ಧಾರವಾಡ 08; ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಗೆ ರೈತರನ್ನು ನೊಂದಾಯಿಸುವಲ್ಲಿ ವಿಶೇಷ ಆಸಕ್ತ ಕಾಳಜಿ ವಹಿಸಿ ರಾಜ್ಯಕ್ಕೆ ಧಾರವಾಡ ಜಿಲ್ಲೆ ಪ್ರಥಮಸ್ಥಾನ ಬರುವಂತೆ ಮಾಡಿರುವ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರನ್ನು ಇಂದು ಬೆಳಿಗ್ಗೆ ಧಾರವಾಡ ತಾಲೂಕಿನ ವನಹಳ್ಳಿ ಗ್ರಾಮಸ್ಥರು ಜಿಲ್ಲೆಯ ರೈತರ ಪರವಾಗಿ ಶಾಲು, ಹೂವು, ಹಣ್ಣು ನೀಡಿ ಸತ್ಕರಿಸಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಒಟ್ಟು ಸುಮಾರು 1,66,000 ರೈತರಿದ್ದು, ಈಗಾಗಲೇ ಅರ್ಹರಾಗಿರುವ ಬಹುತೇಕ ರೈತರನ್ನು ಅಂದರೆ 1,22,000 ರೈತರನ್ನು ಈಗಾಗಲೇ ಪಿ.ಎಂ. ಕಿಸಾನ್ ಯೋಜನೆಗೆ ನೋಂದಾಯಿಸಲಾಗಿದೆ.
ಸರ್ಕಾರ ಜುಲೈ 10 ರ ವರೆಗೆ ದಿನಾಂಕ ವಿಸ್ತರಿಸಿ ಆದೇಶ ನೀಡಿದೆ. ಅದರಂತೆ ಉಳಿದ ರೈತರನ್ನು ನೊಂದಾಯಿಸಲು ಕ್ರಮಕೈಗೊಳ್ಳಲಾಗಿದೆ. ಸ್ವತ: ತಹಶೀಲ್ದಾರಗಳ ನೇತೃತ್ವದಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮದಲ್ಲಿ ರೈತರ ಮನೆಮನೆಗೆ ಹೋಗಿ ಅಗತ್ಯ ದಾಖಲಾತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಒಟ್ಟು ರೈತರಲ್ಲಿ ಪಿ.ಎಂ. ಕಿಸಾನ್ ಮಾರ್ಗಸೂಚಿ ಪ್ರಕಾರ ಸರ್ಕಾರಿ ನೌಕರ ಪಿಂಚಿಣಿ ಪಡೆಯುವ ವಕೀಲ, ವೈದ್ಯ, ಪೌತಿ, ಪರಸ್ಥಳದಲ್ಲಿ ವಾಸಿಸುವವರು ಸೇರಿ ವಿವಿಧ ಕಾರಣಗಳಿಂದ ಹೊರಗುಳಿಯುವ ರೈತರನ್ನು ಹೊರತುಪಡಿಸಿದರೆ, ಜಿಲ್ಲೆಯ ಅರ್ಹ ರೈತರು ನೂರಕ್ಕೆ ನೂರರಷ್ಟು ಕಿಸಾನ್ ಯೋಜನೆಗೆ ನೊಂದಣಿ ಆಗುವಂತೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ವನಹಳ್ಳಿ ಗ್ರಾಮದ ಪ್ರಗತಿಪರ ರೈತ ಅಶೋಕ ನಾವಳ್ಳಿ ಮಾತನಾಡಿ, ಅತೀವೃಷ್ಟಿ, ಅನಾವೃಷ್ಟಿಗಳಿಂದ ಕೃಷಿ ಕುಂಠಿತವಾಗುತ್ತದೆ. ರೈತರಿಗೆ ದುಡಿಮೆ ಕಡಿಮೆಯಾಗಿ ಗುಳೆ ಹೋಗುವ ಸ್ಥಿತಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಕೃಷಿ, ಕೃಷಿಕರಿಗೆ ನೆರವಾಗುವ ಪಿ.ಎಂ. ಕಿಸಾನ್, ಫಸಲ್ ಬಿಮಾ ಯೋಜನೆಗಳನ್ನು ಅತ್ಯಂತ ಕಾಳಜಿ ಪೂರ್ವಕವಾಗಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಅನುಷ್ಠಾನಗೊಳಿಸಿದ್ದಾರೆ.
ಪಿ.ಎಂ. ಕಿಸಾನ್ ಯೋಜನೆ ಅನುಷ್ಠಾನದಲ್ಲ ರಾಜ್ಯಕ್ಕೆ ನಮ್ಮ ಜಿಲ್ಲೆಯನ್ನು ಪ್ರಥಮ ಮಾಡಿದ್ದಾರೆ. ಆದ್ದರಿಂದ ಅವರ ಕಾಳಜಿ ಆಸಕ್ತರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಇಂದು ಗ್ರಾಮದ ಪ್ರಮುಖ ರೈತರು ಆಗಮಿಸಿ ಸತ್ಕರಿಸಿದ್ದೇವೆ ಎಂದು ಹೇಳಿದರು
ಇನ್ನೋರ್ವ ರೈತ ಏಗಪ್ಪ ಮಟ್ಟಿ ಅವರು ಮಾತನಾಡಿ, ವನಹಳ್ಳಿ ಗ್ರಾಮದ ಒಟ್ಟು 589 ರೈತರ ಪೈಕಿ 440 ಜನ ಪಿ.ಎಂ. ಕಿಸಾನ್ ಯೋಜನೆಗೆ ನೊಂದಾಯಿಸಿದ್ದೇವೆ ಉಳಿದಂತೆ ಜನ ಸರ್ಕಾರಿ ನೌಕರರು ಮತ್ತು 117 ಜನ ಪರಸ್ಥಳದ ರೈತರಿದ್ದಾರೆ ಇದರಲ್ಲಿ ಬೇರೆ ಕಡೆ ನೊಂದಾಯಿಸದ ಮತ್ತು ಅರ್ಹ ರೈತರನ್ನು ಪಿ.ಎಂ. ಕಿಸಾನ್ ಯೋಜನೆಗೆ ಒಳಪಡಿಸಲು ನಾವು ಸಹಕಾರ ನೀಡುತ್ತಿದ್ದೇವೆ. ಸ್ವತ: ರೈತರನ್ನು ಸಂಫರ್ಕ ಅವರ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡುತ್ತಿದ್ದೇವೆ. ಜುಲೈ 10ರೊಳಗೆ ಸಂಪೂರ್ಣ ಗುರಿ ಸಾಧಿಸಿ ನಮ್ಮ ಗ್ರಾಮವನ್ನು ಪಿ.ಎಂ. ಕಿಸಾನ್ ಯೋಜನೆಗೆ ಸಂಪೂರ್ಣವಾಗಿ ಒಳಪಟ್ಟ ಗ್ರಾಮವನ್ನಾಗಿ ಜಿಲ್ಲಾಧಿಕಾರಿಗಳಿಂದ ಘೋಷಣೆ ಮಾಡಿಸಿ ಗ್ರಾಮದಲ್ಲಿ ನಾಮಫಲಕ ಹಾಕಿಸುತ್ತೇವೆ ಎಂದು ಹೇಳಿದರು.
ಗ್ರಾಮದ ಪ್ರಮುಖ ರೈತರಾದ ಬಸಪ್ಪ ಅಂಗಡಿ, ಬಡೇಸಾಬ ನದಾಫ್, ಮುಕ್ತುಂಸಾಬ ಹಂಚಿನಾಳ, ಮಹಾದೇವಪ್ಪ ನರಗುಂದ, ಶೇಖಯ್ಯ ಸುತಗಟ್ಟಿ. ಚಂದ್ರಶೇಖರಯ್ಯ ಹಿರೇಮಠ, ನೀಲಪ್ಪ ಹೊಳಿಬಸಣ್ಣವರ ಮತ್ತು ಫಕೀರಪ್ಪ ಕುಬಳ್ಳಿ ಸೇರಿದಂತೆ ಇತರರು ಇದ್ದರು.