ಬೀಜಿಂಗ್, ಏಪ್ರಿಲ್ 27 (ಸ್ಪುಟ್ನಿಕ್) ಚೀನಾದಲ್ಲಿ ಕಳೆದ 24 ತಾಸಿನಲ್ಲಿ ಕೇವಲ 3 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿದ್ದು, ಈ ಅವಧಿಯಲ್ಲಿ 80 ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ಸೋಮವಾರ ತಿಳಿಸಿದೆ.3 ಹೊಸ ಪ್ರಕರಣಗಳಲ್ಲಿ ಎರಡು ವಿದೇಶಕ್ಕೆ ಹೋಗಿ ಬಂದವರಾಗಿದ್ದಾರೆ. ಆಯೋಗದ ಮಾಹಿತಿಯಂತೆ ಚೀನಾದಲ್ಲಿ ಸದ್ಯ ದೃಢಪಟ್ಟ ಒಟ್ಟು ಪ್ರಕರಣಗಳ ಒಟ್ಟು ಸಂಖ್ಯೆ 82,830ರಷ್ಟಿದ್ದು, ಸಾವಿನ ಸಂಖ್ಯೆ 4,633ರಷ್ಟಿದೆ.
ಚೀನಾದ ಆಸ್ಪತ್ರೆಗಳಿಂದ 77,400 ಕ್ಕೂ ಹೆಚ್ಚು ಕೊವಿಡ್-19 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಸದ್ಯ, 700 ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ 50 ಕ್ಕೂ ಹೆಚ್ಚು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ.ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ ಲಕ್ಷಣರಹಿತ ಕರೋನವೈರಸ್ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಒಬ್ಬ ವ್ಯಕ್ತಿ ವಿದೇಶ ಪ್ರವಾಸಮಾಡಿದವರಾಗಿದ್ದಾರೆ. ಚೀನಾದಲ್ಲಿ ವಿದೇಶಪ್ರವಾಸ ಹಿನ್ನೆಲೆಯ ಕೊರೊನವೈರಸ್ ಪ್ರಕರಣಗಳ ಸಂಖ್ಯೆ 1,636ರಷ್ಟಿದೆ.ಭಾನುವಾರ ಚೀನಾದ ಆರೋಗ್ಯ ಅಧಿಕಾರಿಗಳು 11 ಹೊಸ ಕರೋನವೈರಸ್ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪೈಕಿ ಐದು ಪ್ರಕರಣಗಳು ವಿದೇಶಕ್ಕೆ ಹೋಗಿಬಂದವರಾಗಿದ್ದಾರೆ. ಇನ್ನೂ 48 ಜನರು ಕೊವಿಡ್-19 ನಿಂದ ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.