ಕೃಷಿ ಕ್ಷೇತ್ರದಲ್ಲಿ ರೈತರ ಅಮೋಘ ಸಾಧನೆ
Outstanding achievements of farmers in the field of agriculture
ತಾಂಬಾ 04: ಗ್ರಾಮದ ರೈತರಾದ ಭೀರ್ಪ ಚಿನ್ನಪ್ಪ ವಗ್ಗಿ ಹಾಗೂ ಬೆನಕಹಳ್ಳಿ ಗ್ರಾಮದ ರಾಜಶೇಕರ ನಿಂಬರಗಿ ಅವರು ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದು ಕೃಷಿ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.
ಅವರಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡುವಂತೆ ಜಿಲ್ಲೆಯ ರೈತರ ಪರವಾಗಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ.ಪಿ.ಎಲ್. ಪಾಟೀಲವರಿಗೆ ನ್ಯಾಯವಾಧಿಗಳಾದ ಡಾ.ಎಮ್.ಬಿ.ಪಟ್ಟಣಶೇಟ್ಟಿ ಹಾಗೂ ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ ಅವರ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತ್ತು.
ಈ ಸಂಧರ್ಭದಲ್ಲಿ ರೈತ ಮುಖಂಡರಾದ ಸಿದ್ದಗೊಂಡ ಹಿರೇಕುರಬರ, ಶ್ರೀಧರ ಅವಟಿ, ಎಚ್.ಕೆ.ಮಾಳಗೊಂಡ, ವಿರೇಶ ಬಾಗೆವಾಡಿ, ಸಂಗಪ್ಪ ರೋಟ್ಟಿ, ಮಲ್ಲಪ್ಪ ಕುಂಬಳ, ಬಸಿರ ಬಳಗಾರ, ಎಮ್.ಆರ್.ನಿಂಬರಗಿ, ಎಸ್.ಆರ್.ಮುಲ್ಲಾ, ದುಂಡಪ್ಪ ಮುಂಜಿ, ಪ್ರವಿಣ ಚಳ್ಳಿಗೇರಿ ಸೇರಿದಂತೆ ಮತ್ತಿತತರು ರೈತ ಮುಖಂಡರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 