ಶಿಲ್ಪಾ ಮನೆಯ ಕುಟುಂಬ ಸದಸ್ಯರಿಗೆ ಅಧಿಕಾರಿಗಳಿಂದ ಸಾಂತ್ವನ
ಶಿಗ್ಗಾವಿ 21: : ತಾಲೂಕಿನ ಚಿಕ್ಕಮಲ್ಲೂರ ಗ್ರಾಮದ ವಿಧ್ಯಾರ್ಥಿನಿ ಶಿಲ್ಪ ವಿರುಪಾಕ್ಷಪ್ಪ ಎರಮಸನಾಳ ಆತ್ಮಹತ್ಯೆ ಮಾಡಿಕೊಂಡ ಮನೆಗೆ ತಹಸಿಲ್ದಾರ ರವಿ ಕೊರವರ ಮತ್ತು ಪೊಲೀಸ್ ಇಲಾಖೆ ಅಧಿಕಾರಿ ಸುರೇಶ ಮಾಳಗೊಂಡ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರಸ್ವತಿ ಗಜಕೋಶ ಜಂಟಿಯಾಗಿ ಪರೀಶೀಲನೆ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯತ ಸದಸ್ಯ ಸಂತೋಷ ದೊಡ್ಡಮನಿ, ಕಾರ್ಮಿಕ ಸಂಘಟನೆ ರಾಜ್ಯಾದ್ಯಕ್ಷ ಸುರೇಶ ಹರಿಜನ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.