73 ಕೆರೆಗಳ ಪೈಕಿ 35 ಕೆರೆಗಳು ಖಾಲಿ: ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ

Out of 73 lakes, 35 are empty: water problem likely

ಸಂಬರಗಿ 05: ಗಡಿಭಾಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೆರೆಗಳ ನಿರ್ವಹಣೆಗೆ ಅನುದಾನದ ಕೊರತೆಯಿಂದ ಕೆರೆಗಳ ದುರಸ್ಥಿ ಕಾಮಗಾರಿ ಸ್ಥಗಿತಗೊಂಡಿದ್ದು, ಸಣ್ಣ ನೀರಾವರಿ ಇಲಾಖೆಯ ಚಿಕ್ಕೋಡಿ ಉಪವಿಭಾಗದಲ್ಲಿ 73 ಕೆರೆಗಳು ಇದ್ದು, ಮೂವತ್ತೈದು ಕೆರೆಗಳು ಖಾಲಿಯಾಗಿವೆ. ನೀರಿನ ಅಭಾವ ಅದರಲ್ಲೂ ಅಥಣಿ ತಾಲೂಕಿನಲ್ಲಿ ಅತೀ ಹೆಚ್ಚು ಕೆರೆ ಇದ್ದು, 36 ಕೆರೆಗಳ ಪೈಕಿ 25 ಕೆರೆಗಳು ಖಾಲಿಯಾಗಿದ್ದರಿಂದ 11 ಕೆರೆಗಳಲ್ಲಿ ಸ್ವಲ್ಪ ಮಟ್ಟಿನಲ್ಲಿ ನೀರಿದೆ. ಬೇಸಿಗೆಯಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಗಡಿ ಭಾಗದ ಎಲ್ಲ ಗ್ರಾಮದ ಕೆರೆಗಳು ನೀರಿನ ಅಭಾವದಿಂದ ಖಾಲಿ ಕಾಣ್ತಾ ಇದ್ದಾವೆ  

ಮದಭಾವಿ ಅನಂತಪುರ ಜಿಲ್ಲಾ ಪಂಚಾಯತ ಕ್ಷೇತ್ರವು ಅಥಣಿ ತಾಲೂಕಿಗೆ ಸೇರಿದ್ದರೂ ಆದರೆ ವಿಧಾನಸಭಾ ಕ್ಷೇತ್ರ ಕಾಗವಾಡ ಬರುತ್ತಿದೆ. ಈ  ಭಾಗದ ಮದಭಾವಿ  ಪಾರ್ಥನಹಳ್ಳಿ ಗುಂಡೇವಾಡಿ ಬಾಳಿಗಿರಿ ಕೆರೆಗಳು ಸಂಪೂರ್ಣ ಬತ್ತಿ ಹೋಗಿದ್ದು, ಆದರೆ ಬೇವನೂರ ಹಾಗೂ ಅನಂತಪೂರ ಗ್ರಾಮದ ಕೆರೆಯಲ್ಲಿ ಸ್ವಲ್ಪ ಮಟ್ಟಿಗೆ ನೀರಿದ್ದು ರೈತರು ಕೆರೆಗೆ ನೀರಿನ ಮೋಟಾರ್ ಹಚ್ಚಿ ಬೆಳೆಗೆ ರಾತ್ರಿ ಬಿಡುತ್ತಾ ಇದ್ದಾರೆ  ಬೇಸಿಗೆಯಲ್ಲಿ ರೈತರೂ ಇದನ್ನು ಕೇಳುತ್ತಿಲ್ಲ. ಜಾನವರ ನೀರಿನ ಸಮಸ್ಯ ಪರಿಗಣಿಸಿ ಚಿಕ್ಕ ನೀರಾವರಿ ಇಲಾಖೆ ತಂಡವು ಕೆಲವು ಮೋಟಾರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ರೈತರೂ ಇನ್ನೂ ಕೇಳುತ್ತಿಲ್ಲ. ಕೆರೆಗಳಿಗೆ ಯಾರಾದರೂ ನೀರಿನ ಮೋಟಾರ್ ಹಚ್ಚಬಾರದು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.  ಬೇವಿನೂರು ಹಾಗೂ ಅನಂತಪೂರ ಕೆರೆ  ಖಾಲಿ ಆಗ್ತಾ ಇದೆ ಬೇಸಿಗೆಯಲ್ಲಿ ನೀರಿಗಾಗಿ ಪರದಾಡು ಪರಿಸ್ಥಿತಿ ಬರುವ ಸಾಧ್ಯತೆ ಇದೆ.  

ಗಡಿ ಭಾಗದಲ್ಲಿ ಶಾಸಕ ರಾಜು ಕಾಗೆ ಹಾಗೂ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ ಬಸವೇಶ್ವರ ಏತ ನೀರಾವರಿ ಯೋಜನೆಯ ನೀರು ಅರಳಹಟ್ಟಿ ಗ್ರಾಮಕ್ಕೆ ಬಂದು ನಿಂತಿದೆ. ಮಳೆಗಾಲದಲ್ಲಿ ಬರುವ ನೀರು ನೇರವಾಗಿ ಹೋಗುವುದಿಲ್ಲ, ಇದಕ್ಕಾಗಿ ಗಡಿ ಭಾಗದ ಕೆರೆಗಳ ದುರಸ್ತಿಗೆ ಅನುದಾನ ನೀಡಬೇಕು ಎಂದು ಈ ಭಾಗದ ರೈತರು ಅಗ್ರಹಿಸಿದ್ದರು.  

ಚಿಕ್ಕ ನೀರಾವರಿ ಇಲಾಖೆಯ ಅಥಣಿ ಉಪ-ವಿಭಾಗದ ಮುಖ್ಯ ಅಭಿಯಂತರ ಪ್ರವೀಣ ಪಾಟೀಲ ಇವರನ್ನು ಸಂಪರ್ಕಿಸಿದಾಗ ಕೆರೆಗಳಿಗೆ ಅನುದಾನ ಕೊರತೆಯ ಕಾರಣ ಕೆರೆಯ ಅಭಿವೃದ್ಧಿ ಕುಂಠಿತಗೊಂಡಿದೆ. ಚಿಕ್ಕೋಡಿ ವಿಭಾಗದಲ್ಲಿ 73 ಕೆರೆಗಳಿದ್ದು, 35 ಕೆರೆಗಳಿಗೆ ನೀರಿದ್ದಾವೆ. ರೈತರು ಬೆಳೆಗಳಿಗೆ ನೀರು ಬಳಸಬಾರದು, ಜಾನುವಾರುಗಳಿಗೆ ಬೆಸಿಗೆಯಲ್ಲಿ ನೀರಿನ ಸಮಸ್ಯೆ ಬರಬಾರದು ಎಲ್ಲ ರೈತರು ಪಾಲನೆ ಮಾಡಬೇಕೆಂದು ವಿನಂತಿಸಿದರು. 

ಬೆಳಗಾವಿ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಗುತ್ತಿಗೆದಾರರ ಬಳಿ ಸುಮಾರು 138 ಕೋಟಿ ಬಿಲ್ ಬಾಕಿ ಇದೆ.  

ಚಿಕ್ಕೋಡಿ ವಿಭಾಗದಲ್ಲಿ ಒಟ್ಟು 73 ಕೆರೆಗಳು ಚಿಕ್ಕೋಡಿ 17, ರಾಯಬಾಗ 13, ನಿಪಾಣಿ 4, ಕಾಗವಾಡ 3, ಅಥಣಿ 36 ಕೆರೆಗಳು ಖಾಲಿಯಾಗಿವೆ. ಚಿಕ್ಕೋಡಿ 6, ರಾಯಬಾಗ 6, ಅಥಣಿ 23 ಒಟ್ಟು 35 ಕೆರೆಗಳು ನೀರಿದ್ದು ಚಿಕ್ಕೋಡಿ ವಿಭಾಗದಲ್ಲಿ 38 ಕೆರೆಗಳು ಖಾಲಿಯಾಗಿವೆ.