ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರವನ್ನು ನೀಡಿದಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ : ಎಸ್‌.ಎಸ್‌.ಖೇಮಲಾಪುರೆ

ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರವನ್ನು ನೀಡಿದಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ : ಎಸ್‌.ಎಸ್‌.ಖೇಮಲಾಪುರೆ Only when teachers impart education as well as culture to students can they build a bright future: S

ಘಟಪ್ರಭಾ 06: ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ ಎಂದೂ ಮರೆಯಲಾಗದು ಎಂದು ನಿವೃತ್ತ ಮುಖ್ಯೋಪಾಧ್ಯಾಯಿನಿ ಎಸ್‌.ಎಸ್‌.ಖೇಮಲಾಪುರೆ ಹೇಳಿದರು. ಅವರು ರವಿವಾರದಂದು ತಾಲೂಕಿನ ಶಿಂದಿಕುರಬೇಟ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ಜರುಗಿದ ಶಿಂದಿಕುರಬೇಟ ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸನ್ 2008 ರಿಂದ 2011ನೇ ಸಾಲಿನ ವಿದ್ಯಾರ್ಥಿನಿಯರಿಂದ ಗುರುವಂದನಾ ಹಾಗೂ ಸ್ನೇಹಿತೆಯರ ಪುನರ್ಮಿಲನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರವನ್ನು ನೀಡಿದಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರಲ್ಲದೇ ಕಳೆದ ಹಲವಾರು ವರ್ಷಗಳ ಹಿಂದೆ ನಮ್ಮ ಶಾಲೆಯಲ್ಲಿ ಶಿಕ್ಷಣ ಕಲಿತು, ಇಂದು ವಿದ್ಯೆ ಹಾಗೂ ಜ್ಞಾನ ನೀಡಿದ ಗುರುಗಳನ್ನು ಒಂದೇ ವೇದಿಕೆಯಲ್ಲಿ ಅವರನ್ನು ಅಭಿಮಾನ ಹಾಗೂ ಗೌರವದಿಂದ ಸನ್ಮಾನಿಸಿದ ಕ್ಷಣ ನಮ್ಮ ಜೀವನದಲ್ಲಿ ಎಂದೂ ಮರೆಯಲಾಗದ ಸಂಗತಿಯಾಗಿದೆ.

ಈ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರವನ್ನು ಕಲಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಂಗಪ್ಪ ಬಂಬಲಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಸ್‌.ಹಿತ್ತಲಮನಿ, ಎಂ.ಎಂ.ಹಾದಿಮನಿ, ಬಿ.ಎಂ.ಓಬನ್ನವರ, ಪ್ರಾಥಮಿಕ ಶಾಲೆಯ ಪ್ರಧಾನಗುರು ಎಸ್‌.ಡಿ.ಹಂಚಿನಾಳ, ಎಂ.ವೈ.ಹಣಮಂತಗೋಳ, ಬಿ.ಎಲ್‌.ಪಡಸಲಗಿ, ಎಚ್‌.ಎಸ್‌.ಬೆಣಚಿನಮರಡಿ, ಎನ್‌.ಎನ್‌.ಕುಲಕರ್ಣಿ, ಆರ್‌.ಎಂ. ಹಿರೇಮನಿ, ಎಸ್‌.ಎಸ್‌.ಪೂಜೇರಿ, ಐ.ಎಂ.ಮುನ್ನೋಳಿ, ಆರ್‌.ಎಚ್‌.ತುಳಸಿಗೇರಿ,

ಎಸ್‌.ಆರ್‌. ಅಲ್ಲಯ್ಯನವರಮಠ, ಕೆ.ವಿ.ಕರನೆಲ್ಲಿ, ಎಸ್‌.ಡಿ.ಎಂ.ಸಿ ಅಧ್ಯಕ್ಷರುಗಳಾದ ಶ್ರೀಧರ ಕಂಬಾರ, ದಯಾನಂದ ಕಳಸನ್ನವರ, ಬಸವರಾಜ ಗೋಕಾಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ತಮ್ಮ ಶಾಲೆಯ ದಿನಗಳನ್ನು ಸ್ಮರಿಸಿಕೊಂಡರು. ವಿದ್ಯೆ ಕಲಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮವನ್ನು ಸವಿತಾ ನಂದರಗಿ ಸ್ವಾಗತಿಸಿದರು. ಸುಶೀಲಾ ಮಾಳವ್ವಗೋಳ ನಿರೂಪಿಸಿದರು. ಸವಿತಾ ಹುಣಶ್ಯಾಳಿ ವಂದಿಸಿದರು.