ಶೇಡಬಾಳ ಸನ್ಮತಿ ವಿದ್ಯಾಲಯದಲ್ಲಿ ಬಿಳ್ಕೋಡುವ, ಬಹುಮಾನ ವಿತರಣಾ ಸಮಾರಂಭ; ವಿದ್ಯಾರ್ಥಿಗಳು ಕಲಿತ ಶಾಲೆಯ ಕೀರ್ತಿ ಹೆಚ್ಚಿಸಬೇಕು: ಮಹಾವೀರ ಜೀರಗ್ಯಾಳ..!
ಕಾಗವಾಡ 15 : ವಿದ್ಯಾರ್ಥಿಗಳು ಗುರುಗಳ ದಂಡನೆಯನ್ನು ಪ್ರಸಾದದಂತೆ ಸ್ವೀಕರಿಸಿ, ಶಿಕ್ಷಣ ಪಡೆದು, ತಮಗೆ ಶಿಕ್ಷಣ ನೀಡಿದ ಗುರುಗಳು ಹೆಮ್ಮೆ ಪಡೆಯುವಂತೆ ಬೆಳೆಯಬೇಕು. ಜೊತೆಗೆ ತಾವು ಕಲಿತ ಶಾಲೆಯ ಕೀರ್ತಿ ಹೆಚ್ಚಿಸಬೇಕೆಂದು ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದೈಹಿಕ ಶಿಕ್ಷಣ ಪರೀವಿಕ್ಷಕ ಮಹಾವೀರ ಜೀರಗ್ಯಾಳ ಹೇಳಿದ್ದಾರೆ. ಶನಿವಾರ ದಿ. 15 ರಂದು ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಸನ್ಮತಿ ವಿದ್ಯಾಲಯದ ಸನ್ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬಿಳ್ಕೋಡುವ ಮತ್ತು ಬಹುಮಾನ ವಿತರಣೆ ಮತ್ತು ಸತ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡುತ್ತಿದ್ದರು. ನಾನು ಕೂಡಾ ಇದೇ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಿ, ಇಂದು ಶಾಲೆಯ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದು, ನನಗೆ ಅತೀವ ಸಂತಸವನ್ನು ಉಂಟು ಮಾಡಿದೆ. ನೀವು ಕೂಡಾ ಇಲ್ಲಯೇ ಶಿಕ್ಷಣ ಪಡೆದು ಉನ್ನತ ಶಿಕ್ಷಣಕ್ಕೆ ಬೇರಡೆಗೆ ಹೋಗುತ್ತಿದ್ದು, ಚನ್ನಾಗಿ ವಿದ್ಯಾಭ್ಯಾಸ ಮಾಡಿ ತಾವು ಕಲಿತ ಶಾಲೆಯ ಕೀರ್ತಿ ಹೆಚ್ಚಿಸಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಲೆಯ ಇನ್ನೋರ್ವ ಹಳೆಯ ವಿದ್ಯಾರ್ಥಿ ಹಾಗೂ ಕೊಲ್ಲಾಪೂರ-ವಾಲಿವಾಡಿಯಲ್ಲಿ ಹೈಸ್ಕೂಲ್ ಸಹಶಿಕ್ಷಕ ಉತ್ತಮ ತಳವಾರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡಲಾಯಿತು. ಅಧ್ಯಕ್ಷತೆಯನ್ನು ಸನ್ಮತಿ ವಿದ್ಯಾಲಯದ ಚೇರಮನ್ನ ಸನ್ಮತಿ ಪಾಟೀಲ ವಹಿಸಿದ್ದರು. ಬಳಿಕ ಅತಿಥಿಗಳನ್ನು ಗಣ್ಯರನ್ನು ಮತ್ತು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಈ ವೇಳೆ ಎಸ್‌ಎಸ್‌ಎಸ್ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ, ಉಪಾಧ್ಯಕ್ಷ ಅಜೀತ ನಾಂದ್ರೆ ನಿರ್ದೇಶಕರಾದ ಎಲ್.ವ್ಹಿ. ಸಂಗೋರಾಮ ಆರ್.ವ್ಹಿ. ಸಂಗೋರಾಮ ಎಸ್.ಎಂ. ಕುಸನಾಳೆ, ಅಶೋಕ ಪಾಟೀಲ ಮಹಾವೀರ ಪಾಟೀಲ ಸನ್ಮತಿ ಪಾಟೀಲ ಅಶ್ವತಕುಮಾರ ಪಾಟೀಲ ಕುಮಾರ ಮಾಲಗಾಂವೆ, ರಾಹುಲ ಸವದತ್ತಿ, ಸಾವಿತ್ರಿ ದೊಡ್ಡನ್ನವರ ಅಕ್ಕಾತಾಯಿ ಮುಜಾವರ ಸುನೀತಾ ಮಾಕನ್ನವರ ಸೇರಿದಂತೆ ಪಟ್ಟಣದ ಮುಖಂಡರು ಶಾಲೆಯ ಎಲ್ಲ ಶಿಕ್ಷಕ-ಶಿಕ್ಷಕೇತರ ವೃಂದದವರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.