ರಾಣೇಬೆನ್ನೂರು 15: ನಗರವು ದಿನೇ-ದಿನೇ ಅತೀ ವೇಗದಲ್ಲಿ ಬೆಳೆಯುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.ಆದರೆ, ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕಾಗಿರುವುದು ಪ್ರತಿಯೊಬ್ಬ ಸದಸ್ಯರ ಅತ್ಯಂತ ಜವಾಬ್ದಾರಿಯ ಕೆಲಸವಾಗಿದೆ ಎಂದು 23ನೇ ವಾಡರ್ಿನ ನಗರಸಭಾ ಸದಸ್ಯೆ ಜಯಶ್ರೀ ರಾಜು ಪಿಸೆ ಹೇಳಿದರು.
ನಗರದ ತಮ್ಮ ವಾಡರ್ಿನಿಲ್ಲಿ ಸಾರ್ವಜನಿಕ ಸೇವಾ ಯೋಜನೆಯಲ್ಲಿ ಹಮ್ಮಿಕೊಂಡಿದ್ದ, ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆಯಾ ವಾಡರ್ುಗಳಲ್ಲಿ ವಾಸಿಸುವ ನಾಗರೀಕರು ತಮ್ಮ ಸುತ್ತಮುತ್ತಲೂ ಇರುವ ವಿಶಾಲ ಪ್ರದೇಶದಲ್ಲಿ, ಮನೆ ಮುಂಭಾಗದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಪರಿಸರವನ್ನು ಉಳಿಸಿ-ಬೆಳೆಸಿ ಸಂರಕ್ಷಿಸುವ ಕಾರ್ಯದಲ್ಲಿ ಸ್ವಯಂ ಪ್ರೇರಣೆಯಿಂದ ಮುಂದಾಗಬೇಕೆಂದು ಕರೆನೀಡಿದರು.
ಈ ಸಂದರ್ಭದಲ್ಲಿ ಅಶೋಕ ಯೋಗಿ, ರಾಜು ಪಿಸೆ, ಪವನ್ ಜರತಾರಘರ್, ಇಷರ್ಾದ್ ಬಳ್ಳಾರಿ, ಅಭಿಷೇಕ ನಾಯಕ, ಶಿವಾನಂದ ಸೊಂಡೂರ, ಜಿ.ಜಿ.ಹೊಟ್ಟಿಗೌಡ್ರ, ಶಿವಕುಮಾರ ಅಸುಂಡಿ, ಸೇರಿದಂತೆ ಮತ್ತಿತರ ನಾಗರೀಕರು, ವಾಡರ್ಿನ ಮುಖಂಡರು ಉಪಸ್ಥಿತರಿದ್ದರು.