ಪೂಂಚ್ ವಲಯದಲ್ಲಿ ಪಾಕ್ ಸೈನಿಕರಿಂದ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ
ಪೂಂಚ್ ವಲಯದಲ್ಲಿ ಪಾಕ್ ಸೈನಿಕರಿಂದ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ PAK VOLATES CEPSE FIRE IN POONCH
Lokadrshan Daily
1/8/25, 7:37 PM ಪ್ರಕಟಿಸಲಾಗಿದೆ
ಜಮ್ಮು, ಮಾ.3, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಸೈನಿಕರು ಮಂಗಳವಾರ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ.ಪೂಂಚ್ನ ಮಾನ್ಕೋಟ್ ಮತ್ತು ಮೆಂದರ್ ವಲಯಗಳಲ್ಲಿ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ್ದಾರೆ ಎಂದು ರಕ್ಷಣಾ ವಕ್ತಾರರೊಬ್ಬರು ತಿಳಿಸಿದ್ದಾರೆ. ಮಾನ್ಕೋಟ್ ಮತ್ತು ಮೆಂದರ್ ವಲಯಗಳ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇಂದು ಬೆಳಗ್ಗಿನ ಜಾವ 3.30ರ ಸುಮಾರಿಗೆ ಪಾಕಿಸ್ತಾನ ಸೈನಿಕರು ಅಪ್ರಚೋದಿತವಾಗಿ ಸಣ್ಣ ಶಸ್ತ್ರಾಸ್ತ್ರ ಹಾಗೂ ಶೆಲ್, ಮೋರ್ಟಾರ್ಗಳಿಂದ ದಾಳಿ ನಡೆಸಿದರು ಎಂದು ವಕ್ತಾರ ತಿಳಿಸಿದರು.ಭಾರತೀಯ ಪಡೆ ಕೂಡ ಸಮರ್ಥವಾಗಿ ಪ್ರತಿದಾಳಿ ನಡೆಸಿದ್ದು ಬೆಳಗ್ಗೆ 5 ಗಂಟೆಯ ವೇಳೆಗೆ ಗುಂಡಿನ ದಾಳಿ ನಿಂತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.