ಕನ್ನಡ ಭಾಷೆಯನ್ನು ಬದುಕಿನ ಭಾಷೆಯಾಗಿ ಮಾಡುವುದೇ ನಮ್ಮ ಗುರಿ: ಅಮರ್ ಯಾದವ್
Our goal is to make Kannada the language of life: Amar Yadav
ಮಾಂಜರಿ, 03 : ಕನ್ನಡ ಭಾಷೆಯನ್ನು ಬದುಕಿನ ಭಾಷೆಯಾಗಿ ಮಾಡುವುದೇ ನಮ್ಮ ಗುರಿ. ತಾಯಿ ನಾಡಿಗೆ ಗೌರವ ಸಲ್ಲಿಸುವುದರ ಜತೆಗೆ, ಈ ನೆಲಕ್ಕೆ ಕೃತಜ್ಞತೆ ಸಲ್ಲಿಸಿ, ಕನ್ನಡದ ಕೀರ್ತಿ ಪತಾಕೆಯನ್ನು ನಾವೆಲ್ಲರೂ ಹಾರಿಸಬೇಕು ಗ್ರಾಮದ ದತ್ತ ಶೇತಕರಿ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಅಮರ್ ಯಾದವ್ ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಮರಾಠ ಸಮಾಜ ಹಾಗೂ ಶಿವಾಜಿ ತರುಣ್ ಮಂಡಲದ ಕಾರ್ಯಾಲಯದಲ್ಲಿ ಇಂದು ಶನಿವಾರ ನಡೆದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮರ್ ಯಾದವ್ ಅವರು, “ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 68 ವರ್ಷ ಪೂರ್ಣಗೊಂಡು, 69ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಕರ್ನಾಟಕವೇ ನಮ್ಮ ಸ್ವರ್ಗ, ಕನ್ನಡವೇ ನಮ್ಮ ದೇವ ಭಾಷೆ, ತುಂಗ, ಭದ್ರೆ, ಕಾವೇರಿ, ಕೃಷ್ಣ ನದಿಯೇ ನಮಗೆ ಪುಣ್ಯ ತೀರ್ಥ ಎಂದು ಭಾವಿಸಿದ್ದೇವೆ” ಎಂದು ತಿಳಿಸಿದರು. ಈ ವೇಳೆ ಅಮರ್ ಯಾದವ್ ಇವರಿದಿಂದ ಮಾತೆ ಭುವನೇಶ್ವರಿ ದೇವಿಯ ಪ್ರತಿಮೆಯನ್ನು ಪೂಜಿಸಿ ಕನ್ನಡ ಬಾವುಟ ಹಾರಿಸಲಾಯಿತು ಈ ವೇಳೆ ಮಹಾಲಕ್ಷ್ಮಿ ಸಂಸ್ಥೆಯ ಸಂಸ್ಥಾಪಕರಾದ ಜ್ಯೋತಿರಾಮ ಯಾದವ ಮಾತನಾಡಿ, ನಾವು ಜನಸಾಮಾನ್ಯರೊಂದಿಗೆ ಬದುಕುತ್ತಿದ್ದೇವೆ. ಅವರ ನಡುವೆ ಇರುವ ನಾವು ಮೊದಲು ನಮ್ಮ ರಾಜ್ಯದಲ್ಲಿರುವ ಕನ್ನಡ ಭಾಷೆ ಕಲಿತು ಆ ಮೇಲೆ ತಮ್ಮ ತಮ್ಮ ಮಾತೃಭಾಷೆಯಲ್ಲಿ ತಮ್ಮ ನಿತ್ಯದ ವ್ಯವಹಾರ ಆಳವಡಿಸಿಕೊಳ್ಳಬೇಕೆಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಶಿವಾಜಿ ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಕಾಳವಿರೆ ಮೋಹನ್ ಲೋಕರೆ ರಾಮಚಂದ್ರ ಭೋಸಲೇ ದೀಲೀಪ್ ಪವಾರ್ ಶಶಿಕಾಂತ್ ಪಾಟೊಳೆ ಪೋಪೆಟ್ ಲಾಮಕಾಣಿ ಬಹಳ ಸಾಹೇಬ್ ಮಿರ್ಜಿ ಜೈ ಸಿಂಗ್ ಕಾಡಾಪುರೆ ಸಂಬಾಜಿ ಮಾನೆ ಬಾಬಾ ಸಾಹೇಬ್ ತೋರಿಸಿ ಜ್ಞಾನೇಶ್ವರ್ ಶಿಂದೆ ಶುಭಾಶಯ ತೋರಿಸಿ ಜ್ಞಾನೇಶ್ವರ್ ಪಾಟೊಳೆ ಚಂದ್ರಸೇನ ಕದಮ್ ಸುಖದೇವ ಪಾಟೊಳೆ ಮಹಾಂತೇಶ್ ಜಿಓಜಿ ವಿಜಯ ಘಾಟಗೆ ಅಶೋಕ್ ಘಾಟಗೆ ದಸ್ತಗೀರ್ ಮತ್ತೆಬಾಯಿ ಹಾಗೂ ಇನ್ನುಳಿದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಹಾಜರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 