ನಮ್ಮ ಹಿರಿಯರು ನಮ್ಮಆದರ್ಶ ವಾಕ್‌ಚಾತುರ್ಯ ಸ್ಪರ್ಧೆ

ಬೆಳಗಾವಿ 01: ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 01 ರಂದು ರಾಣಿಚೆನ್ನಮ್ಮ ವಿಶ್ವ ವಿದ್ಯಾಲಯದ ಸುತ್ತೋಲೆಯ ಆದೇಶದ ಅನ್ವಯ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ “ನಮ್ಮ ಹಿರಿಯರು ನಮ್ಮ ಆದರ್ಶ” ಎಂಬ ಶೀರ್ಷಿಕೆ ಅಡಿಯಲ್ಲಿ ವಾಕ್‌ಚಾತುರ್ಯ ಸ್ಪರ್ಧೆಯನ್ನು ಎರಿ​‍್ಡಸಲಾಗಿದ್ದು, ಈ ಸ್ಪರ್ಧೆಯಲ್ಲಿ ಒಟ್ಟು 8 ಪ್ರಶಿಕ್ಷಣಾರ್ಥಿಗಳು  ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದರು. 

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ನಿರ್ಮಲಾ ಬಟ್ಟಲ ರವರು ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ನಮ್ಮ ಹಿರಿಯರು ನಮ್ಮ ಮೌಲ್ಯಗಳ ಪರಂಪರೆಯ ಪ್ರತೀಕವಾಗಿದ್ದು, ಪ್ರತಿಯೊಬ್ಬರು ಹಿರಿಯರನ್ನು ಗೌರವಿಸಬೇಕು. ಅವರ ಆದರ್ಶ ಬದುಕಿನ ಮಜಲನ್ನು ಅರಿತಾಗ ಜೀವನದ ಸಂಕಷ್ಟಗಳು ನಿವಾರಣೆಯಾಗಲು ಸಹಾಯಕವಾಗುವವು.   

ಮಗ ತನ್ನ ತಂದೆ ತಾಯಿ ಹಾಗು ತನ್ನ ಅತ್ತೆ ಮಾವಂದಿರನ್ನು ಸಹ ನೋಡಿಕೊಂಡು ಅವರನ್ನು ಸಂತೋಷದಿಂದ ಜೀವಿಸುವಂತೆ ಮಾಡುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ ಎಂದು ತಿಳಿಸಿ ಸ್ಪರ್ಧೆಯಲ್ಲಿ ವಿಜೇತರ ಹೆಸರುಗಳನ್ನು ಘೋಷಿಸಿದರು. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಶಾಹಿನತಾಜ ಕಿಲ್ಲೆದಾರ, ದ್ವೀತಿಯ ಬಹುಮಾನ ಗಣೇಶ ನಾವಲಗಿ ಮತ್ತುತೃತೀಯ ಬಹುಮಾನ ವಿನಾಯಕ ನಂದಿ ಮತ್ತು ಪವಿತ್ರಾ ಗದ್ದನಕೇರಿಯವರು ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ದ್ವೀತಿಯ ಸೆಮಿಸ್ಟರನ ಪ್ರಶಿಕ್ಷಣಾರ್ಥಿಗಳು ಮತ್ತು ನಾಲ್ಕನೇಯ ಸೆಮಿಸ್ಟರನ ಪ್ರಶಿಕ್ಷಣಾರ್ಥಿಗಳು ಮತ್ತು ಮಹಾವಿದ್ಯಾಲಯದ ಸರ್ವ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.