ಸಮೀಕ್ಷಾ ಕಾರ್ಯ ಮುಂದೂಡುವಂತೆ ಒತ್ತಾಯಿಸಿ ಸಂಘಟನೆಗಳ ಮನವಿ
Organizations appeal to postpone survey work
ತಾಳಿಕೋಟೆ 20: ದಸರಾ ರಜೆ ಅವಧಿಯಲ್ಲಿ ಸರ್ಕಾರ ಕೈಗೊಂಡಿರುವ ಸಮೀಕ್ಷಾ ಕಾರ್ಯವನ್ನು ಮುಂದೂಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ವತಿಯಿಂದ ಸ್ಥಳೀಯ ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಶನಿವಾರ ಮನವಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಬಿರಾದಾರ ಸೆ.20 ರಿಂದ ಅ. 7 ರವರೆಗೆ ಇರುವ ದಸರಾ ರಜಾ ಅವಧಿಯಲ್ಲಿ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ತೊಡಗಿಸಿಕೊಂಡಿರುವುದರಿಂದ ರಜೆ ಇಲ್ಲದೆ ಶಿಕ್ಷಕರು ಗೋಳಾಡುವಂತಾಗಿದೆ ಶಿಕ್ಷಕ ಬಳಗವು ರಜಾ ಅವಧಿಯಲ್ಲಿ ವಿವಿಧೆಡೆ ಪರಿವಾರ ಸಮೇತ ಪ್ರವಾಸ ಹೋಗಲು ಸಿದ್ಧತೆ ನಡೆದಿರುತ್ತದೆ. ದಸರೆ ದೊಡ್ಡ ಹಬ್ಬ, ಮುಂದೆ ದೀಪಾವಳಿಗಾಗಿ ಮನೆ ಸ್ವಚ್ಛತೆ ಮೊದಲಾದ ಕಾರ್ಯಗಳು ಪೂಜಾ ಸಿದ್ಧತೆ ಮಾಡಬೇಕಾಗಿದೆ. ಬೇರೆ ಜಿಲ್ಲೆಗಳಿಂದ ಆಗಮಿಸಿ ಶಿಕ್ಷಕ ವೃತ್ತಿಗೆ ತೊಡಗಿಕೊಂಡಿರುವ ಅನೇಕರು ತಮ್ಮ ಊರಿಗೆ ಹೋಗಿ ತಂದೆ-ತಾಯಿ ಇತರ ಪರಿವಾರದ ಜೊತೆ ಕಾಲ ಕಳೆದು ಹಬ್ಬವನ್ನು ಸಂಭ್ರಮಿಸಲು ಅವಕಾಶವಿತ್ತು. ಆದರೆ ಈಗ ದಸರಾ ರಜೆಯಲ್ಲಿ ಗಣತಿ ಕಾರ್ಯಕ್ಕೆ ಶಿಕ್ಷಕರನ್ನು ನೇಮಕ ಮಾಡಿರುವುದು ತುಂಬಾ ನಿರುತ್ಸಾಹಕ್ಕೆ ಕಾರಣವಾಗಿದೆ. ಆದ್ದರಿಂದ ಶಾಲೆ ಪ್ರಾರಂಭದ ನಂತರವೆ ಗಣತಿ ಸಮೀಕ್ಷೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಸ್ಥಳೀಯ ಪ್ರೌಢ ಶಾಲೆ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಬಿ. ಬಡಿಗೇರ, ಹಾಗೂ ಸರ್ವ ಸದಸ್ಯರು . ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ.ವಜ್ಜಲ, ಪ್ರಧಾನ ಕಾರ್ಯದರ್ಶಿ ಎಸ್.ಬಿ.ಬೀರಗೊಂಡ, ಶಿಕ್ಷಕರ ಸೊಸೈಟಿ ಅಧ್ಯಕ್ಷ ಸುರೇಶ ವಾಲಿಕಾರ, ಎನ್.ಜಿ.ಓ ನಿರ್ದೇಶಕ ಶಂಕರಗೌಡ.ಬಿರಾದಾರ, ಆರ್.ಎಸ್.ಹಿಪ್ಪರಗಿ, ಎಸ್.ಬಿ.ಸಜ್ಜನ, ಹಣಮಂತ ಮಾದರ, ವಿಶ್ವನಾಥ ಪತ್ತಾರ, ಎನ್.ಎಸ್.ಮಂಟಗಿ, ಕೆ.ಎನ್.ಹಲಗಿ, .ಚಂದ್ರಶೇಖರ ಯಲರಡ್ಡಿ, ಎ.ಎಸ್.ಇಟಗಿ, ಐ.ಎಚ್.ಕುಂಬಾರ, ಮಹಾಂತೇಶ ಗೌಡರ, ಅರ್ಜುನ.ರಾಠೋಡ, ಎಸ್.ವಿ.ಮಾಮನಿ, ನಿಂಗಣ್ಣ ಅಸ್ಕಿ, ಎಂ.ಎಸ್.ಸಜ್ಜನ, ಸತೀಶ ಕುಲಕರ್ಣಿ ಮೊದಲಾದವರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 