ಎಲ್‌ಐಸಿ ಸಿಬ್ಬಂದಿಯಿಂದ ಒಂದು ದಿನದ ಸಾರ್ವತ್ರಿಕ ಮುಷ್ಕರ
One day general strike by LIC staff
ಕೊಪ್ಪಳ 09: ಎಲ್‌ಐಸಿ ಸಿಬ್ಬಂದಿಯವರಿಂದ ನಗರದ ಎಲ್‌ಐಸಿ ಕಛೇರಿ ಮುಂಭಾಗದಲ್ಲಿ ಒಂದು ದಿನದ ಸಾರ್ವತ್ರಿಕ ಮುಷ್ಕರವನ್ನು ಮಾಡಲಾಯಿತು. ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ವಿಮಾ ನೌಕರರ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಭೃಂಗಿ ವಿಮಾ ಉದ್ದಿಮೆಯಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಕೇಂದ್ರ ಸರಕಾರ ವಿಮಾ ಉದ್ದಿಮೆಯಲ್ಲಿ ವಿದೇಶೀ ನೇರ ಬಂಡವಾಳ ಹೆಚ್ಚು ಮಾಡುತ್ತಿರುವದರ ವಿರುದ್ಧ ಮಾತನಾಡುತ್ತಾ ಎಲ್ ಐ ಸಿ ಯಲ್ಲಿ ವರ್ಗ, 3 ಮತ್ತು 4 ನೇಮಕಾತಿಗಾಗಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಲ್ ಯ ಸಿ ಯ ಪ್ರೀಮಿಯಮ್ ಮೇಲಿನ ಜಿಎಸ್‌ಟಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಮಾ ನೌಕರರ ಸಂಘದ ಕೊಪ್ಪಳದ ಅಧ್ಯಕ್ಷರಾದ ಶೇಖರ್ಪ, ಸದಸ್ಯರಾದ ರಮೇಶ, ಶ್ರೀಕಾಂತ, ಸಿದ್ದಪ್ಪ, ಸಾಗರ್, ವಂಶಿಕೃಷ್ಣ, ಜಗದೀಶ, ಚಂದ್ರಶೇಖರ, ಶ್ರೀಪಾದ, ವಿಜಯಕುಮಾರ, ಅನಂತರೆಡ್ಡಿ, ವಿನಯ, ಲಕ್ಷ್ಮಯ್ಯ, ಚಂದನ್ , ಸುಧಾಬಾಯಿ, ಸುಕನ್ಯಾ, ಮಹಾಲಕ್ಷ್ಮಿ, ಭಾರತಿ, ಪುಷ್ಪಾವತಿ, ಶಿರಿಶಾ, ಇಂದುಶ್ರೀ ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 