ಫೆ.13ರಂದು ಅಮೃತಾನಂದ ಶ್ರೀಗಳ ಪ್ರವಚನ: ಪೂರ್ವಭಾವಿ ಸಭೆ
ದೇವರಹಿಪ್ಪರಗಿ: ವಿಜಯಪುರ ಜ್ಞಾನ ಯೋಗಾಶ್ರಮದ ಪ.ಪೂ.ಲಿಂ ಸಿದ್ದೇಶ್ವರ ಸ್ವಾಮೀಜಿ ಅವರ ಶಿಷ್ಯರಾದ ಅಮೃತಾನಂದ ಶ್ರೀಗಳ ಪ್ರವಚನ ಕಾರ್ಯಕ್ರಮ ಫೆಬ್ರವರಿ 13ರಿಂದ-26ರ ವರೆಗೆ ನಡೆಯಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಲು ಬಸವಾನಂದ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಕಡ್ಲೇವಾಡ ಗ್ರಾಮದಲ್ಲಿ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಹಾ ಶಿವರಾತ್ರಿಯ ಪ್ರಯುಕ್ತ ಫೆಬ್ರವರಿ 13ರಿಂದ-26ರ ವರೆಗೆ ಪ್ರವಚನ ಕಾರ್ಯಕ್ರಮ ಗ್ರಾಮದಲ್ಲಿ ಪ್ರತಿದಿನ ಬೆಳಿಗ್ಗೆ 6.30 ರಿಂದ 7.30ರ ವರೆಗೆ ನಡೆಯಲಿದೆ, ನಂತರ ದಾಸೋಹ ಸೇವೆ ಹಮ್ಮಿಕೊಳ್ಳಲಾಗಿದ್ದು ಗ್ರಾಮದ ಪ್ರಮುಖರು ಸಹಕರಿಸಬೇಕು ಎಂದು ವಿವಿಧ ಸಮಿತಿಗಳಾದ ದಾಸೋಹ, ಸ್ವಚ್ಛತೆ, ಹಣಕಾಸು ಹಾಗೂ ಪ್ರಚಾರ ಸಮಿತಿಗಳನ್ನು ಪ್ರಮುಖರಿಗೆ ಜವಾಬ್ದಾರಿಗಳನ್ನು ಹಂಚಲಾಗಿದೆ ಹಾಗೂ ಪ್ರವಚನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕೆಲಸ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಸಾನಿಧ್ಯವನ್ನು ನಿಂಗರಾಯ ಮಹಾರಾಜರು ಹಾಗೂ ಗೋವಿಂದ ಮಹಾರಾಜರು ವಹಿಸಿದ್ದರು.
ಗ್ರಾಮದ ಪ್ರಮುಖರುಗಳಾದ ಸೋಮನಗೌಡ ಪಾಟೀಲ, ಅಡಿವೆಪ್ಪ ಕೊಂಡಗೂಳಿ, ಅಶೋಕ ಸೂಳಿಬಾವಿ, ಸಾಹೇಬಗೌಡ ರಡ್ಡಿ, ವಿಠ್ಠಲ ದೇಗಿನಾಳ, ವಿಠ್ಠಲ ಕನ್ನೊಳ್ಳಿ, ಪ್ರಚಾರ ಸಮಿತಿಯ ಅಧ್ಯಕ್ಷರಾದ ಸಾಯಿಕುಮಾರ ಬಿಸನಾಳ,ಚಂದ್ರಶೇಖರ ಗಣಜಲಿ, ಮಲ್ಲಿಕಾರ್ಜುನ ಬಿರಾದಾರ, ಪ್ರಭಾಕರ ಸುಳಿಬಾವಿ, ಸುಭಾಸ ಕಬಾಡಗಿ,ಪಿಡ್ಡಪ್ಪ ಗಣಜಲಿ, ನಿಕಗರಾಯ ಸಂಗೋಗಿ, ಹಣಮಂತ ಸಂಗೋಗಿ, ಬಾಲಚಂದ್ರ ಗುಡ್ಡಳ್ಳಿ ಸೇರಿದಂತೆ ಗ್ರಾಮದ ಪ್ರಮುಖರು ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು.