ಮಾನವೀಯ ಮೌಲ್ಯ ಬೆಳೆಸಿ ಕೊಂಡು ಜೀವನ ಸಾಗಿಸಬೇಕು: ಮಾಬು ಸಾಬ್ ಹೀರಾಳ

ಮಾನವೀಯ ಮೌಲ್ಯ ಬೆಳೆಸಿ ಕೊಂಡು ಜೀವನ ಸಾಗಿಸಬೇಕು: ಮಾಬು ಸಾಬ್ ಹೀರಾಳ One should cultivate human values ​​and lead a life: Mabu Saab Hira

ಕೊಪ್ಪಳ 6 : ಹಬ್ಬ ಹರಿ ದಿನಗಳ ಆಚರಣೆ ಮೂಲಕ ಪ್ರತಿಯೊಬ್ಬರಲ್ಲಿ ಮಾನವೀಯ ಮೌಲ್ಯ  ಬೆಳೆಸಿಕೊಂಡು ಜೀವನ ಸಾಗಿಸಬೇಕು ಅಂದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಕಿನ್ನಾಳ ಜಾಮಿಯಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಮಾಬು ಸಾಬ್ ಹೀರಾಳ ಹೇಳಿದರು.

ಅವರು ಶುಕ್ರವಾರ ತಾಲೂಕಿನ ಕಿನ್ನಾಳ ಗ್ರಾಮ ದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಜರುಗಿದ ಮೆಕ್ಕಾ ಮದೀನ ಸ್ಥಬ್ಧ ಚಿತ್ರಗಳ ಭವ್ಯ ಮೆರವಣಿಗೆ ಗಳ ನೇತೃತ್ವ ವಹಿಸಿ ಮಾತನಾಡಿದರು, ಮುಂದುವರೆದು ಮಾತನಾಡಿ ಪ್ರವಾದಿ ಪೈಗಂಬರ್ ಮೊಹಮ್ಮದ್ (ಸ) ರವರು ಮಾನವ ಕುಲಕ್ಕೆ ಶಾಂತಿಯ ಸಂದೇಶ ಸಾರಿದ್ದಾರೆ ಪರಸ್ಪರ ಎಲ್ಲರೂ ಸಹೋದರರು ಭಾತೃತ್ವ ಮತ್ತು ಭಾವ್ಯಕ್ಯತೆ ಬೆಳೆಸಿಕೊಂಡು ಜೀವನ ಸಾಗಿಸಬೇಕು ಎಲ್ಲಾ ಮನುಜರು ಒಂದೇ ತಂದೆ ತಾಯಿಯ ಮಕ್ಕಳು ಪರಸ್ಪರ ಎಲ್ಲರೊಂದಿಗೆ ಕೂಡಿಕೊಂಡು ಹಬ್ಬ ಹರಿದಿನಗಳ ಆಚರಣೆ ಮಾಡಬೇಕು, ಹಬ್ಬಗಳ ಆಚರಣೆಯಲ್ಲಿ ಉತ್ತಮ ಸಂಸ್ಕಾರ ಅಡಗಿರುತ್ತದೆ ಇಂದಿನ ಯುವ ಪೀಳಿಗೆಗೆ ಒಳ್ಳೆಯ ಸಂಸ್ಕಾರ ಕಲಿಸಿಕೊಡಬೇಕು, ನಮ್ಮಲ್ಲಿ ಜಾತಿ ಭೇದ ಇಲ್ಲ ಹಿಂದು ಮುಸ್ಲಿಂ ಭಾಯ್ ಭಾಯ್ ಎನ್ನುತ್ತಾ ಇಂದಿನ ಯುವ ಪೀಳಿಗೆಗೆ ಉತ್ತಮ ಸಂದೇಶ ಸಾರುವುದೇ ನಮ್ಮ ಉದ್ದೇಶವಾಗಿದೆ ಎಂದು ಕಿನ್ನಾಳ ಜಾಮಿಯಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾದ ಮಾಬು ಸಾಬ್ ಹೀರಾಳ ಹೇಳಿದರು, ಮೆಕ್ಕ ಮದೀನ ಸ್ತಬ್ಧ ಚಿತ್ರಗಳ ಭವ್ಯ ಮೆರವಣಿಗೆಯು ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಮಸೀದಿಗೆ ಬಂದು ತಲುಪಿತು ಒಳ್ಳೆಯ ಆಕರ್ಷಣೆ ಮತ್ತು ಶಿಸ್ತು ಬದ್ಧವಾಗಿ ಹಾಗೂ ಶಾಂತಿಯುತವಾಗಿ ಮೆರವಣಿಗೆ ಜರುಗಿತು ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮಾಜ ಬಾಂಧವರು ವಿಶೇಷವಾಗಿ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ,ನಂತರ ಮಸೀದಿ ಆವರಣದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಅನ್ನ ಸಂತರ​‍್ಣ ಜರುಗಿತು.

ಕಿನ್ನಾಳ ಗ್ರಾಮದ ಮುಸ್ಲಿಂ ಸಮುದಾಯದ ಭಾವೈಕ್ಯ ನಿಧಿ ಹಾಗೂ ಸಮುದಾಯದ ಅಧ್ಯಕ್ಷರಾಗಿರುವ ಮಾಬುಸಾಬ್ ಹಿರಾಳ ರವರ ಮಾರ್ಗದರ್ಶನ ಹಾಗೂ ಅಧ್ಯಕ್ಷತೆಯಲ್ಲಿ ಜರುಗಿದ ವಿವಿಧ ಕಾರ್ಯಕ್ರಮ ಹಾಗೂ ಮೆರವಣಿಗೆಯಲ್ಲಿ ಸಮಾಜದ ಉಪಾಧ್ಯಕ್ಷರಾದ ಇಮಾಮಸಾಬ್ ತಟಗಾರ, ಸಮಾಜದ ಮುಖಂಡರುಗಳಾದ ಶರೀಫ್ ಸಾಬ್ ಆರ್, ಯುನೂಸ ಸಾಬ್, ಖಾಜಾಸಾಬ್, ಸುಭಾನ್ ಸಾಬ್, ಅಬ್ದುಲ್ ರೆಹಮಾನ್, ಬಾಷು ಸಾಬ್ ಮೇಸ್ತ್ರಿ, ಹುಸೇನ್ ಸಾಬ್ ಕೆಇಬಿ, ಖಾಜಾ ವಲಿ, ಶಬ್ಬೀರ್, ಸಮಾಜದ ಯುವ ನಾಯಕರುಗಳಾದ ಮೆಹಬೂಬ್, ಮೈನು, ಸುಭಾನ್, ದಾವಲ್ ಸಾಬ್, ರಫಿ, ಸಲೀಂ, ರಫಿ ಇಟಗಿ, ಗೌಸ್, ಖಾಜಾ ವಲಿ, ಇಬ್ರಾಹಿಂ ಅಲ್ಲದೆ ಹಿಂದೂ ಸಮುದಾಯದ ನಾಯಕರುಗಳಾದ ಬಸವರಾಜ್ ಚಿಲ್ವಾಡಗಿ, ವೀರೇಶ್ ತಾವರಗೇರಿ, ವೀರಭದ್ರ​‍್ಪ ಗಂಜಿ, ಅಮರೇಶ್ ಉಪಲಾಪುರ, ಮಹಾದೇವಜ್ಜ ಹಿರೇಮಠ ಹಾಗೂ ಕಾಮನ ಕಟ್ಟೆ ಗೆಳೆಯರ ಬಳಗದ ಪದಾಧಿಕಾರಿಗಳು ಯುವಕರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡು ಪರಸ್ಪರ ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡರು