ಅವ್ಯವಸ್ಥೆಯ ಆಗರ ದಾಂಡೇಲಿ ಕನರ್ಾಟಕ ವನ್ ಕಛೇರಿ

ಲೋಕದರ್ಶನ ವರದಿ

ದಾಂಡೇಲಿ 11: ಮೂವತ್ತು ಸೌಲಭ್ಯಗಳನ್ನು ಒಂದೆ ಸೂರಿನಲ್ಲಿ ನೀಡುವ ಹಿಂದಿನ ಕಾಂಗ್ರೇಸ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಕನರ್ಾಟಕ ವನ್ ಕಛೇರಿ ದಾಂಡೇಲಿಯಲ್ಲಿ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ ಶುಕ್ರವಾರ ಆಧಾರ ಕಾರ್ಡ, ಆರೋಗ್ಯ ಕಾರ್ಡ ಫಾರ್ಮ ವಿತರಣೆಯಲ್ಲಿನ ಗೊಂದಲದಿಂದಾಗಿ ಸಾಕಷ್ಟು ರಾದ್ದಾಂತ ಸೃಷ್ಟಿಯಾಯಿತು.

    ಶುಕ್ರವಾರ ಮುಂಜಾನೆ 5 ಗಂಟೆಗೆ 100ಕ್ಕೂ ಹೆಚ್ಚು ಸಾರ್ವಜನಿಕರು ಫಾರ್ಮ ಪಡೆಯಲು ನಗರ ಸಭೆಯ ಕನರ್ಾಟಕ ವನ್ ಕಛೇರಿಗೆ ಆಗಮಿಸಿದ್ದರು ಆದರೆ ಕಛೇರಿಯ ಸಿಬ್ಬಂಧಿಗಳು ನಾಲ್ಕೈದು ದಿನದ ಫಾರ್ಮನ್ನು ಈ ಮೊದಲೆ ವಿತರಿಸಿದ್ದರಿಂದ  ಫಾರ್ಮ ಪಡೆಯಲು ಬಂದಿದ್ದ ಸಾರ್ವಜನಿಕರು ಕೇರಳಿ ವಾಗ್ವಾದ ನಡೆಸ ತೋಡಗಿದರು (ಒಂದು ದಿನಕ್ಕೆ 40 ಫಾರ್ಮ ವಿತರಣೆ) ವಿಷಯ ತಿಳಿದು ಸ್ಥಳಕ್ಕಾಗಮಿಸಿದ  ಭಾ,ಜ,ಪಾ ಸದಸ್ಯರಾದ ವಿಜಯ ಕೋಲೆಕರ, ನರೇದ್ರ ಚೌವ್ಹಾಣ, ದಶರಥ ಬಂಡಿ ವಡ್ಡರ ಕಛೇರಿಯ ಸಿಬ್ಬಂದಿಯೊಂದಿಗೆ ಚಚರ್ಿಸಿ ಫಾರ್ಮ ಪಡೆಯಲು ಬಂದಿದ್ದ ಸಾರ್ವಜನಿಕರ ಅನುಕುಲಕ್ಕಾಗಿ ಮೂರು ದಿನಕ್ಕಾಗುವ ಸುಮಾರು 120 ಫಾರ್ಮ ಗಳನ್ನು ವಿತರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು ದಾಂಡೇಲಿಯ ಕನರ್ಾಟಕ ವನ್ ಕಛೇರಿಯಲ್ಲಿ ಪ್ರತಿದಿನ ಕೇವಲ 40 ಫಾರ್ಮ ವಿರತಿಸುತ್ತಿರುವುದರಿಂದ ಮುಂಜಾನೆ 5 ಗಂಟೆ ಯಿಂದಲೆ ಫಾರ್ಮ ಪಡೆಯಲು ಮಹಿಳೆಯರೆ ಹೆಚ್ಚಾಗಿ ಸರತಿ ಸಾಲಲ್ಲಿ ನಿಲ್ಲುವದು ಮಾಮುಲಾಗಿದೆ. 

     ಕನರ್ಾಟಕ ವನ್ ಕಛೇರಿಯಲ್ಲಿನ ಅವ್ಯವಸ್ಥೆಯ ಬಗ್ಗೆ ಈ ಮೊದಲು ಸಹ ಅನೇಕ ಭಾರಿ ದೂರುದಾಖಲಾಗಿದೆ. ಮೂವತ್ತು ಸೌಲಭ್ಯಗಳನ್ನು ಒಂದೆ ಸೂರಿನಲ್ಲಿ ನೀಡಬೇಕಾಗಿದ್ದು ಆದರೆ ಕೆಲವೆ ಸೌಲಭ್ಯಗಳು ಮಾತ್ರ ಲಭ್ಯವಾಗಿದ್ದು ಉಳಿದವುಗಳು ಕೇವಲ ಕಾಟಾಚಾರಕ್ಕೆ ಮಾತ್ರ ಸಿಮಿತವಾಗಿದೆ. 

1ಈ ಅವ್ಯವಸ್ಥೆಗೆ ಸಿಬ್ಬಂದಿಯ ಕೋರತೆಯು ಕಾರಣವಾಗಿದ್ದು ಮೇಲಧಿಕಾರಿಗಳು ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಗಳನ್ನು ನಿಯೋಜಿಸಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಪಡೆಯಲು ಅನುವು ಮಾಡಿಕೊಡ ಬೇಕೆಂದು ಭಾ,ಜ.ಪಾ ಚುನಾಯಿತ ಸದಸ್ಯರು ಮೇಲದಿಕಾರಿಗಳಲ್ಲಿ ಅಗ್ರಹಿಸಿದರು.