27ರಂದು ಅಮಾವಾಸ್ಯೆಯ ಅನುಭಾವ ಗೋಷ್ಠಿ

On 27th Amavasya Anubhava Concert

27ರಂದು ಅಮಾವಾಸ್ಯೆಯ ಅನುಭಾವ ಗೋಷ್ಠಿ  

ಬೆಳಗಾವಿ 19: ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭಾ, ಜಿಲ್ಲಾ ಘಟಕ ಅಮವಾಸ್ಯೆಯ ಅನುಭಾವ ಗೋಷ್ಠಿ ಅನುಭಾವ ಬುಧವಾರ ಫೆ. 27 ರಂದು ಸಾಯಂಕಾಲ 5.00 ಗಂಟೆಗೆ ಲಿಂಗಾಯತ ಭವನ ಶಿವಬಸವ ನಗರ ಬೆಳಗಾವಿಯಲ್ಲಿ ಜರುಗುವುದು.   

ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿಮಠ ಬೆಳಗಾವಿ ಇವರು ಸಾನಿಧ್ಯವಹಿಸುವರು. ಶರಣ ಪ್ರೊ. ಬಸವರಾಜ ಕುಪ್ಪಸಗೌಡ್ರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು ಚೆನ್ನಮ್ಮ ಕಿತ್ತೂರ ಇವರು “ ಶಿವರಾತ್ರಿ ಆಚರಣೆ ಮತ್ತು ಶರಣರು” ಎಂಬ ವಿಷಯದ ಮೇಲೆ ಅನುಭಾವನೀಡಲಿದ್ದಾರೆ. ಜಿಲ್ಲಾ ಅಧ್ಯಕ್ಷರಾದ ಶರಣೆ. ರತ್ನಪ್ರಭಾ ವ್ಹಿ ಬೆಲ್ಲದ ಇವರು ಅಧ್ಯಕ್ಷತೆ ವಹಿಸುವರು.