ರೈತರ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮೆಲೆ ಆಕ್ರೊಶ

ರೈತರ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮೆಲೆ ಆಕ್ರೊಶ Outrage over officials working against farmers

ವಿಜಯಪುರ, 02 :  ಜಂಟಿ ಕೃಷಿ ನಿರ್ದೇಶಕರು, ಶಿವಣಗೌಡ ಎಸ್ ಪಾಟೀಲರವರು ರೈತರ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಸ್‌. ಬಿ. ಕೆಂಬೋಗಿ ಮಾತನಾಡಿ, ವಿಜಯಪುರ ಜಿಲ್ಲೆ, ವಿವಿಧ ತಾಲೂಕು, ಹೋಬಳಿ ಹಾಗೂ ಗ್ರಾಮಗಳಲ್ಲಿ ರಸಗೊಂಬ್ಬರ ಮಳಿಗೆ ಇದ್ದಿರುತ್ತವೆ.ಬೆಳೆಗಳಿಗೆ ಯೂರಿಯಾ ಇಲ್ಲದೆ ರೈತರು ಪರದಾಡುತ್ತಿದ್ದು. ಇಂತಾಹ ಸಂದರ್ಭದಲ್ಲಿ ರೈತರಿಗೆ ಗೋಬ್ಬರ ಸಹಾಯ ಮಾಡುವದನ್ನು ಬಿಟ್ಟು ನ್ಯಾಯುತವಾದ ಮಳಿಗೆಗಳಿಗೆ ಗೋಬ್ಬರ ಪೊರೈಸುವದಲ್ಲದೆ ಬೇರೆ ಮಳಿಗೆಗಳಿಗೆ ಪೊರೈಹಿಸಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲು ಶಾಮಿಲು ಆಗಿದ್ದಾರೆ ಎಂಬ ರೈತರಲ್ಲಿ ಅನುಮಾನ ಮೂಡಿರುತ್ತದೆ.ಏಕೆಂದರೆ ಸುಮಾರು ಮಳಿಗೆಗಳು ಯೂರಿಯಾ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವದು ಗಮನಕ್ಕೆ ಬಂದರು ಯಾವುದೆ ಕ್ರಮಕೈಗೊಂಡಿಲ್ಲ. ರೈತರು ದೂರವಾಣಿ ಮುಖಾಂತರ ಮಾನ್ಯ ಜಂಟಿ ಕೃಷಿ ನಿರ್ದೇಶಕರಿಗೆ ಮಾತನಾಡಿದರೆ ಅಧಿಕಾರ ದರ​‍್ವನ್ನು ತೋರಿಸುತ್ತಿದ್ದಾರೆ. ಇಂತಹ ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಿದ್ದಾದರು ಏನು ಎಂಬುದು ರೈತರಲ್ಲಿ ಮನೆ ಮಾಡಿದೆ. ನ್ಯಾಯುತವಾದ ಮಳಿಗೆಗಳು ತಾಲೂಕ ಅಧಿಕಾರಿ ಮಾನ್ಯ ಮಾಹಾದೇವಪ್ಪ ಏವೂರ ಸಾಹೇಬರು ಪತ್ರ ಬರೆದರು ಯಾವುದೇ ಪ್ರಯೋಜನ ಇಲ್ಲ. ಹಲವು ಬಾರಿ ಪತ್ರಿಕೆ ಮತ್ತು ಮಾಧ್ಯಮ ಕೂಡಾ ಪ್ರಸಾರ ಮಾಡಿದರು ಪ್ರಯೋಜನವಾಗಿಲ್ಲ. ಅಂದ ಮೇಲೆ ಯಾವ ರೀತಿ ಅವರ ವರ್ತನೆ ಇದೆ. ಎಂಬುದು ತಾವು ಗಮನಿಸಿ ಅವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು. 

ಬೆಳೆ ಚನ್ನಾಗಿ ಇದೆ ಎಂಬುದು ಸಂತಸದಲ್ಲಿ ಇದ್ದ ರೈತರು ಕೈಗೆ ಬಂದಂತಹ ಬೆಳೆ ಅತಿವೃಷ್ಟಿಯಿಂದ ಬೆಳೆಯನ್ನು ಸಂಪೂರ್ಣ ನಾಶವಾಗಿರುತ್ತದೆ.ಯಾವ ಯಾವ ಬೆಳೆಯನ್ನು ನಾಶವಾಗಿರುವ ಬೆಳೆಯ ಬಗ್ಗೆ ಸಮಿಕ್ಷೆ ಮಾಡಿ ಸಂಕಷ್ಟದಲ್ಲಿ ಇದ್ದ ರೈತರಿಗೆ ನ್ಯಾಯಾಯುತವಾಗಿ ಸೂಕ್ತ ಬೆಳೆಯ ಪರಿಹಾರ ನೀಡಬೇಕು. ಇಂತಹ ಸಂದರ್ಭದಲ್ಲಿ ಹಿಂದಿನ ವರ್ಷದ ಬೆಳೆ ವಿಮೆ ಕಟ್ಟಿದರು ಹಲವಾರು ರೈತರಿಗೆ ಬೆಳೆಯ ವಿಮಾ ಬಂದಿರುವದಿಲ್ಲ. ರೈತರು ಸಂಕಷ್ಟದಲ್ಲಿದ್ದಾಗ ಬ್ಯಾಂಕಿನಿಂದ ಬೆಳೆಯ ಸಾಲ ಮಾಡಿ ಬೆಳೆದು ಕಟ್ಟಬೇಕು. ಎಂಬ ಆತ್ಮ ವಿಶ್ವಾಸದಿಂದ ರೈತರು ಬೆಳೆ ಸಾಲ ಮಾಡಲಾಗಿತ್ತು. ಅತಿವೃಷ್ಟಿಯಿಂದ ಬೆಳೆಯ ನಾಶವಾಗಿದ್ದರಿಂದ ಬ್ಯಾಂಕ್ ಸಾಲ ಕಟ್ಟಲು ಅಸಾಧ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ರೈತರಿಗೆ ಸಾಲ ಕಟ್ಟುವಂತೆ ಬ್ಯಾಂಕನಿಂದ ಕಾನುನೂಬದ್ದ ನೋಟಿಸ್ ನೀಡುವದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. 

ಬೆಳೆಯ ನಾಶವಾಗಿದ್ದರಿಂದ ಮತ್ತು ಹಿಂದಿನ ಬೆಳೆಯ ವಿಮಾ ಬಂದಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಬ್ಯಾಂಕಿನ ಸಾಲವನ್ನು ಕಟ್ಟಲು ಸಂಕಷ್ಟದಲ್ಲಿ ಇದ್ದ ರೈತರಿಗೆ ಬ್ಯಾಂಕಿನಿಂದ ಹಾಕುತ್ತಿರುವ ಒತ್ತಡಕ್ಕೆ ರೈತರು ಆತ್ಮಸ್ಥೈರೆ ಕಳೆದುಕೊಂಡು ಕೊನೆ ನಿರ್ಧಾರ ಆತ್ಮಹತ್ಯೆ ಶರಣಾಗುವುದು ಒಂದೇ ಎಂದು ತಮ್ಮಲ್ಲಿ ದುಃಖವನ್ನು ತೋಡಿಕೊಂಡಿರುವುದರಿಂದ ಸರಕಾರ ಗಮನಕ್ಕೆ ತಂದು ಬೆಳೆ ಸಾಲ ಮನ್ನಾ ಮಾಡಿ ರೈತರು ಸಂಕಷ್ಟದಲ್ಲಿದ್ದವರಿಗೆ ಪರಿಹಾರ ಒದಗಿಸಬೇಕು. ಕೂಲಂಕುಶವಾಗಿ ಪರೀಶೀಲನೆ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ರೈತರ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಅಧಿಕಾರಿಗಳು ಮತ್ತು ಸರ್ಕಾರ ನೇರವಾಗಿ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ. ಕೂಡಲೇ ರೈತರಿಗೆ ತಕ್ಷಣ ಬೆಳೆಯ ಪರಿಹಾರವನ್ನು ಒದಗಿಸಬೇಕು. ಬೆಳೆಯ ಸಾಲ ಮಾಡಿರುವಂತಹ ರೈತರಿಗೆ ಬೆಳೆಯ ಸಾಲ ಮನ್ನಾ ಮಾಡಬೇಕು. ಮತ್ತು ಬ್ಯಾಂಕನಿಂದ ನೋಟಿಸ್ ತಡೆಹಿಡಿಯಬೇಕು ಎಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ತಮ್ಮಾರಾಯ ಆಸಂಗಿ, ಮಲ್ಲಿಕಾರ್ಜುನ ನಾವದಗಿ, ಶ್ರೀಧರ ಚವ್ಹಾಣ, ಬಸನಗೌಡ ಪಾಟೀಲ, ಗಿರಮಲ್ಲ ಮಸಳಿ, ಮಲಕಪ್ಪ ನಾವದಗಿ, ಹಣಮಂತ ರಜಪೂತ, ಬಸು ಕೈರಾಟ, ರೇವಣಸಿದ್ದ ಕನ್ನೂರ, ನಾಗೇಶ ಕೈರಾಟ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.