ಒನ್ ಹೆಲ್ತ್ ಜಾಗೃತಿ ಜಾಥಾ
One Health Awareness Rally
ಕಾರವಾರ 07: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರ ಸಭೆ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್), ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ನಸಿಂರ್ಗ್ ಸ್ಕೂಲ್, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆ, ಅರಣ್ಯ ಇಲಾಖೆ, ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್) ನ ಸಮುದಾಯ ವೈದ್ಯಕೀಯಶಾಸ್ತ್ರ ವಿಭಾಗವು, ಇಂಡಿಯನ್ ಅಸೋಸಿಯೇಷನ್ ಆಫ್ ಪ್ರೆವೆಟಿವ್ ಅಂಡ್ಸೋಶಿಯಲ್ಮೆಡಿಸಿನ್ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ “ಒನ್ ಹೆಲ್ತ್ ” ಜಾಗೃತಿ ಮೆರವಣಿಗೆ/ ರಾ್ಯಲಿ ಶುಕ್ರವಾರ ನಡೆಯಿತು.
ಜಾಥಾಕ್ಕೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ದೀಲೀಶ್ ಶಶಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನೀರಜ್ ಬಿ.ವಿ ಹಾಗೂ ಕಾರವಾರ ಕ್ರಿಮ್ಸ್ ನ ನಿರ್ದೇಶಕಿ ಡಾ. ಪೂರ್ಣಿಮಾ ಆರ್ ಟಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಎಂಬಿಬಿಎಸ್ ವಿದ್ಯಾರ್ಥಿಗಳು, ಗೃಹ ವೈದ್ಯರು , ನಸಿಂರ್ಗ್ ವಿದ್ಯಾರ್ಥಿಗಳು, ಪ್ಯಾರಾಮೆಡಿಕಲ್ ಹಾಗೂ ಅಲೈಡ್ ಹೆಲ್ತ ಸೈನ್ಸ್ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಬೋಧಕ ವೈದ್ಯರು ಮತ್ತು ಪ್ರಾದ್ಯಾಪಕರು ಪಾಲ್ಗೊಂಡಿದ್ದು, ಮಾನವ, ಪ್ರಾಣಿ ಮತ್ತು ಪರಿಸರ ಆರೋಗ್ಯ ಪರಸ್ಪರ ಸಂಬಂಧದ ಕುರಿತು ಜನರಲ್ಲಿ ಅರಿವು ಮೂಡಿಸಲು ಘೋಷಣೆಗಳು ಹಾಗೂ ಫಲಕಗಳನ್ನು ಹಿಡಿದು ಸಂದೇಶ ಸಾರಲಾಯಿತು.
ಕಾರ್ಯಕ್ರಮದ ಪ್ರಮುಖ ಉದ್ದೇಶವು “ಒನ್ ವರ್ಲ್ಡ-ಒನ್ ಹೆಲ್ತ್ (ಒಂದು ಜಗತ್ತು ಒಂದು ಆರೋಗ್ಯ)” ಮಾನವ, ಪ್ರಾಣಿ ಮತ್ತು ಪರಿಸರದ ಆರೋಗ್ಯ ಪರಸ್ಪರ ಅವಿಭಾಜ್ಯವಾಗಿದ್ದು, ಈ ಮೂರು ಕ್ಷೇತ್ರಗಳಸಹಯೋಗದ ಮೂಲಕ ಮಾತ್ರ ಜೀವಜಾತಿ ಮತ್ತು ಪರಿಸರ ಸಂಬಂಧಿತ ರೋಗಗಳನ್ನು ತಡೆಗಟ್ಟಲು ಸಾಧ್ಯವೆಂಬ ಅರಿವು ಮೂಡಿಸುವುದಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಅರ್ಚನಾ ನಾಯಕ್ ಹಾಗೂ ಸೆಂಟ್ರಲ್ ಮೆರಿನ್ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರಾದೇಶಿಕ ಕೇಂದ್ರದ ಪ್ರತಿನಿಧಿ ಸೋನಾಲ್, ಕ್ರಿಮ್ಸ್ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಹೇಮಗಿರಿ ಕೆ, ಕ್ರಿಮ್ಸ್ ನ ಪ್ರಾಂಶುಪಾಲರು, ವೈದ್ಯಕೀಯ ಅಧೀಕ್ಷಕರು, ಜಿಲ್ಲಾ ಸರ್ಜನ್, ಸ್ಥಾನಿಕ ವೈದ್ಯಕೀಯ ಅಧಿಕಾರಿಗಳು ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕ್ರಿಮ್ಸ್ ನ ಒನ್ ಹೆಲ್ತ್ ನೋಡಲ್ ಅಧಿಕಾರಿ ಡಾ. ಮಾಲತೇಶ ಉಂಡಿ ನಿರೂಪಿಸಿದರು. ಜಾಗೃತಿ ಜಾಥಾವು ಕ್ರಿಮ್ಸ್ ನ ಆವರಣದಿಂದ ಪ್ರಾರಂಭಗೊಂಡು ಎಂ.ಜಿ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ, ಗ್ರೀನ್ ಸ್ಟ್ರೀಟ್ ರಸ್ತೆ, ಸುಭಾಷ್ ವೃತ್ತ, ಸವಿತಾ ಹೋಟೆಲ್ ಪಿಕಳೆ ರಸ್ತೆ ಮಾರ್ಗವಾಗಿ ಕ್ರಿಮ್ಸ್ ಗೆ ಮರಳಿ ಮುಕ್ತಾಯವಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 