ಒನಕೆ ಓಬವ್ವ ಕನ್ನಡ ನಾಡಿನ ಧೀರ ಮಹಿಳೆಯಾಗಿದ್ದಳು: ರಾಮಣ್ಣ ನೀಲಣ್ಣವರ
Onake Obavva was a brave woman of Kannada: Ramanna Nilannavara
ಬೆಟಗೇರಿ, 11 : ಚಿತ್ರದುರ್ಗ ಕೋಟೆಯ ಪಾಳೆಯಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ. ಹೈದರ ಅಲಿಯ ಪಡೆಗಳೂಂದಿಗೆ ಏಕಾಂಗಿಯಾಗಿ ಹೋರಾಡಿದ ಧೀರ ಮಹಿಳೆಯಾಗಿದ್ದಳು ಎಂದು ಬೆಟಗೇರಿ ಯುವ ಮುಖಂಡ ರಾಮಣ್ಣ ನೀಲಣ್ಣವರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ನ.11ರಂದು ನಡೆದ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ವೀರ ವನಿತೆ ಒನಕೆ ಓಬವ್ವ ವೀರ ಯೋಧಿಯಾಗಿದ್ದು, ಓಬವ್ವಳ ಬದುಕಿನ ತತ್ವಾದರ್ಶಗಳನ್ನು ಅವಡಿಸಿಕೊಳ್ಳಬೇಕು ಎಂದರು.
ವೀರ ವನಿತೆ ಒನಕೆ ಓಬವ್ವಳ ಭಾವ ಚಿತ್ರಕ್ಕೆ ಪೂಜೆ, ಪುಷ್ಾರೆ್ಪನ ಕಾರ್ಯಕ್ರಮ ನೆರವೇರಿದ ಬಳಿಕ ಸಿಹಿ ವಿತರಣೆ ಕಾರ್ಯಕ್ರಮ ನಡೆಯಿತು.
ಪಿಡಿಒ ಎಂ.ಎಲ್.ಯಡ್ರಾಂವಿ, ಬಾಲಕೃಷ್ಣ ರಜಪೂತ, ಸುರೇಶ ಬಾಣಸಿ, ಮಂಜುನಾಥ ಕಂಬಿ, ಈರ್ಪ ದಂಡಿನ, ಸಿದ್ರಾಮ ಚಂದರಗಿ, ಬಸಪ್ಪ ಪೇದನ್ನವರ, ವಿಠಲ ಚಂದರಗಿ, ಗ್ರಾಮ ಪಂಚಾಯತ ಆಡಳಿತ ಮಂಡಳಿ ಸದಸ್ಯರು, ವೀರ ವನಿತೆ ಒನಕೆ ಓಬವ್ವ ಅಭಿಮಾನಿ ಬಳಗದ ಸದಸ್ಯರು, ಗಣ್ಯರು, ಯುವಕರು, ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 