ಕೆನಡಾದಲ್ಲಿ ಗುಂಡಿನ ದಾಳಿ, ರಕ್ತದೊಕುಳಿ: 10 ಕ್ಕೂ ಹೆಚ್ಚು ಜನ ಬಲಿ

ಒಟ್ಟಾವಾ, ಏಪ್ರಿಲ್ 20, ಕೆನಡಾದ ನೋವಾ ಸ್ಕಾಟಿಯಾ ಪ್ರಾಂತ್ಯದ ಪೋರ್ಟಪಿಕ್‌ನಲ್ಲಿ  ನಡೆದ ಭೀಕರ  ಗಂಡಿನ ದಾಳಿಯಲ್ಲಿ  ಪೊಲೀಸ್ ಅಧಿಕಾರಿ ಸೇರಿದಂತೆ 10 ಕ್ಕೂ ಹೆಚ್ಚು ಜನರು ದಾರುಣವಾಗಿ ಹತರಾಗಿದ್ದಾರೆ.  ಈ ಘಟನೆಯಲ್ಲಿ ಇತರೆ ಹಲವು  ಮಂದಿ ಗಾಯಗೊಂಡಿದ್ದಾರೆ. 30 ವರ್ಷಗಳಲ್ಲೇ ದೇಶ ಕಂಡ ಸಾಮೂಹಿಕ ಹತ್ಯೆಯ ಭಯಾನಕ  ಕೃತ್ಯ ಇದು ಎಂದು  ದಿ ಗಾರ್ಡಿಯನ್ ಪತ್ರಿಕೆ ಸೋಮವಾರ ವರದಿ ಮಾಡಿದೆ. ಸತ್ತವರಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸೇರಿದ್ದಾರೆ. ಅಲ್ಲದೆ  ಗನ್‌ಮ್ಯಾನ್‌ನನ್ನು 51 ವರ್ಷದ ಗೇಬ್ರಿಯಲ್ ವರ್ಟ್‌ಮ್ಯಾನ್ ಎಂದು ಗುರುತಿಸಲಾಗಿದೆ.

ಅಂತಿಮವಾಗಿ ಸಾವಿನ ಸಂಖ್ಯೆ ನಿಖರವಾಗಿ ಗೊತ್ತಾಗಿಲ್ಲ ಹೀಗಾಗಿ ಸಾವಿನ  ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ನೋವಾ ಸ್ಕಾಟಿಯಾ ಪ್ರೀಮಿಯರ್ ಸ್ಟೀಫನ್ ಮೆಕ್‌ನೀಲ್ ಅವರು, ಈ ಘಟನೆಯನ್ನು ಪ್ರಾಂತ್ಯದ ಇತಿಹಾಸದಲ್ಲಿ "ಅತ್ಯಂತ ಪ್ರಜ್ಞಾಶೂನ್ಯ, ವಿವೇಕರಹಿತ  ಹಿಂಸಾಚಾರ ರಕ್ತದೊಕುಳಿ ಎಂದು ಕರೆದಿದ್ದಾರೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಘಟನೆಯ ಬಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  "ಭಯಾನಕ ಪರಿಸ್ಥಿತಿಯಲ್ಲಿ ಇದೊಂದು  ಕೆಟ್ಟ ಘಳಿಗೆ  ಪೊಲೀಸರ ಕಠಿಣ ಪರಿಶ್ರಮ ಮತ್ತು ಅಧಿಕಾರಿಗಳೊಂದಿಗೆ ಸಹಕರಿಸಿದ್ದಕ್ಕಾಗಿ ಜನತೆಗೆ ಅವರು  ಧನ್ಯವಾದ ಹೇಳಿದ್ದಾರೆ.  ಶಂಕಿತ ಗನ್‌ಮ್ಯಾನ್ ಪೊಲೀಸ್ ಅಧಿಕಾರಿಯ ವೇಷ ಧರಿಸಿ ಈ ಕೃತ್ಯ ಎಸಗಿದ್ದಾನೆ ಘಟನೆಯ ನಂತರ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಘೋಷಿಸಿದ್ದರೂ  ವೋರ್ಟ್‌ಮ್ಯಾನ್‌ನನ್ನು ಆರ್‌ಸಿಎಂಪಿ  ಗುಂಡಿಕ್ಕಿ ಕೊಂದಿದೆ ಎಂಬ ವರದಿಗಳನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.