ಕಠ್ಮಂಡು, ಅ 4: ಈರುಳ್ಳಿ ಬೆಲೆಗಳು ಗಗನಕ್ಕೇರಿದ್ದು ಜಗತ್ತಿನಾದ್ಯಂತ ಹಾಹಾಕಾರ ಉಂಟಾಗಿದೆ. ಕಠ್ಮಂಡುನಿಂದ ಹಿಡಿದು ಬಾಂಗ್ಲಾ, ಕೊಲಂಬೋವರೆಗೂ ಇದರ ಬಿಸಿ ತಟ್ಟಿದ್ದು ವಿದೇಶಿಯರು ಸಹ ವಿಪರೀತ ಬೆಲೆಗೆ ಬೆಚ್ಚಿಬೀಳುತ್ತಿದ್ದಾರೆ. ಜಗತ್ತಿನ ಅತಿ ದೊಡ್ಡ ಈರುಳ್ಳಿ ಮಾರಾಟಗಾರನಾಗಿರುವ ಭಾರತ ಈಗ ಈರುಳ್ಳಿ ರಫ್ತನ್ನು ನಿಷೇಧ ಮಾಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ಮುಂಗಾರು ಮಳೆಯ ಅಬ್ಬರಕ್ಕೆ ಕಠಾವು ವಿಳಂಬವಾಗಿದ್ದರೆ ಬಹುತೇಕ ರಾಜ್ಯದಲ್ಲಿ ಬೆಳೆ ಹಾಳಾಗಿದೆ. ಇದು ಅತ್ಯಂತ ಬಿರುಸಿನ ಬೆಲೆಯೇರಿಕೆ ಎಂದು ಕಠ್ಮಂಡು ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುವ ಗೃಹಿಣಿಯೊಬ್ಬರು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಕಳೆದ ತಿಂಗಳಿಗಿಂತಲೂ ಈರುಳ್ಳಿ ಬೆಲೆ ಈಗ ದುಪ್ಪಟ್ಟಾಗಿದೆ. ಪಾಕಿಸ್ತಾನದ ಕೋಳಿ ಸಾರಿಗಾಗಲಿ ಬಾಂಗ್ಲಾದ ಬಿರಿಯಾನಿಯಾಗಲಿ ಅಥವಾ ಭಾರತದ ಸಾಂಬಾರ್ ಇನ್ನಿತರೆ ಅಡುಗೆಗಾಗಿ ಭಾರತೀಯ ಈರುಳ್ಳಿಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.