“ಕೇಂದ್ರ ಬಜಟ್‌ಹಿ2026'' ವಿಷಯದ ಮೇಲೆ ಒಂದು ದಿನದ ವಿಚಾರ ಸಂಕಿರಣ

“ಕೇಂದ್ರ ಬಜಟ್‌ಹಿ2026'' ವಿಷಯದ ಮೇಲೆ ಒಂದು ದಿನದ ವಿಚಾರ ಸಂಕಿರಣ  One-day symposium on the topic “Central Budget 2026”

          ಧಾರವಾಡ 10 : ವಿಕಸಿತ ಭಾರತದ ಗುರಿಯನ್ನು ಸಾಕಾರಗೊಳಿಸಲು ಪ್ರಸಕ್ತ ಕೇಂದ್ರ ಬಜೆಟ್ ಹೆಚ್ಚು  ಪೂರಕವಾಗಲಿದೆ ಎಂದು ಹುಬ್ಬಳ್ಳಿಯ ಹಿರಿಯ ಲೆಕ್ಕ ಪರಿಶೋಧಕ ಡಾ. ಎನ್‌. ಎ. ಚರಂತಿಮಠ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಅರ್ಥಶಾಸ್ತ್ರ ವಿಭಾಗವು ಕೆನರಾ ಬ್ಯಾಂಕ್ ಪೀಠ ಮತ್ತು ಅರ್ಥಶಾಸ್ತ್ರ ಸಂಶೋಧನಾ ವೇದಿಕೆಯ ಸಹಯೋಗದಲ್ಲಿ ವಿಭಾಗದ ಸಭಾಂಗಣದಲ್ಲಿ ಆಯೋಜಿಸಿದ “ಕೇಂದ್ರ ಬಜಟ್‌ಹಿ2026'' ವಿಷಯದ ಮೇಲೆ ಒಂದು ದಿನದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ  ಮಾತನಾಡಿದರು. ಭಾರತ ಜಗತ್ತಿನಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿದ್ದು,  ಪ್ರಸ್ತುತ ದೇಶದ ಆರ್ಥಿಕ ಒಟ್ಟು ಬೆಳವಣಿಗೆ ದರ 5.5ಅ ರಷ್ಟು ಇದ್ದು, 2047ರ ವಿಕಸಿತ ಭಾರತ ಉದ್ದೇಶವನ್ನು ಸಾಕಾರಗೋಳಿಸಲು ಪ್ರಸ್ತುತ ಕೇಂದ್ರ ಬಜೆಟ್ ಹೆಚ್ಚು ಪೂರಕವಾಗಿದೆ ಎಂದ ಅವರು ದೇಶದ ಒಟ್ಟು ಬೆಳವಣಿಗೆಗೆ ಸೇವಾ ವಲಯದಿಂದ ತಯಾರಿಕಾ ವಲಯದಿಂದ 75ಅ ಹಾಗೂ ಕೃಷಿ ವಲಯದಿಂದ 15-20ಅರಷ್ಟು  ತಮ್ಮದೇ ಆದ ಕೊಡುಗೆಯನ್ನು ನೀಡುತ್ತಲಿವೆ ಎಂದ ಅವರು ತಯಾರಿಕಾ ವಲಯದ ಮೂಲಕ ’ಮೆಕ್‌- ಇನ್ ಇಂಡಿಯಾ’ ಹೆಚ್ಚು ಉತ್ತೇಜನ ನೀಡಿದೆ, ದೇಶದಲ್ಲಿ ಉತ್ತಮ ಉತ್ಪಾದಕತೆ ಹೆಚ್ಚಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಿದೆ ಎಂದರು. ಕೃಷಿ ಬೆಳವಣಿಗೆ ಹೆಚ್ಚಿಸಲು ’ಲ್ಯಾಂಡ್ ಟು ಲ್ಯಾಬ್‌’ ಕೃಷಿಗೆ ಸಂಭಂದಿಸಿದ ಸಂಶೋಧನೆ ನಡೆಸಲು ಸಹಕಾರಿಯಾಗಿದೆ

         ಇದರಿಂದ ಕೃಷಿಯಲ್ಲಿ ಹೆಚ್ಚು ಉತ್ಪಾದಕತೆ ಹೆಚ್ಚಿಸಲು ಸಾಧ್ಯ. ಪ್ರಸ್ತುತ ಗ್ಲೋಬಲ್ ಕ್ಯಾಪ್ಯಾಸಿಟಿ ಸೆಂಟರ್ (ಉಅಅ) ಸ್ಥಾಪನೆ ಎಲ್ಲಾ ಕ್ಷೇತ್ರದ ಉತ್ಪಾದಕತೆ ಹೆಚ್ಚುಸಲು ಸಹಕಾರಿಯಾಗಲಿದ್ದು, ಕರ್ನಾಟಕದ ಬೆಂಗಳೂರಿನಲ್ಲಿ ಜಾಗತಿಕ ಸಾಮರ್ಥ್ಯ ವೃದ್ಧಿ ಕೇಂದ್ರಗಳು (ಉಅಅ) ಬೆಂಗಳೂರಿನಲ್ಲಿ ಇರುವುದು ವಿಶೇಷ ಸಂಗತಿ ಎಂದರು. ಭಾರತದ ಯುವ ಜನರಿಗೆ ಉದ್ಯೋಗ ಸೃಷ್ಟಿಸಲು ಸ್ಥಳೀಯ ಮಟ್ಟದ ಉದ್ಯೋಗ ಸೃಷ್ಟಿಸಲು ಐಟಿ ಮತ್ತು ಐಟೀಸ್ ಸಂಬಂಧಿಸಿದ ಹೆಚ್ಚು ಮಹತ್ವವನ್ನು ಪ್ರಸ್ತುತ ಬಜೆಟ್ ನಲ್ಲಿ ನೀಡಲಾಗಿದೆ. 2047ರ ವಿಕಸಿತ ಭಾರತ ಗಮನದಲ್ಲಿಟ್ಟುಕೊಂಡು  ಗ್ಲೋಬಲ್ ಡೇಟಾ ಸೆಂಟರ್ ಸ್ಥಾಪನೆಗೆ ಒತ್ತು ನೀಡಲಾಗಿದೆ. ಉತ್ತಮ ಆರ್ಥಿಕ ಕಾರಿಡಾರ್ ನಿರ್ಮಿಸಲು ದೇಶದಲ್ಲಿ ಏಳು ರೇಲ್ವೆ ಕಾರಿಡಾರ್ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದು ಆರ್ಥಿಕ ಪುನರುಜ್ಜೀವನಕ್ಕೆ ಹೆಚ್ಚು ಅವಕಾಶ ನೀಡುತ್ತದೆ ಎಂದು ವಿವರಿಸಿದ ಅವರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಐದು ಯುನಿವರ್ಸಿಟಿ ಕ್ಲಸ್ಟರ್ ಹಬ್ ಗಳನ್ನು ಸ್ಥಾಪನೆ ಮಾಡುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ವಿಶೇಷ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ ಎಂದ ಅವರು ಮುಕ್ತ ವ್ಯಾಪಾರ ಒಪ್ಪಂದಗಳಿಂದ ರಫ್ಯು ವಹಿವಾಟಕ್ಕೆ ಉತ್ತೇಜನ ದೊರೆಯಲಿದೆ ಎಂದ ಅವರು ಇದೊಂದು ಜನಪರ, ಅಭಿವೃದ್ಧಿ ಪೂರಕ ಬಜೆಟ್ ಆಗಿದೆ ಎಂದು ವಿಶ್ಲೇಷಿಸಿದರು. ನಗರದ ಸಿ.ಎಮ್‌. ಡಿ.ಆರ್ ಮಾಜಿ ನಿರ್ದೇಶಕ ಡಾ. ವಿನೋದ್ ಅಣ್ಣಿಗೇರಿ ಮಾತನಾಡಿ ಪ್ರಸ್ತುತ ಕೇಂದ್ರದ ಬಜೆಟ್ ದೂರದೃಷ್ಟಿಯುಳ್ಳ ಬಜೆಟ್ ಆಗಿದೆ. ಆತ್ಮ ನಿರ್ಭರ ಮತ್ತು ಎಲ್ಲಾ ಸಮುದಾಯ ವರ್ಗಗಳನ್ನು ಒಳಗೊಳ್ಳುವ ಬಜೆಟನಲ್ಲಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದ್ದು, ಸಾರ್ವಜನಿಕ ಹೂಡಿಕೆಗೆ ಹೆಚ್ಚು ಅವಕಾಶ ನೀಡಲಾಗಿದ್ದು, ಪ್ರಸ್ತುತ ಬಜೆಟ್ ಸ್ಥಿರ ಮತ್ತು ಅಭಿವೃದ್ಧಿಪರವಾದ ಬೆಳವಣಿಗೆಗೆ ಪೂರಕವಾಗಿದ್ದು, ಉದ್ಯಮದ ಪೂರಕವಾದ ಅಂಶಗಳನ್ನು ಈ ಬಜೆಟ್ ನಲ್ಲಿ ಹೊಂದಿವೆ ಎಂದರು.

           ನೀತಿ ಆಯೋಗ ಮತ್ತು ಹಣಕಾಸಿನ ಆಯೋಗಗಳು ಬಜೆಟ್ ಮಂಡನೆ ಗಮನಾರ್ಹ ಪಾತ್ರ ವಹಿಸಿವೆ ಎಂದರು.ಕವಿವಿ ಅರ್ಥಶಾಸ್ತ್ರ ವಿಷಯದ ಪ್ರಾಧ್ಯಾಪಕರಾದ ಡಾ. ಹೆಚ್‌. ಹೆಚ್‌. ಭರಡಿ ಮಾತನಾಡಿ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಪ್ರಸ್ತುತ ಬಜೆಟ್ ಅನೇಕ ಮಾರ್ಗೋಪಾಯಗಳನ್ನು ಒಳಗೊಂಡಿವೆ. ಪ್ರಸ್ತುತ 4.5ಅ ರಷ್ಟು ಕೃಷಿ ಬೆಳವಣಿಗೆ ದರವನ್ನು ಹೊಂದಿದ್ದು 2047 ರ  ವಿಕಸಿತ ಭಾರತ ಗುರಿಯನ್ನು ದೃಷ್ಟಿಯನ್ನು ಇಟ್ಟುಕೊಂಡು ಶೇಕಡಾ 7ಅ ರಷ್ಟು ಬೆಳವಣಿಗೆಯ ಗುರಿಯನ್ನು ಹೊಂದಲಾಗಿದೆ ಎಂದ ಅವರು ಕೃಷಿಯಲ್ಲಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದ ಅವರು ಗ್ರಾಮೀಣ ಜನರಿಗೆ ಉದ್ಯೋಗ ನೀಡಲು ವಿಜಿ ರಾಮಜಿ ಪ್ರಸಕ್ತ ಯೋಜನೆ ಯಾಗಿದ್ದು, ಸಾಂಪ್ರದಾಯಿಕ ಕೃಷಿಯಿಂದ ಆಧುನಿಕ ಕೃಷಿಯಡೆಗೆ ಒಯ್ಯಲು ಈ ಬಜೆಟ್ ಸಹಕಾರಿ ಆಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಹೆಚ್‌.ನಾಗೂರ ಮಾತನಾಡಿ ಒಟ್ಟು ಬೆಳವಣಿಗೆ ದರ ಸ್ಥಿರತೆ ಕಾಪಾಡಲು ಪ್ರಸ್ತುತ ಬಜೆಟ್ ಸಹಕಾರಿಯಾಗಿದ್ದು, ಡಿಜಿಟಲ್ ಪರಿವರ್ತನೆ, ಯುವ ಸಮುದಾಯಕ್ಕೆ ಕೌಶಲ್ಯ, ತೆರಿಗೆಗಳ ಸುಧಾರಣೆ, ಕಾರ್ಮಿಕ, ಭೂಮಿ ಸುಧಾರಣೆ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಪೈಪೋಟಿ ನಡೆಸಲು, ವಿಕಸಿತ ಭಾರತ ಪೂರಕವಾದ ಅಂಶಗಳನ್ನು ಒಳಗೊಂಡಿದೆ ಎಂದರು. ಕಾರ್ಯಕ್ರಮದಲ್ಲಿ ಡಾ.ಮನೋಜ ಡೊಳ್ಳಿ, ಡಾ.ಮುಗದೂರ, ಸಚಿನ್ ಕುರಾಡೆ, ಅರ್ಥಶಾಸ್ತ್ರದ ವಿಭಾಗದ ಬೋಧಕ ವರ್ಗದರು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.      


Union Budget Developed India Objective Current Budget Economic Growth Rate Developed India 2047