ಕೃಷಿ ಭಾರತದ ಮೂಲ, ಭಾರತ ಕೃಷಿ ಪ್ರಧಾನ ರಾಷ್ಟ್ರ : ಡಾ. ಕಲಾವತಿ ಕಂಬಳಿ

ಕೃಷಿ ಭಾರತದ ಮೂಲ, ಭಾರತ ಕೃಷಿ ಪ್ರಧಾನ ರಾಷ್ಟ್ರ : ಡಾ. ಕಲಾವತಿ ಕಂಬಳಿ  Origin of Agriculture India, India is an agricultural country : Dr. Kalavati rug

  ಗದಗ 13: ನಗರದ ಕೆ. ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು   ರವಿವಾರ ದಂದು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಎನ್‌. ಎಸ್‌. ಎಸ್‌. ಘಟಕದವತಿಯಿಂದ ವಾರ್ಷಿಕ ವಿಶೇಷ ಶಿಬಿರದ ಮೂರನೆ ದಿನವನ್ನು ವಿವಿಧ ಕಾರ್ಯಗಳಿಂದ ಪುರ್ಣಗೊಳಿಸಿದರು. ಮುಂಜಾನೆ ಧ್ವಜಾರೋಹಣಕ್ಕೆ ಹೊಂಬಳ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾ ಶ್ರೀಮತಿ. ಲಲತಾ ಮುಧೋಳ ಅವರು ಆಗಮಿಸಿದ್ದರು, ಎಲ್ಲರೂ ಉತ್ತಮವಾಗಿ ಸಮಾಜ ಸೇವೆ ಮಾಡೋಣ, ವಿದ್ಯಾರ್ಥಿ ಜೀವನ ಅತೀ ಅಮೂಲ್ಯ, ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳುತ್ತಾ ಶಬಿರದ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು, ನಂತರದಲ್ಲಿ ಎಲ್ಲ ಎನ್‌. ಎಸ್‌. ಎಸ್‌. ಸ್ವಯಂಸೇವಕರು ಶ್ರಮದಾನಕ್ಕೆ ತೆರೆಳಿದರು, ಹೊಂಬಳ ಕುಡಿಯುವ ನೀರಿ ಕೆರೆ ಮತ್ತು ಶ್ರೀ. ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯನ್ನು ಸ್ವಚ್ಛಗೊಳಿಸಿದರು ಮತ್ತು ಸಂಗ್ರಹಿಸಲಾದ ತ್ಯಾಜ್ಯವನ್ನು ಪಂಚಾಯತಿಯವರ ಸಹಾಯದಿಂದ ತ್ಯಾಜ್ಯ ಸಂಗ್ರಹಾರಕ್ಕೆ ವಿಲೆವಾರಿ ಮಾಡಲಾಹಿತು.   

            ಸಂಜೆ ಆರೋಗ್ಯದ ಕುರಿತು ಅರಿವು ಮೂಡಿಸುವ ಜಾಥಾದ ಜೊತೆಗೆ ಮನೆ ಮನೆಗೂ ತೆರೆಳಿ ಸಮಾಲೋಚನೆ ಮಾಡಿದರು ನೀರನ್ನು ಸಂರಕ್ಷಿಸುವುದು ಮತ್ತು ಅದರಿಂದ ಆರೋಗ್ಯದ ಮೇಲೆ ಆಗುವುದರ ಪರಿಣಾಮಗಳನ್ನು ಗ್ರಾಮಸ್ಥರಿಗೆ ಅರಿವು ಮೂಡಿಸುವುದರ ಜೊತೆಗೆ ಒಂದು ಕೀರು ನಾಟಕವನ್ನು ಪ್ರಸ್ಥುತ ಪಡಿಸಿದರು, ಭಾರತವೋಂದು ಕೃಷಿ ಪ್ರಧಾನ ರಾಷ್ಟ್ರ ಎಂಬ ವಿಷಯದ ಕುರಿತು ಉಪನ್ಯಾಸ ಮಾಡಲು ಉಪನ್ಯಾಸಕರಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೃಷಿ ಸಂಶೋಧನಾ ಕೇಂದ್ರ, ಗದಗನ ಮುಖ್ಯಸ್ಥರಾದ ಡಾ. ಕಲಾವತಿ ಕೆ. ಕಂಬಳಿ ಅವರು ಮಾತನಾಡುತ್ತಾ ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರ, ಸಂಪನ್ಮೂಲ ರಾಷ್ಟ್ರವೂ ಕೂಡಾ ಆಗಿದೆ, 2015 ರ ಪ್ರಕಾರ ನಮ್ಮ ದೇಶದ ರೈತರಿಗೆ 3 ಎಕರೆ ಭೂಮಿ ಸಿಗಬೇಕು ಎಂದರು, 166 ಹೆಕ್ಟರ್ ಮಿಲಿಯನ್ ಜಮೀನು ನಮ್ಮ ದೇಶದಲ್ಲಿದೆ, ನಮ್ಮ ರೈತರು ಹೆಚ್ಚಾಗಿ ವಿಷಪೂರಿತ ಗೋಬ್ಬರವನ್ನು ಬಳಸುವುದರಿಂದ ಆಹಾರ ಉತ್ಪಾದನೆ ಕಡಿಮೆಯಾಗುತ್ತಿದೆ ಎಂದು ಹೇಳಿದರು, ನಾವೇಲ್ಲರೂ ಸೇರಿ ನಮ್ಮ, ತಂದೆ ಹಿ ತಾಯಿಗೆ ಸಹಾಯಕರಾಗಿ ಕೃಷಿಗೆ ಅವಲಂಬಿತರಾಗಿ ಎಂದು ತೀಳಿಸಿದರು, ವಾಯು ಮಾಲಿನ್ಯದ ಕುರಿತು ಮಾಹಿತಿ ನೀಡಿದರು.  

ಕಾರ್ಯಕ್ರಮದಲ್ಲಿ ಹೊಂಬಳ ಗ್ರಾಮದ ಡಾ. ಕಳಕೇಶ ಅಂ. ಪವಾರ, ಸದಸ್ಯರು ಗ್ರಾಮ ಪಂಚಾಯತಿ,   ರಫೀಕ ದರಗದ,   ರವಿಚಂದ್ರ ಅಬ್ಭಿಗೇರಿ, ಸಾವಯವ ಕೃಷಿಕರು,   ಮಹಮ್ಮದ ಅಲಿ ಕರೂರು, ಎನ್‌. ಎಸ್‌. ಎಸ್‌. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಎನ್‌. ಎಸ್‌. ಎಸ್‌. ಘಟಕದ ಕಾರ್ಯನಿರ್ವಾಹಕರಾದ   ಅಪ್ಪಣ್ಣ ಹಡಪದ,   ನೀಲಮ್ಮ ಸೀತಾರಳ್ಳಿ, ಕಾರ್ಯದರ್ಶಿಗಳಾದ ಕುಮಾರ. ಆಕಾಶ ಕಳಗಣ್ಣನವರ, ಕುಮಾರ. ಪ್ರಶಾಂತ ಕಲಬುರ್ಗಿ, ಕುಮಾರ, ಸೋಮಶೇಖರ ಕುರಿ,   ಐಶ್ವರ್ಯ ಶಲವಡಿ ಮತ್ತು ಎನ್‌. ಎಸ್‌. ಎಸ್‌. ಸ್ವಯಂಸೇವಕರು ಉಪಸ್ಥಿತರಿದ್ದರು, ಕುಮಾರಿ. ಸಾನೀಯಾ ಮುಲ್ಲಾ ಅವರು ನೀರುಪಿಸಿದರು, ಕುಮಾರಿ. ಅಕ್ಷತಾ ದೊಡ್ಡಗೌಡ್ರ ಅವರು ಸ್ವಾಗತಿಸಿದರು,   ರಾಜೇಶ್ವರಿ ಬಾಲನಗೌಡ್ರ ಅವರು ಎಲ್ಲರಿಗೂ ವಂಧಿಸಿದರು.