ಅಂಬೇಡ್ಕರ್ ಅವರನ್ನು ಕೇವಲ ವ್ಯಕ್ತಿಯಾಗಿ ನೋಡದೆ, ಅವರ ವಿಚಾರಧಾರೆ ಅರಿತುಕೊಳ್ಳಬೇಕು: ಪ್ರೊ. ಎನ್.ಎಂ. ಸಾಲಿ
One should not view Ambedkar merely as an individual but must understand his ideology: Prof. N.M. Sa
ಲೋಕದರ್ಶನ ವರದಿ
ಬಳ್ಳಾರಿ೨೪: ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕೇವಲ ವ್ಯಕ್ತಿಯಾಗಿ ನೋಡದೆ, ಅವರ ವೈಚಾರಿಕತೆ, ತತ್ವಜ್ಞಾನ ಹಾಗೂ ಸಾಮಾಜಿಕ ದೃಷ್ಟಿಕೋನವನ್ನು ಆಳವಾಗಿ ಅರ್ಥೆöÊಸಿಕೊಳ್ಳುವ ಅಗತ್ಯವಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ. ಎನ್.ಎಂ. ಸಾಲಿ ಹೇಳಿದರು.
ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಅಂಬೇಡ್ಕರ್ ಓದು’ ವಿಶೇಷ ಕಾರ್ಯಕ್ರಮ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪುಸ್ತಕ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಜೀವನಚರಿತ್ರೆಯನ್ನು ಓದುವುದರ ಜೊತೆಗೆ, ಅವರು ಸಮಾಜದಲ್ಲಿನ ಲೋಪದೋಷಗಳನ್ನು ಗುರುತಿಸಿ ಬರೆದ ಚಿಂತನೆಗಳು ಹಾಗೂ ಸಾಹಿತ್ಯವನ್ನು ಅಧ್ಯಯನ ಮಾಡುವುದು ಇಂದಿನ ಅಗತ್ಯವಾಗಿದೆ. ಅಂಬೇಡ್ಕರ್ ಅವರ ಪ್ರತಿಮೆಗಳು ಕೈಯಲ್ಲಿ ಪುಸ್ತಕ ಹಿಡಿದು ಮುನ್ನಡೆಯುವ ಸಂಕೇತ ನೀಡುತ್ತವೆ. ಇದು ಕೇವಲ ಶಾಲೆಗೆ ಹೋಗುವುದಕ್ಕಷ್ಟೇ ಸೀಮಿತವಾಗದೆ, ಜ್ಞಾನಾರ್ಜನೆಯ ಮೂಲಕ ವ್ಯಕ್ತಿ ಹಾಗೂ ಸಮುದಾಯದ ಸಂಸ್ಕöÈತಿಯನ್ನು ರಕ್ಷಿಸಿಕೊಳ್ಳುವ ಸಂದೇಶವಾಗಿದೆ ಎಂದು ಅವರು ಹೇಳಿದರು.
ಅಂಬೇಡ್ಕರ್ ಅವರ ಆಶಯಗಳು ನಿಜವಾಗಬೇಕಾದರೆ ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಪ್ರತಿಯೊಬ್ಬರೂ ಆಳವಾದ ಜ್ಞಾನ, ಅರಿವು ಹಾಗೂ ಸಮಾಜಮುಖಿ ಕರ್ತವ್ಯಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ದುಬಾರಿ ಮೊಬೈಲ್ಗಳು ಹಾಗೂ ಉಡುಪುಗಳಿಗೆ ಹೆಚ್ಚಿನ ಮಹತ್ವ ನೀಡುವ ಬದಲು, ತಮ್ಮ ಬದುಕನ್ನು ರೂಪಿಸಿಕೊಳ್ಳುವ ನೈಜ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಯುವಜನರು ತಾವು ಬಳಸುವ ಬಟ್ಟೆ, ಪೆನ್ನು ಹಾಗೂ ಮೊಬೈಲ್ಗಳ ಹಿಂದೆ ಪೋಷಕರ ಶ್ರಮ, ಬೆವರು ಮತ್ತು ತ್ಯಾಗವಿದೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.
ಜಗತ್ತಿನ ಇತಿಹಾಸದಲ್ಲೇ ಡಾ. ಅಂಬೇಡ್ಕರ್ ಅವರಷ್ಟು ವ್ಯಾಪಕವಾಗಿ ಅಧ್ಯಯನ ಮಾಡಿದ ಮತ್ತೊಬ್ಬ ವ್ಯಕ್ತಿಯನ್ನು ಕಾಣುವುದು ಕಷ್ಟ. ವಿವಿಧ ಕ್ಷೇತ್ರಗಳಲ್ಲಿ ಜ್ಞಾನಾರ್ಜನೆ ಮಾಡಿ, ನಿರಂತರ ಕಷ್ಟ-ನೋವುಗಳ ನಡುವೆಯೂ ದೇಶಕ್ಕೆ ದಾರಿದೀಪವಾದ ಆಧುನಿಕ ಜ್ಞಾನಿಯಾಗಿದ್ದರು. ತಮ್ಮ ಮೂಲ ಹೆಸರಿನ ಬದಲಿಗೆ ಗುರುಗಳ ಹೆಸರನ್ನು ಉಳಿಸಿಕೊಂಡು ಬೆಳೆದ ಅಂಬೇಡ್ಕರ್ ಅವರಂತೆ ನಾವೂ ನಮ್ಮ ಗುರುಗಳಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ಮೊದಲು ಉತ್ತಮ ನಾಗರಿಕರಾಗಬೇಕು. ಸಂಸ್ಕಾರಯುತ ಕುಟುಂಬವನ್ನು ಮುನ್ನಡೆಸುವ ಜವಾಬ್ದಾರಿಯುತ ನಾಯಕರಾಗಬೇಕು. ಇದೇ ಡಾ. ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅವರು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಹ್ಲಾದ್ ಚೌಧರಿ ಜಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ವೈವಿಧ್ಯಮಯ ಧರ್ಮ ಮತ್ತು ಸಂಸ್ಕöÈತಿಗಳನ್ನು ಹೊಂದಿರುವ ಭಾರತಕ್ಕೆ ಸಂವಿಧಾನವೇ ಅತ್ಯಂತ ಶ್ರೇಷ್ಠ ಗ್ರಂಥವಾಗಿದೆ. ದೇಶದ ಏಕತೆ ಹಾಗೂ ಸಮಾನತೆಗೆ ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನವೇ ಪ್ರಮುಖ ಆಧಾರವಾಗಿದೆ ಎಂದು ಹೇಳಿದರು.
ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಭಾಷಾ ಅವರು ವಿಶೇಷ ಉಪನ್ಯಾಸ ನೀಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಅವರನ್ನು ಜಾತಿಯ ಸಂಕೋಲೆಯಿAದ ಅಳೆಯುವುದು ತಪ್ಪು ಎಂದು ಅಭಿಪ್ರಾಯಪಟ್ಟರು.
ವಿದ್ಯಾವಂತ ಸಮಾಜದಲ್ಲಿಯೂ ಅಂಬೇಡ್ಕರ್ ಅವರನ್ನು ಕೇವಲ ಜಾತಿ ಅಥವಾ ಮೀಸಲಾತಿಗೆ ಸೀಮಿತಗೊಳಿಸುವ ಪ್ರವೃತ್ತಿ ಬೆಳೆಯುತ್ತಿರುವುದು ವಿಷಾದನೀಯ. ಪ್ರತಿದಿನ ಉದಯಿಸಿ ಮುಳುಗುವ ಸೂರ್ಯನಿಗಿಂತ ಭಿನ್ನವಾಗಿ, ಅಂಬೇಡ್ಕರ್ ಅವರು ಸಮಾಜವನ್ನು ನಿರಂತರವಾಗಿ ಬೆಳಗಿಸುವ ಶಾಶ್ವತ ಸೂರ್ಯನಾಗಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 