ಪೋಕ್ಸೋ ವಿಷಯದ ಕುರಿತು ಮತ್ತು ಮಕ್ಕಳ ದೈಹಿಕ ಶಿಕ್ಷೆ ನಿಷೇಧ: ಪ್ರೌಢಶಾಲಾ ಸಹ ಶಿಕ್ಷಕರಿಗೆ ಕಾನೂನು ಅರಿವು: ಸಂದೀಪ್ ಪಾಟೀಲ್

ಪೋಕ್ಸೋ ವಿಷಯದ ಕುರಿತು ಮತ್ತು ಮಕ್ಕಳ ದೈಹಿಕ ಶಿಕ್ಷೆ ನಿಷೇಧ: ಪ್ರೌಢಶಾಲಾ ಸಹ ಶಿಕ್ಷಕರಿಗೆ ಕಾನೂನು ಅರಿವು: ಸಂದೀಪ್ ಪಾಟೀಲ್  On the issue of POCSO and prohibition of corporal punishment of children: Legal awareness for high s

ಬೆಳಗಾವಿ  21: ನಗರದಲ್ಲಿ ಡಯಟ್ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರಿಗಾಗಿ ನಡೆದ ಆರು ದಿನಗಳ ಮರು ಸಿಂಚನ, ಜ್ಞಾನ ಸೇತು, ಫೋಕ್ಸೋ ಮತ್ತು ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಾಗಾರಕ್ಕೆ ಕೊನೆಯ ದಿನವಾದ ಸೋಮವಾರ ದಿ. 19.01.2026 ರಂದು ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆದ ಶ್ರೀಯುತ ಸಂದೀಪ್ ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ಪೋಕ್ಸೋ ವಿಷಯದ ಕುರಿತು ಮತ್ತು ಮಕ್ಕಳ ದೈಹಿಕ ಶಿಕ್ಷೆ ನಿಷೇಧ ಕುರಿತು ಪ್ರೌಢಶಾಲಾ ಸಹ ಶಿಕ್ಷಕರಿಗೆ ಕಾನೂನು ಅರಿವು ಮೂಡಿಸಿದರು.  

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳನ್ನು ದೈಹಿಕವಾಗಿ ದಂಡಿಸದೆ ಮನಸ್ಸನ್ನು ಗೆಲ್ಲುವ ಶಿಕ್ಷಕರಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಮಕ್ಕಳನ್ನು ಅಭ್ಯಾಸದ ಕಡೆಗೆ ವಾಲಿಸುವುದು ಸುಲಭವಾಗುತ್ತದೆ. ಮತ್ತು ನಾವೆಲ್ಲ ಮಕ್ಕಳ ಮನಸ್ಸುಗಳನ್ನು ಗೆಲ್ಲುವ ಗುರುಗಳಾಗಿ ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬಹುದಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.  

ನಂತರ ತಮ್ಮ ನೈಜ ಕನ್ನಡ ಕಥೆ ಮತ್ತು ವಚನಗಳ ಮೂಲಕ ಮಾನ್ಯರು ಪ್ರೌಢಶಾಲಾ ಸಹ ಶಿಕ್ಷಕರಿಗೆ ಕಾನೂನಿನ ಅರಿವು ಮೂಡಿಸಿದರು.  ಪ್ರಾಸ್ತಾವಿಕವಾಗಿ ಮಾತನಾಡಿದ ಡಯಟ್ ನ ಪ್ರಾಂಶುಪಾಲರಾದ ಶ್ರೀಯುತ ಅಶೋಕ್ ಶಿಂದಗಿ ಅವರು ಮಾನ್ಯ ನ್ಯಾಯಾಧೀಶರು ಹೊಂದಿದ ಸಾಮಾಜಿಕ ಕಳಕಳಿಯ ಕುರಿತು ಪ್ರಸ್ತಾಪಿಸಿ, ಶಿಕ್ಷಕರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ತರಬೇತಿ ನೋಡಲ್ ಅಧಿಕಾರಿಗಳು ಮತ್ತು ಡಯಟ್ ಉಪನ್ಯಾಸಕರು ಆದ ಶ್ರೀಮತಿ ರಾಜಶ್ರೀ ನಾಯಕ್ ಮೇಡಂ ರವರು ನಮ್ಮ ವಿನಂತಿ ಕರೆಗೆ ಆಗಮಿಸಿದ ಮಾನ್ಯ ನ್ಯಾಯಾಧೀಶರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕ್ಯಾಂಪ್ ಸಿ.ಆರ್‌.ಪಿ ಗಳಾದ ಬಸವರಾಜ ಕಂಬಾರ್ ಮಾಡಿದರೆ, ಶ್ರೀಮತಿ ಛಾಯಾ ಭಜಂತ್ರಿಯವರು ಸ್ವಾಗತಿಸಿದರು.