ಈ ಪಾರುಪತ್ಯಕ್ಕೆ ಲಕ್ಷ್ಮೀ ಹೆಬ್ಬಾಳ್ಕರ ಬ್ರೇಕ್ ಹಾಕಿದ್ದಾರೆ.
ಕಳೆದ ಒಂದು ವಾರದಿಂದ ಪಿಎಲ್ಡಿ ಬ್ಯಾಂಕ್ ಚುನಾವಣೆ ಸಂಬಂಧ ಬೆಳಗಾವಿ ಕಾಂಗ್ರೆಸ್ನಲ್ಲಿ ಭಿನ್ನಮತ ಭುಗಿಲೆದ್ದಿತ್ತು. ಲಕ್ಷ್ಮೀ ಹೆಬ್ಬಾಳ್ಕರ, ಜಾರಕಿಹೊಳಿ ಸಹೋದರರ ನಡುವೆ ಭಿನ್ನಾಭಿಪ್ರಾಯ ತಾರಕಕ್ಕೇರಿ ಸಮ್ಮಿಶ್ರ ಸಕರ್ಾರಕ್ಕೆ ಕಂಟಕ ತಂದಿಟ್ಟಿತ್ತು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚುನಾವಣೆ ನಮ್ಮ ಪರವಾಗಿರದಿದ್ದರೆ ಪಯರ್ಾಯ ಚಿಂತನೆ ನಡೆಸಬೇಕಾಗುತ್ತದೆ ಎಂಬ ಹೇಳಿಕೆಯನ್ನು ಜಾರಕಿಹೊಳಿ ಸಹೋದರರು ನೀಡಿದ್ದರು.
ನಿನ್ನೆ ಸಚಿವ ರಮೇಶ್ಜಾರಕಿಹೊಳಿ ಮಾತನಾಡಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಅವರನ್ನು ಹದ್ದುಬಸ್ತಿನಲ್ಲಿ ಇಡದಿದ್ದರೆ ಉಗ್ರ ನಿಧರ್ಾರ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಹೈಕಮಾಂಡ್ಗೆ ರವಾನಿಸಿದ್ದರು.
ಲಕ್ಷ್ಮೀ ಹೆಬ್ಬಾಳ್ಕರ ಕೂಡ ಜಾರಕಿಹೊಳಿ ಸಹೋದರರಿಗೆ ಪ್ರಬಲ ಪೈಪೋಟಿ ನೀಡಿದ್ದರು. ತಮ್ಮ ಬಣದ 9 ಸದಸ್ಯರನ್ನು ರಕ್ಷಣಾತ್ಮಕವಾಗಿ ತಮ್ಮೊಂದಿಗೆ ಇಟ್ಟುಕೊಂಡು ಇಂದು ಚುನಾವಣೆಗೆ ಸಜ್ಜುಗೊಳಿಸಿದ್ದರು.
ಕೇವಲ ಒಂದು ಪಿಎಲ್ಡಿ ಬ್ಯಾಂಕ್ನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಕಾಂಗ್ರೆಸ್ ಪಕ್ಷ ಹಾಗೂ ಸಮ್ಮಿಶ್ರ ಸಕರ್ಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.
ಲಕ್ಷ್ಮೀ ಹೆಬ್ಬಾಳ್ಕರ ಕುಗ್ಗಲಿಲ್ಲ, ಜಾರಕಿಹೊಳಿ ಸಹೋದರರು ಜಗ್ಗಲಿಲ್ಲ. ಹೈಕಮಾಂಡ್ ನಾಯಕರು ಹೇಳಿದ ಯಾವುದೇ ಮಾತನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ.
ಇಂದು ಚುನಾವಣೆ ನಡೆದು ಯಾರ ಕೈ ಮೇಲಾಗುತ್ತದೆ. ಫಲಿತಾಂಶದ ನಂತರ ಏನಾಗುತ್ತದೆಯೋ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ತೀವ್ರಗೊಂಡಿತ್ತು.
ಒಟ್ಟಾರೆ ಕಳೆದ ಒಂದು ವಾರದಿಂದ ತೀವ್ರ ಕುತೂಹಲ ಕೆರಳಿಸಿದ್ದ ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಯಾವುದೇ ಗದ್ದಲ, ಗೊಂದಲ ಇಲ್ಲದೆ ಮುಗಿದಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರು ಸದ್ಯ ನಿಟ್ಟುಸಿರು ಬಿಡುವಂತಾಗಿದೆ.
ಆದರೆ, ಇಲ್ಲಿಯವರೆಗೆ ಅಬ್ಬರಿಸಿ ಬೊಬ್ಬರಿದಿರುವ ಹಿನ್ನಡೆ ಅನುಭವಿಸಿರುವ ಜಾರಕಿಹೊಳಿ ಸಹೋದರರು ಮುಂದೆ ಯಾವ ಹೆಜ್ಜೆ ಇಡಲಿದ್ದಾರೆ ? ತಮಗಾಗಿರುವ ಅವಮಾನದ ಸೇಡನ್ನು ಯಾವ ರೀತಿ ತೀರಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.