ಸಮಾಜದ ಅಭಿವೃದ್ಧಿಗೆ ಸಂಘಟನೆ ಅಗತ್ಯ: ಕಾಂಚನ ಕುಮಾರ್
Organization is necessary for the development of society: Kanchana Kumar
ಹೂವಿನ ಹಡಗಲಿ 26: ಬಣಜಿಗ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಸಂಘಟನಾ ಕಾರ್ಯದರ್ಶಿ ಕಾಂಚನ ಕುಮಾರ್ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಎಂ ಬಿ ಆಯಿಲ್ ಮಿಲ್ ನಲ್ಲಿ ಮಂಗಳವಾರ ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಮಾಜಿಕವಾಗಿ ಸದೃಢವಾಗಿ ಬೆಳೆಯಲು ಸಂಘಟನೆ ಅಗತ್ಯ ಜತೆಗೆ ರಾಜಕೀಯ ಸ್ಥಾನ ಮಾನ ಸಿಗಬೇಕು ಎಂದರು. ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಮುಂಡವಾಡ ಉಮೇಶ ಅಧ್ಯಕ್ಷತೆ ವಹಿಸಿಸಮಾಜದ ಏಳಿಗೆಗೆ ಸದಾ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿರಿ ಎಂದರು.
ಗೌರವಾಧ್ಯಕ್ಷ ರುದ್ರ್ಪ ಕರಿಶೆಟ್ಟಿ ರಾಜ್ಯ ಬಣಜಿಗ ವಿಶ್ವಸ್ಥ ಮಂಡಳಿ ಸದಸ್ಯ ಮುರುಗೇಶ ತುರಕಾಣಿ, ಹಿರೇಹಡಗಲಿ ಘಟಕದ ಅಧ್ಯಕ್ಷ ಶಿವಯೋಗೆಪ್ಪ ಹಲಗೇರಿ ಗಿರಿಮಲ್ಲಿಗೆ ಮಹಿಳಾ ಸಹಕಾರಿಯ ಅಧ್ಯಕ್ಷ ಸವಿತಾ ಅಂಗಡಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಯಲಗಚ್ಚಿನಯುವ ಘಟಕದ ಅಧ್ಯಕ್ಷ ಐ ಎಸ್ ವಿಜಯಕುಮಾರ್ ಇದ್ದರು. ಕುಂಬಾರಿ ಸವಿತಾ, ನಾಗರತ್ನ ಕುಂಚೂರು, ಎ ಭುವನೇಶ್ವರಿ ಶೈಲಜಾ ಪವಾಡಶೆಟ್ರು ನಿರ್ವಹಿಸಿದರು. ತಾಲೂಕಿನ ವಿವಿಧ ಗ್ರಾಮಗಳ ಸಮಾಜದ ಬಾಂಧವರು ಭಾಗವಹಿಸಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 