ಉ ಖಾನಾಪುರ ಪಂಚಕಲ್ಯಾಣ ಪೂಜಾ ಸಮಾರಂಭದಲ್ಲಿ ಗಣ್ಯರಿಗೆ ಸನ್ಮಾನ
ಯಮಕನಮರಡಿ,05 : ಸಮೀಪದ ಉ ಖಾನಾಪುರ ಗ್ರಾಮದ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭದಲ್ಲಿ ಉ ಖಾನಾಪುರ ಗ್ರಾಮದ ಲಿಂಗಾಯತ ಸಮುದಾಯದವರು ಪಂಚಕಲ್ಯಾಣ ಮಹೋತ್ಸವ ಸಮೀತಿಯ ಅಧ್ಯಕ್ಷರಾದ ಸಿ ಡಿ ಪಾಟೀಲ ರವರನ್ನು ದಿ.5 ರಂದು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾಮದ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡುತ್ತಾ ನಮ್ಮ ಗ್ರಾಮದಲ್ಲಿರುವ ಎಲ್ಲ ಸಮುದಾಯದವರು ಎಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿರುವುದು ಹೆಮ್ಮೆ ಪಡುವ ಸಂಗತಿಯಾಗಿದೆ ಜೈನ ಧರ್ಮ ಬೆರೆಯಲ್ಲ ಲಿಂಗಾಯತ ಧರ್ಮ ಬೇರೆಯಲ್ಲ ಎಲ್ಲ ಧರ್ಮಗಳು ನಾಣ್ಯದ ಎರಡು ಮುಖಗಳಿದಂತೆ ಇಂದಿನ ಈ ಭವ್ಯವಾದ ಸಮಾರಂಭವನ್ನು ನೋಡಿ ಎಲ್ಲ ಜನರು ತಮ್ಮ ಕಣ್ಣುಗಳನ್ನು ಪವೀತ್ರ ಮಾಡಿಕೊಳ್ಳಬೇಕು.
ಆಚಾರ ವಿಚಾರ ಜೈನ ಧರ್ಮದ ಮಂತ್ರಪಠಣಗಳನ್ನು ಕೇಳಿ ತಮ್ಮ ಕಿವಿಗಳನ್ನು ಪವಿತ್ರ ಮಾಡಿಕೊಳ್ಳಬೆಕೆಂದು ಹೆಳುತ್ತಾ ಗ್ರಾಮದಲ್ಲಿ ಒಗ್ಗಟ್ಟಿನಿಂದ ಜರುಗುತ್ತಿರುವ ಪಂಚಕಲ್ಯಾಣ ಪ್ರತಿಷ್ಠಾಪನಾ ಸಮಾರಂಭವು ಗ್ರಾಮಕ್ಕೂ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಉಜ್ವಲ ಭವಿಷ್ಯವನ್ನು ಕಾಣಲಿ ಎಂದು ಹೆಳಿದರು. ಈ ಸಂದರ್ಭದಲ್ಲಿ ಕಲಾವಿದರನ್ನು ಹಾಗೂ ಆಚಾರ್ಯಗಳನ್ನು ಹಾಗೂ ಗ್ರಾಮದ ಹಿರಿಯರನ್ನು ಸನ್ಮಾನಿಸಲಾಯಿತು.
ಸ್ಥಳೀಯ ಬಸವೇಶ್ವರ ದೇವಸ್ಥಾನ ಕಮೀಟಿಯ ಎಲ್ಲ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸನ್ಮಾನಿಸಿದರು.