ಬೆಂಗಳೂರು, ಸೆ.16 ವೈದ್ಯಕೀಯ ಪದವಿ ಪಡೆದ ಕೂಡಲೇ ಉತ್ತಮ ವೈದ್ಯರಾಗಲು ಸಾಧ್ಯವಿಲ್ಲ. ವೃತ್ತಿ ಬದುಕಿನಲ್ಲಿ ಮಾಡುವ ಸೇವೆಯಿಂದ ಮಾತ್ರ ಶ್ರೇಷ್ಠ ವೈದ್ಯರಾಗಲು ಸಾಧ್ಯ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) 24 ನೇ ಘಟಿಕೋತ್ಸವ ಪದವಿ ಪ್ರದಾನ ಕಾರ್ಯಕ್ರಮದಲ್ಲಿ, 176 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ ವಿವಿಧ ವಿಭಾಗದಲ್ಲಿ ಸಾಧನೆ ಮಾಡಿದ 14 ಮಂದಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
ವೈದ್ಯಕೀಯ ಪದವಿ ಪಡೆಯಲು ಕಠಿಣ ಪರಿಶ್ರಮ ಇರಬೇಕು. ಈಗ ಪದವಿ ಪಡೆದ ಕೂಡಲೇ ಒಳ್ಳೆಯ ವೈದ್ಯರೆನಿಸಿಕೊಳ್ಳಲು ಸಾಧ್ಯವಿಲ್ಲ. ವೃತ್ತಿ ಬದುಕಿನಲ್ಲಿ ಎದುರಾಗುವ ಹಲವು ಸವಾಲುಗಳ ನಡುವೆ ನೀಡುವ ಉತ್ತಮ ಸೇವೆಯಿಂದ ಒಳ್ಳೆಯ ವೈದ್ಯರಾಗಿ ಹೆಸರು ಮಾಡಲು ಸಾಧ್ಯವಾಗುತ್ತದೆ ಎಂದು ಯುವ ವೈದ್ಯರಿಗೆ ಕಿವಿಮಾತು ಹೇಳಿದರು.
ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆರೋಗ್ಯ ಸುರಕ್ಷತೆಗೆ ವಿಮೆ ಒದಗಿಸುವ ಬಹು ನಿರೀಕ್ಷೆಯ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಈವರೆಗೆ 10 ಲಕ್ಷ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. 50 ಲಕ್ಷ ಮಂದಿ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ನಿಮ್ಹಾನ್ಸ್ ಸಂಸ್ಥೆಯು ಈ ಯೋಜನೆಯಡಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ 17 ಪ್ಯಾಕೇಜ್ಗಳಲ್ಲಿ ಆರೋಗ್ಯ ಸೇವೆ ನೀಡುತ್ತಿದೆ. ಇನ್ನು ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆ, ಜನೌಷಧ ಕೇಂದ್ರ ಸ್ಥಾಪನೆಯಿಂದ ಹೆಚ್ಚಿನ ಜನರಿಗೆ ಅನುಕೂಲವಾಗಿದೆ. ಇನ್ನು ಹಳ್ಳಿಗಾಡುಗಳ ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 175 ವೈದ್ಯಕೀಯ ಕಾಲೇಜು ಸ್ಥಾಪಿಸುವ ದೃಢ ನಿಧರ್ಾರ ಕೈಗೊಂಡಿದೆ ಎಂದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಪದವಿ ಸ್ವೀಕರಿಸುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಪದವಿ ಪಡೆದ ವಿದ್ಯಾಥರ್ಿಗಳೆಲ್ಲರೂ ದೇಶದ ಆಸ್ತಿ, ರೋಗಿಯ ನೋವನ್ನು ನಿವಾರಿಸುವ ಶಕ್ತಿ ನಿಮಗಿದೆ. ನಿಮ್ಹಾನ್ಸ್ ಮೊದಲ ಬಾರಿಗೆ ಆರೋಗ್ಯ ಆಭಿಯಾನದಡಿ ಮಕ್ಕಳ ಮಾನಸಿಕ ಆರೋಗ್ಯ ರಕ್ಷಣೆಗಾಗಿ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ. ಇದು ದೇಶದ ಒಂದು ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಇದರ ಅಭಿವೃದ್ಧಿಗೆ ಎಲ್ಲರ ಸಹಕಾರವೂ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ಸಂಸ್ಥೆಯ ನಿದರ್ೆಶಕ ಡಾ.ಬಿ.ಎನ್ ಗಂಗಾಧರ್, ಪ್ರೀತಿ ಸುಧಾನಿ ಹಾಗೂ ಸಂಸ್ಥೆಯ ವಿವಿಧ ವಿಭಾಗದ ಡೀನ್ ಗಳು ಮುಖ್ಯಸ್ಥರು ಭಾಗವಹಿಸಿದ್ದರು.