ಕೊಪ್ಪಳ ಇಂದಿರಾ ಕ್ಯಾಂಟೀನ್ ಹಿಂದಿನ ಮೌಲಾನಾ ಆಜಾದ್ ಶಾಲೆ ಸ್ಥಳಾಂತರ ಮಾಡಲು ವಿರೋಧ

ಕೊಪ್ಪಳ ಇಂದಿರಾ ಕ್ಯಾಂಟೀನ್ ಹಿಂದಿನ ಮೌಲಾನಾ ಆಜಾದ್ ಶಾಲೆ ಸ್ಥಳಾಂತರ ಮಾಡಲು ವಿರೋಧ  Opposition to relocation of Maulana Azad School

ಕೊಪ್ಪಳ  15: ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಸರ್ದಾರ್ ಗಲ್ಲಿ ಶಾಲಾ ಪಾಲಕರ ಸಭೆಯಲ್ಲಿ ಶಾಲೆ ಸ್ಥಳಾಂತರಕ್ಕೆ ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು.    ನಗರದ ಇಂದಿರಾ ಕ್ಯಾಂಟೀನ್ ಹಿಂದೆ ಇರುವ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಸರ್ದಾರ್ ಗಲ್ಲಿ ಶಾಲಾ ಪಾಲಕರ ಹೋರಾಟ ಸಮಿತಿ ಅಧ್ಯಕ್ಷ ಮುನೀರ್ ಅಹ್ಮದ್ ಸಿದ್ದೀಕಿ ಮಾತನಾಡಿ ಎಲ್ಲಾ ಪಾಲಕರ ಅಭಿಪ್ರಾಯದಂತೆ ಈಗಿರುವ ಜಾಗದಲ್ಲೇ ಮೌಲಾನಾ ಆಜಾದ್ ಶಾಲೆ ನಿರ್ಮಾಣ ಮಾಡಲು ಆಗಸ್ಟ್‌ ನಾಲ್ಕರಂದು ಕೊಪ್ಪಳಕ್ಕೆ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸೋಣ ಎಂದು ಹೇಳಿದರು.   ಸಮಿತಿಯ ಉಪಾಧ್ಯಕ್ಷ ಅಯ್ಯೂಬ್ ಅಡ್ಡೆ ವಾಲೆ ಮಾತನಾಡಿ ನಮ್ಮ ಮಕ್ಕಳಿಗೆ ಇದೇ ಶಾಲೆಯಲ್ಲಿ ಓದಲು ಮುಂದುವರಿಸುತ್ತೇವೆ, ಬೇರೆ ಎಲ್ಲೂ ಸೂಕ್ತ ಜಾಗ ಇಲ್ಲ. ಈ ಭಾಗದ ಮಕ್ಕಳಿಗೆ ಶಾಲೆ ಅನುಕೂಲಕರವಾಗಿದೆ. ಯಾವುದೇ ಕಾರಣಕ್ಕೂ ಸ್ಥಳಾಂತರ ಸಹಿಸುವದಿಲ್ಲ ಎಂದು ಹೇಳಿದರು.    ಸಲೀಮ್ ಖಾದ್ರಿ ಮಾತನಾಡಿ ಮೌಲಾನಾ ಆಜಾದ್ ಶಾಲೆ ಮಂಜೂರದಾಗಿನಿಂದ ಒಂದಿಲ್ಲೊಂದು ಸಮಸ್ಯೆಗಳಿಂದ ಬಳಲುತ್ತಿದೆ. ಶಾಲೆಗೆ ಕಟ್ಟಡವಿಲ್ಲ. ಮೂಲಭೂತ ಸೌಲಭ್ಯಗಳಿಲ್ಲ. ಇದೇ ಜಾಗೆಯಲ್ಲಿ ಕಟ್ಟಡ ನಿರ್ಮಾಣ ಆಗಬೇಕು. ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದು ಹೇಳಿದರು.    

ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್‌.ಎ.ಗಫಾರ್ ಮಾತನಾಡಿ ಅಲ್ಪಸಂಖ್ಯಾತ ಸಮುದಾಯ ಮತ ಹಾಕಿ ಶಾಸಕರನ್ನು. ಸಂಸದರನ್ನು ಆಯ್ಕೆ ಮಾಡಲಾಗಿದ್ದು ಅವರು ಅಲ್ಪಸಂಖ್ಯಾತರ ಮಕ್ಕಳಿಗಾಗಿ 2017-18ರಲ್ಲಿ ಮಂಜುರಾದ ಮೌಲಾನಾ ಆಜಾದ್ ಶಾಲೆ ಸರ್ದಾರ್ ಗಲ್ಲಿಯಲ್ಲಿ ಆರಂಭವಾಗಿ 2021-22 ರಲ್ಲಿ ಇಂದಿರಾ ಕ್ಯಾಂಟೀನ್ ಹಿಂದೆ ಬಂದಿದೆ. ಅಂದಿನಿಂದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಅವೈಜ್ಞಾನಿಕವಾದ ಚಿಕ್ಕ ನಾಲ್ಕು ಕೊಠಡಿಗಳನ್ನು ನಿರ್ಮಿಸಿದ್ದು. ಅಲ್ಲಿ ಜಾಗದ ಕೊರತೆ ಇದೆ. ಈಗ ಇದ್ದ ಸ್ಥಳದಲ್ಲಿ ಅಲ್ಪಸಂಖ್ಯಾತರ ಮಕ್ಕಳಿಗಾಗಿ ಮೌಲಾನಾ ಆಜಾದ್ ಶಾಲಾ ಕಟ್ಟಡ ಕಟ್ಟಲು ಶಾಸಕರು.ಸಂಸದರು ಮುಂದೆ ಬರಬೇಕು ಎಂದು ಒತ್ತಾಯಿಸಿದರು.     

 ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಮೀರ್ ಅಲಿ ಮಾತನಾಡಿ ತಮ್ಮ ಎಲ್ಲರ ಅಭಿಪ್ರಾಯ ಶಾಲೆ ಇಲ್ಲೇ ಇರಲಿ ಎಂದು ಹೇಳುತ್ತಿದ್ದೀರಿ. ಶಾಲಾ ಪಾಲಕರು ಕೈಗೊಳ್ಳುವ ನಿರ್ಣಯದಂತೆ ಶಾಲಾ ವಾತಾವರಣಕ್ಕೆ ಹೊಂದುವ ಶಾಶ್ವತ ಜಾಗದ ವ್ಯವಸ್ಥೆ ಮಾಡಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.    ಸಭೆಯಲ್ಲಿ ಶಾಮೀದ್ ಕಿಲ್ಲೆದಾರ್‌.ಅಖಾನಿ ಖಾಝಿ. ಹುಸೇನ್ ಪಾಶಾ ಮಾನವಿ. ನಝೀರ್ ಅಹ್ಮದ್ ಬೇಗ. ಪ್ರಭಾರಿ ಮುಖ್ಯೋಪಾಧ್ಯಾಯ ಲಾಲ್ ಸಾಬ್ ವಾಲಿಕಾರ. ನಗರ ಸಭೆ ಸದಸ್ಯ ಅರುಣ ಶೆಟ್ಟಿ. ವಸಿ ರೆಹಮಾನ್‌. ಮೈನುದ್ದೀನ್ ಮೇಸ್ತ್ರಿ. ಸೈಯ್ಯದ್ ಅಬ್ದುಲ್ ನಯೀಮ್‌. ಝಹುರ್ ಮೇಸ್ತ್ರಿ. ಗಾಳೆಪ್ಪ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.