ಇಟಲಿಯಲ್ಲಿ ಮಾರ್ಚ್ 31 ರಂದು ಅರ್ಧಕ್ಕೆ ಹಾರಲಿವೆ ರಾಷ್ಟ್ರಧ್ವಜ

ರೋಮ್, ಮಾರ್ಚ್ 28 ಇಟಲಿಯಲ್ಲಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟವರಿಗೆ ಗೌರವ ಸೂಚಕವಾಗಿ ಮಾರ್ಚ್ 31 ರಂದು ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು.“ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸ್ಮರಣಾರ್ಥ ಮಾರ್ಚ್ 31 ರಂದು 0000 ಗಂಟೆಗೆ ರಾಷ್ಟ್ರಧ್ವಜ ಅರ್ಧಕ್ಕೆ ಇಳಿಸಲಾಗುವುದು ಮತ್ತು ಒಂದು ನಿಮಿಷ ಮೌನಾಚರಿಸಲಾಗುವುದು” ಎಂದು ಎ ಎನ್ ಸಿ ಐ ಅಧ್ಯಕ್ಷ ಡೆಕಾರೋ ಆಂಟೋನಿಯೋ ಟ್ವೀಟ್ ಮಾಡಿದ್ದಾರೆ. ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರಿಗೆ ಶ್ರದ್ಧಾಂಜಲಿ ಸೂಚಕವಾಗಿ ಬೆರ್ಗಾಮೋ ಪ್ರಾಂತ್ಯದ ಅಧ್ಯಕ್ಷರ ಮೌನಾಚರಣೆ ಉಪಕ್ರಮವನ್ನು ಅನುಸರಿಸಿರುವುದಾಗಿ ಅವರು ಹೇಳಿದ್ದಾರೆ.