ಕಾರವಾರ ಜಿಲ್ಲಾ ನ್ಯಾಯಾಲಯದಿಂದ ಆದೇಶ : ಲಂಚಪಡೆದವರಿಗೆ ಜಾಮೀನು ಇಲ್ಲ
Order from Karwar District Court: No bail for those who took bribes
ಕಾರವಾರ 25: ಮೂರು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬಂಧಿತರಾದ ಶಿರಸಿ ನಗರಸಭೆಯ ಕಂದಾಯ ನೀರೀಕ್ಷಕ ರಾಮಚಂದ್ರ ವರ್ಣೇಕರ್, ಮತ್ತು ಬಿಜೆಪಿ ಸದಸ್ಯ ಗಣಪತಿ ನಾಯ್ಕ ರ ಜಾಮೀನು ಅರ್ಜಿಗಳನ್ನು ಗೌರವಾನ್ವಿತ ಸೆಷನ್ಸ್ ಮತ್ತು ವಿಶೇಷ ನ್ಯಾಯಾಧೀಶರಾದ ಡಿ.ಎಸ್.ವಿಜಯಕುಮಾರ್ ತಿರಸ್ಕರಿಸಿದ್ದಾರೆ.
ಗಣಪತಿ ಹಾಗೂ ರಾಮಚಂದ್ರ ಜಾಮೀನಿಗಾಗಿ ತಮ್ಮ ವಕೀಲರ ಮೂಲಕ ಅರ್ಜಿ ಹಾಕಿದ್ದರು. ಲೋಕಾಯುಕ್ತರ ಪರ ಕಾರವಾರದ ವಕೀಲರಾದ ಎಲ್.ಎಂ.ಪ್ರಭು ವಾದಿಸಿದ್ದರು. ಜಮೀನು ನೀಡದಂತೆ ವಾದಿಸಿದ್ದರು . ಇಬ್ಬರು ಪ್ರಭಾವಿಗಳಾಗಿದ್ದು, ಸಾಕ್ಷಿನಾಶ ಹಾಗೂ ಬೆದರಿಕೆಯ ಸಾಧ್ಯತೆಗಳನ್ನು ನ್ಯಾಯಾಧೀಶರಿಗೆ ಮನವರಿಕೆ ಮಾಡಿದ್ದರು . ವಾರದ ಹಿಂದೆ ಶಿರಸಿಯಲ್ಲಿ ನಡೆದ ಲೋಕಾಯುಕ್ತರ ದಾಳಿಯಲ್ಲಿ ಆರೋಪಿಗಳು ಕಾರ್ ನಲ್ಲಿ ಕುಳಿತು ಮೂರು ಲಕ್ಷ ರೂ.ಲಂಚ ಪಡೆಯುವಾಗ, ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು . ನಾಗರಿಕ ರಮೇಶ್ ಹೆಗಡೆ ಎಂಬುವವರ ಲೀಜ್ ಆಸ್ತಿಯ ಬಗ್ಗೆ ತಕರಾರು ಇದೆ. ಅದನ್ನು ಸರಿಪಡಿಸುವುದಾಗಿ ಹೇಳಿ, ಹಣದ ಬೇಡಿಕೆ ಇಟ್ಟಿದ್ದರು. ರಮೇಶ್ ಹೆಗಡೆ ನಗರಸಭೆಯ ನೋಟೀಸ್ ಗಳ ವಿರುದ್ಧ ಕೋರ್ಟಗೆ ಹೋಗಿ ತಡೆಯಾಜ್ಞೆ ತಂದಿದ್ದರು. ಆದರೂ ಸಹ ನಗರಸಭೆಯ ಕಂದಾಯ ಅಧಿಕಾರಿ ರಾಮಚಂದ್ರ , ಸದಸ್ಯ ಗಣಪತಿ ,ಜಂಟಿಯಾಗಿ ರಮೇಶ್ ಹೆಗಡೆಗೆ ನೋಟೀಸ್ ನೀಡಿ,ಭಯ ಹುಟ್ಟಿಸಿ, ಹಣ ಕೀಳಲು ಯತ್ನ ನಡೆಸಿದ್ದರು .
ಈ ಸಂಬಂಧ ರಮೇಶ್ ಹೆಗಡೆ ಲೋಕಾಯುಕ್ತಕ್ಕೆ ದೂರು ನೀಡಿ, ಲಂಚದ ಕುಳಗಳನ್ನು ಬಲೆಗೆ ಕೆಡವಿದ್ದರು. ಈಗ ಲಂಚ ಪಡೆದ ಇಬ್ಬರೂ ಬಂಧನದಲ್ಲಿದ್ದಾರೆ. ಕಾರವಾರ ಕಾರಾಗೃಹದಲ್ಲಿ ಲಂಚಪಡೆದವರನ್ನು ಇಡಲಾಗಿದೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 