ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿ, ಬಿಜೆಪಿಯನ್ನು ಗೆಲ್ಲಿಸಿ
Organize the party at the booth level and make the BJP win
ಸವದತ್ತಿ 28: "ಮುಂಬರುವ ಚುನಾವಣೆಗಳನ್ನು ಅತ್ಯಂತ ಎಚ್ಚರ ಮತ್ತು ಕಾಳಜಿಯಿಂದ ಎದುರಿಸಬೇಕಿದೆ. ಭಾರತೀಯ ಜನತಾ ಪಕ್ಷದ ವಿಜಯಕ್ಕಾಗಿ ಕಾರ್ಯಕರ್ತರು ಈಗಿನಿಂದಲೇ ಸತತ ಪ್ರಯತ್ನ ಆರಂಭಿಸಬೇಕು,"ಎಂದು ಪ್ರಮುಖರಾದ ಸಂತೋಷ ಹಡಪದ ಅವರು ಹೇಳಿದರು. ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಬೆಳಗಾವಿ ಗ್ರಾಮಾಂತರ ಸವದತ್ತಿ ಮಂಡಲದ ವತಿಯಿಂದ ಆಯೋಜಿಸಲಾಗಿದ್ದ ಎಸ್ಐಆರ್ ತಂಡ ಹಾಗೂ ಬಿಎಲ್ಎ - 2 ಸದಸ್ಯರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ತರಬೇತಿ
ಪಡೆದ ಸದಸ್ಯರು ಮತದಾರರೊಂದಿಗೆ ಅತ್ಯಂತ
ನಯ-ವಿನಯದಿಂದ ವರ್ತಿಸಿ ಅವರ ಮನ
ಗೆಲ್ಲುವ ಕೆಲಸ ಮಾಡಬೇಕು.ಮೊದಲು
ನಿಮ್ಮ ಬೂತ್ಗಳನ್ನು ಗೆಲ್ಲಿಸುವುದೇ
ಮುಖ್ಯ ಉದ್ದೇಶವಾಗಲಿ. ಬೂತ್ ಮಟ್ಟದಲ್ಲಿ ಯಶಸ್ವಿಯಾದರೆ
ಮುಂದಿನ ಚುನಾವಣೆ ಎದುರಿಸುವುದು ಸುಲಭ,"
ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕರ್ತರು ಯಾವುದೇ ನಿಷ್ಕಾಳಜಿ ವಹಿಸದೆ
ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ
ನಿರ್ವಹಿಸಬೇಕು ಎಂದರು.
ಈ
ಸಂದರ್ಭದಲ್ಲಿ ರಾಷ್ಟ್ರೀಯ
ಸ್ವಯಂಸೇವಕ ಸಂಘದ ಡಾ.
ನರಸಿಂಹ ಕುಲಕರ್ಣಿ ಅವರು ಮಾತನಾಡಿ ಭಾರತದ
ಸ್ವಾತಂತ್ರ್ಯ ಸಂಗ್ರಾಮ ಮತ್ತು ಸಂಘದ
ಕೊಡುಗೆಯ ಕುರಿತು ಮಹತ್ವದ ವಿಚಾರಗಳನ್ನು
ಹಂಚಿಕೊಂಡಿದ್ದಾರೆ.
1947ರಲ್ಲಿ ಭಾರತಕ್ಕೆ
ಸ್ವಾತಂತ್ರ್ಯ ಸಿಕ್ಕಾಗ ಕಾಂಗ್ರೆಸ್ ಪಕ್ಷ
ಅಸ್ತಿತ್ವದಲ್ಲಿದ್ದರೂ, ಕೇವಲ ಒಂದು ಪಕ್ಷದಿಂದ
ಸ್ವಾತಂತ್ರ್ಯ ಬಂದಿತು ಎನ್ನುವುದು ಮುಖ್ಯವಲ್ಲ.
ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ನಿರ್ಧರಿಸಿದ್ದು
ಅಂದಿನ ಕ್ರಾಂತಿಕಾರಿಗಳ ತೀವ್ರ ಹೋರಾಟ ಮತ್ತು
ಅವರಲ್ಲಿ ಮೂಡಿದ್ದ ಭಯದಿಂದ. ಭಾರತೀಯರ
ಸಂಘಟಿತ ಹೋರಾಟವು ಬ್ರಿಟಿಷ್ ಸಾಮ್ರಾಜ್ಯದ
ಅಡಿಪಾಯವನ್ನು ನಡುಗಿಸಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಸಂಘದ
ಸಂಸ್ಥಾಪಕ ಡಾ. ಕೇಶವ ಬಲಿರಾಮ್
ಹೆಡ್ಗೆವಾರ್ ಅವರು ದೇಶದ ಉನ್ನತಿಗಾಗಿ
ಸಂಘದ ಮೂಲಕ ಅತ್ಯುನ್ನತ ಗುಣಮಟ್ಟದ
ವ್ಯಕ್ತಿತ್ವಗಳನ್ನು ರೂಪಿಸಿದರು. ವ್ಯಕ್ತಿ ನಿರ್ಮಾಣವೇ ರಾಷ್ಟ್ರ
ನಿರ್ಮಾಣ ಎಂಬ ಮಂತ್ರದೊಂದಿಗೆ ಅವರು
ಅಪ್ರತಿಮ ದೇಶಭಕ್ತರನ್ನು ಸಮಾಜಕ್ಕೆ ನೀಡಿದರು.
ಸಂಘವು
ತರಬೇತಿ ನೀಡಿದ ಅಂತಹ ದಕ್ಷ
ಮತ್ತು ಪ್ರಾಮಾಣಿಕ ವ್ಯಕ್ತಿಗಳು ನಂತರದ ದಿನಗಳಲ್ಲಿ ಭಾರತೀಯ
ಜನತಾ ಪಕ್ಷದ ಮೂಲಕ ದೇಶದ
ಸೇವೆಯಲ್ಲಿ ತೊಡಗಿಸಿಕೊಂಡರು. ಈ ವ್ಯಕ್ತಿಗಳು ರಾಜಕೀಯ
ಕ್ಷೇತ್ರದಲ್ಲಿದ್ದೂ ರಾಷ್ಟ್ರದ ಏಳಿಗೆಗಾಗಿ ಅತ್ಯುನ್ನತವಾದ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಅವರು ಶ್ಲಾಘಿಸಿದರು.
ಮಂಡಲದ
ಅಧ್ಯಕ್ಷ ವಿರುಪಾಕ್ಷಪ್ಪ ಮಾಮನಿ
ಅವರು ಜ್ಯೋತಿ ಬೆಳಗಿಸುವ ಮೂಲಕ
ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಪ್ರಮುಖರು
ರತ್ನಕ್ಕ,ಮಾಮನಿ, ಸಚಿನ್ ಕಡಿ,
ಮಂಡಲದ ಉಪಾಧ್ಯಕ್ಷ ಸಂಜೀವ ಕುಮಾರ್ ನವಲಗುಂದ,
ಈರಣ್ಣ ಚಂದರಗಿ, ಮಲ್ಲೇಶ ಸುಳೇಬಾವಿ
ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 