ಮೂಡಲಗಿ: ಅಕ್ರಮ ಮದ್ಯ ಮಾರಾಟ ವಿರುದ್ಧ ಸಂಘಟನೆಯಿಂದ ಹೋರಾಟ

ಲೋಕದರ್ಶನ ವರದಿ

ಮೂಡಲಗಿ 27: ಜಯ ಕನರ್ಾಟಕ ಸಂಘಟನೆಯೂ ತಾಲೂಕಿನ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸರ್ವಂಗೀಣ ಅಭಿವೃದ್ದಿಗೆ ಹೋರಾಡಲು ಸದಾ ಸಿದ್ದವಾಗಿದೆ ಎಂದು ಜಯ ಕನರ್ಾಟಕ ಸಂಘಟನೆಯ ತಾಲೂಕಾಧ್ಯಕ್ಷ ಶಿವರಡ್ಡಿ ಹುಚರೆಡ್ಡಿ ಹೇಳಿದರು. 

ಅವರು ಸಮೀಪದ ವೆಂಕಟಪೂರ ಗ್ರಾಮದಲ್ಲಿ ಜಯ ಕನರ್ಾಟಕ ಸಂಘಟನೆಯ ನೂತನ ಗ್ರಾಮಘಟಕ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ 45 ಲಕ್ಷ ಸದಸ್ಯರನ್ನು ಹೊಂದಿರುವ ಜಯ ಕನರ್ಾಟಕ ಸಂಘಟನೆಯೂ ಅತಿದೊಡ್ಡ ಸಂಘಟನೆಯಾಗಿದೆ. ಕನ್ನಡ ನೆಲ,ಜಲ,ಭಾಷೆಗೆ ತೊಂದರೆಯಾದಾಗ ಅದನ್ನು ಉಳಿಸಿ ಬೆಳಿಸಿಕೊಳ್ಳುವುದೇ ಸಂಘಟನೆಯ ಉದ್ದೇಶವಾಗಿದೆ. ನಾಡು,ನುಡಿ, ರೈತರಿಗಾಗಿ ಸದಾಕಾಲ ಸಂಘರ್ಷ ಮಾಡುತ್ತೇವೆ. ಶೈಕ್ಷಣೀಕ ಕ್ಷೇತ್ರಕ್ಕಾಗಿ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಪ್ಪ ರೈಯವರು 100 ಶಾಲೆಗಳನ್ನು ದತ್ತು ಪಡೆದು ಬಡ ವಿದ್ಯಾಥರ್ಿಗಳ ಶಿಕ್ಷಣಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ರಾಜ್ಯದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿ. ಗ್ರಾಮೀಣ ಭಾಗದ ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದು ಇದನ್ನು ನಿಯಂತ್ರಿಸುವುದಕ್ಕಾಗಿ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ದ ಜಯ ಕನರ್ಾಟಕ ಸಂಘಟನೆ ಹೋರಾಟ ನಡೆಸಿ ಹಳ್ಳಿಗಳಲ್ಲಿ ಮದ್ಯ ಮಾರಟ ಸಂಪೂರ್ಣವಾಗಿ ನಿಲ್ಲಿಸಲಾಗುವುದು. ಜಯ ಕನರ್ಾಟಕ ಸಂಘಟನೆಯ ಸದಸ್ಯರಿಗೆ  ಯಾವುದೇ ರಾಜಕೀಯ ಪಕ್ಷ ತೊಂದರೆ ನೀಡಿದರೆ ರಾಜ್ಯದ 45 ಲಕ್ಷ ಸದಸ್ಯರು ಬೆನ್ನಿಗೆ ನಿಂತು ನ್ಯಾಯಕ್ಕಾಗಿ ಹೋರಾಡುತ್ತೆವೆ ಎಂಬ ಎಚ್ಚರಿಕೆ ನೀಡಿದರು. ಸಂಘಟನೆಯ ಸವದತ್ತಿ ತಾಲೂಕಾಧ್ಯಕ್ಷ ಸುರೇಶ ಪೂಜಾರ, ಸತ್ಯಪ್ಪ ಮಹಾರಾಜ, ಗುರುಲಿಂಗಯ್ಯಾ ಹಿರೇಮಠ ಮಾತನಾಡಿದರು.

ಶಿವನಗೌಡ ಪಾಟೀಲ, ಜಂಗ್ಲಿಸಾಬ ಸಕರ್ಾವಸ, ರಮೇಶ ಕನರ್ೂರ, ಲಕ್ಷ್ಮಣ ಭಜಂತ್ರಿ, ಕುಮಾರ ಕತಾರಕಿ, ಲಕ್ಷ್ಮಣ ಮಳ್ಳಿಗೇರಿ, ಅಪ್ಪಸಾಬ ನದಾಪ, ಸಂಗೀತ ಬಳಿಗಾರ, ದೀಪಾ ತಳವಾರ, ತಿಮ್ಮಣ್ಣ ಕೋಳಿಗುಡ್ಡ, ಸುರೇಶ ಅಂಗಡಿ, ನಾಗಪ್ಪ ಉದ್ದಗೋಳ, ವಿಠ್ಠಲ ಢವಳೇಶ್ವರ, ಹನುಮಂತ ಹೊರಟ್ಟಿ, ವಿನಾಯಕ ಕುಲಗೋಡ, ಸಂಗಪ್ಪ ಅಂಗಡಿ, ನಿಂಗನಗೌಡ ಪಾಟೀಲ,  ಸಂಘಟನೆಯ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಉತ್ತಮ ಅಂಕ ಪಡೆದ ವಿದ್ಯಾಥರ್ಿಗಳಿಗೆ ಸತ್ಕಾರಿಸಲಾಯಿತು. ಕಾರ್ಯಕ್ರಮವನ್ನು ಹನುಮಂತ ಕಂಟಿ  ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.