ಕಾರು ಅಪಘಾತದಲ್ಲಿ ಒಲಿಂಪಿಕ್ ಬಾಕ್ಸಿಂಗ್ ಚಾಂಪಿಯನ್ ಸಾವು

 ವಾಷಿಂಗ್ಟನ್, ಜು 15 (ಕ್ಸಿನ್ಹುವಾ) ಅಮೆರಿಕದ ಒಲಿಂಪಿಕ್ ಬಾಕ್ಸಿಂಗ್ ಚಾಂಪಿಯನ್ ಪೆರ್ನೆಲ್ ವಿಟ್ಕರ್ ಅವರು ಕಾರು ಅಪಘಾತದಿಂದ ಮೃತಪಟ್ಟಿದ್ದಾರೆಂದು ಸ್ಥಳೀಯ ಪೊಲೀಸ್ ವರದಿಗಳು ಮಂಗಳವಾರ ತಿಳಿಸಿವೆ. ಅವರಿಗೆ 55 ವರ್ಷ ವಯಸ್ಸಾಗಿತ್ತು.      ಭಾನುವಾರ ಪೆರ್ನೆಲ್ ವಿಟ್ಕರ್ ಅವರಿಗೆ ಕಾರು ಡಿಕ್ಕಿ ಹೊಡೆದಿದೆ. ಆದರೆ, ಇದು ಹಿಟ್ ಅಂಡ್ ರನ್ ಕೇಸ್ ಅಲ್ಲ ಎಂದು ಹೇಳಿರುವ ಪೊಲೀಸರು, ಈ ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಸ್ಪಷ್ಟನೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.  55 ರ ಹರೆಯದ ಅವರು ವಿಶಿಷ್ಟ ಮತ್ತು ಪರಿಣಾಮಕಾರಿ ಶೈಲಿಯೊಂದಿಗೆ ಅತ್ಯುತ್ತಮ ರಕ್ಷಣಾತ್ಮಕ ಬಾಕ್ಸರ್ ಆಗಿದ್ದರು. ಅವರನ್ನು ಎಲ್ಲರು "ಸ್ವೀಟ್ ಪೀ" ಎಂದು ಕರೆಯುತ್ತಿದ್ದರು. ಏಕೆಂದರೆ ಅವರು ಹೊಡೆಯುವುದರಲ್ಲಿ ಮತ್ತು ಹಿಂತಿರುಗುವುದನ್ನು ತಪ್ಪಿಸುವುದರಲ್ಲಿ ಬಹಳ ಉತ್ತಮವಾಗಿದ್ದರು. ಅವರು ತಮ್ಮ ವಿರೋಧಿಗಳಿಗೆ ಕ್ಲೀನ್ ಶಾಟ್ ಅವಕಾಶವನ್ನು ಬಹಳ ವಿರಳವಾಗಿ ನೀಡುತ್ತಿದ್ದರು.