ಒನ್ ಟೈಮ್ ಟು ವೇ ಪಾಸ್

ಬೆಂಗಳೂರು,ಮೇ 6,ರಾಜ್ಯ ಸರ್ಕಾರ ಲಾಕ್ ಡೌನ್ ಸಡಿಲಿಕೆ ಮಾಡಿ ವಲಸೆ ಕಾರ್ಮಿಕರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳಿಗೆ ಒಂದು ಬಾರಿಯ ಏಕಮುಖ ಸಂಚಾರಕ್ಕೆ ನೀಡಿದ್ದ ಒನ್ ಟೈಮ್ ಒನ್ ಡೆ, ಒನ್ ವೇ ಪಾಸ್ ಅನ್ನು ಎರಡು ಬದಿ ( ಟು ವೇ) ಪಾಸ್ ಎಂದು ಪರಿಗಣಿಸಲು ನಿರ್ಧರಿಸಿದೆ.ಈ ಕುರಿತು ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮೇ 2 ರಂದು ಲಾಕ್ ಡೌನ್ ಸಡಿಲಿಕೆ ಮಾಡಿ ವಲಸೆ ಕಾರ್ಮಿಕರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳು ಅವರ ಊರುಗಳಿಗೆ ತೆರಳಲು ಒಂದು ಬಾರಿ ಅವಕಾಶ ಕಲ್ಪಿಸಲು ಒನ್ ಟೈಮ್ ಒನ್ ಡೆ ಒನ್ ವೇ ಪಾಸ್ ನೀಡಲು ಆದೇಶಿಸಲಾಗಿತ್ತು. ಅದನ್ನು ಪರಿಷ್ಕರಿಸಿ ಮಂಗಳವಾರ ಒನ್ ಟೈಮ್ ಟು ವೇ ಪಾಸ್ ಎಂದು ಪರಿಗಣಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಲಾಗಿದೆ.