ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಆದೇಶ ಪತ್ರ
ಸವಣೂರ 19 : ತಾಕತ್ತಿದ್ದರೆ ವಿಜಯವಾಣಿ ಪತ್ರಿಕೆಯ ವರದಿಗಾರರಿಗೆ ಮೊದಲು ಬಸ್ ಪಾಸ್ ಕೊಡಿಸಲಿ ಎಂದು ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರವರಿಗೆ ರಾಜ್ಯ ಕಾನಿಪ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಸವಾಲು ಹಾಕಿದರು.ಅವರು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲೂಕಾ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಆದೇಶ ಪತ್ರ ನೀಡಿ ಮಾತನಾಡಿದರು. ರಾಜ್ಯ ಸರ್ಕಾರ ಸೆ.26 ರಂದು ಬಸ್ ಪಾಸ್ ಆದೇಶವನ್ನು ಹೊರಡಿಸಿ ಪತ್ರಕರ್ತರ ಕಿವಿ ಮೇಲೆ ಹೂವಿಡುವಂತ ಕೆಲಸ ಮಾಡಿದೆ. ಈ ಕರಾಳ ಆದೇಶವನ್ನು ಸ್ವಾಗತಿಸಿರುವ ತಗಡೂರ ಅವರ ನಿಲುವನ್ನು ಖಂಡಿಸಿದ ಅವರು ಆದೇಶದ ಪ್ರಕಾರ ಅಕಾರ್ಡೇಶನ ಕಾರ್ಡ್ ಹೊಂದಿರುವ ಪತ್ರಕರ್ತರಿಗೆ ಮಾತ್ರ ಬಸ್ ಪಾಸ್ ಸೌಲಭ್ಯ ಸಿಗಲಿದೆ. ಇಲ್ಲವೇ ಪತ್ರಕರ್ತರು ಬಸ್ ಪಾಸ್ ಪಡೆಯಬೇಕಿದ್ದಲ್ಲಿ ಸಂಪಾದಕರು ಇಲ್ಲವೇ ಪತ್ರಿಕಾ ಮಾಲೀಕರು ನಾಲ್ಕು ವರ್ಷಗಳ ಅವಧಿಗೆ ಖಾಯಂ ನೇಮಕಾತಿ ಆದೇಶ ಕೇಳಿದೆ. ಆದ್ದರಿಂದ ತಗಡೂರ ಅವರೇ ಕಾರ್ಯ ನಿರ್ವಹಿಸುವ, ವಿಜಯವಾಣಿಯ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದ ಪತ್ರಕರ್ತರಿಗೆ ಖಾಯಂ ಆದೇಶ ಕೊಡಿಸಿ ಬಸ್ ಪಾಸ್ ಕೊಡಿಸಿದ್ದೇ ಆದಲ್ಲಿ ನಾನುಪತ್ರಿಕಾ ವರದಿ ಮಾಡುವುದು ಸೇರಿದಂತೆ ಪತ್ರಕರ್ತರ ಸಂಘಟನೆ ತೋರೆದು ಸನ್ಯಾಸ ಸ್ವೀಕರಿಸಿಲಿದ್ದೇನೆ. ನನ್ನ ಸವಾಲನ್ನು ತಗಡೂರ ಅವರು ಸ್ವಿಕರಿಸಿ ಎಲ್ಲರಿಗೂ ಬಸ್ ಪಾಸ್ ನೀಡಿಸುವಲ್ಲಿ ಮುಂದಾಗುವರೇ ಇಲ್ಲವೇ ನನ್ನ ಸವಾಲಿಗೆ ಉತ್ತರಿಸುವರೇ. 90 ವರ್ಷದ ಹಳೆ ಪತ್ರಕರ್ತರ ಸಂಘಟನೆಯ ಜವಾಬ್ದಾರಿ ಹೊತ್ತವರು ಈ ರೀತಿ ಹೇಳಿಕೆ ಕೊಟ್ಟು ಪತ್ರಕರ್ತರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಟ್ಟು ಬಿಡುವಂತೆ ಕಿಡಿ ಕಾರಿದರು.ಜಿಲ್ಲಾಧ್ಯಕ್ಷ ಬಸವಂತಪ್ಪ ಹುಲ್ಲತ್ತಿ ಮಾತನಾಡಿ ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಅನನ್ಯವಾದುದು,ಬಿಕ್ಕಟ್ಟಿನ ಸಂದರ್ಭಲ್ಲೂ ಪತ್ರಕರ್ತರು ಘನತೆ ಕಾಪಾಡಿಕೊಳ್ಳುವುದು ಸವಾಲಾಗಿದ್ದು ಪರಿಪಾಲಿಸಬೇಕು.ಪತ್ರಿಕೆ ಉದ್ಯಮದ ಸ್ವರೂಪ ಪಡೆದ ಬಳಿಕ ಪತ್ರಕರ್ತರ ಬದುಕು ಹಿಂದಿನಂತೆ ಸುಲಭವಾಗಿಲ್ಲ. ಸತ್ಯವಾದ ಶುದ್ಧ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯವಾಗಿದ್ದು ಪ್ರಾಮಾಣಿಕವಾಗಿ ನಿಭಾಯಿಸಬೇಕು ಎಂದರು.ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಎಸ್.ಎಸ್. ಪಾಟೀಲ, ಕಾರ್ಯದರ್ಶಿ ಬಿ.ಕೆ.ಶರಣಬಸವ, ಡಿ.ಎಂ.ಬುರಡಿ ಇದ್ದರು.