ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಮಳೆಗಾಗಿ ಪ್ರಾರ್ಥನೆ

ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಮಳೆಗಾಗಿ ಪ್ರಾರ್ಥನೆ Offer special prayers to God and pray for good rains

ಕೊಲ್ಹಾರ   23: ಉತ್ತಮ ಮಳೆ, ಕೃಷಿ ಸಮೃದ್ಧಿ ಹಾಗೂ ಜನಜೀವನದ ಒಳಿತಿಗಾಗಿ ತಾಲೂಕಿನ ಮಟ್ಟಿಹಾಳ ಗ್ರಾಮಸ್ಥರು ಮಂಗಳವಾರ ಕೃಷ್ಣಾ ನದಿ ತೀರದಲ್ಲಿ ಸಂಪ್ರದಾಯಬದ್ಧವಾಗಿ ಗಂಗಾ ಪೂಜೆ ಮತ್ತು ವಿಶೇಷ ಪ್ರಾರ್ಥನೆ ನೆರವೇರಿಸಿದರು.ಹಿಂದೂ ಸಂಪ್ರದಾಯದಲ್ಲಿ ಗಂಗಾಮಾತೆಯ ಆರಾಧನೆ ಹಾಗೂ ಜಲಾಭಿಷೇಕಕ್ಕೆ ವಿಶೇಷ ಮಹತ್ವವಿದ್ದು, ಉತ್ತಮ ಮಳೆ ಮತ್ತು ಸಮೃದ್ಧ ಬೆಳೆಗಾಗಿ ಈ ಆಚರಣೆಯನ್ನು ಅನಾದಿ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಗಂಗಾಜಲವು ಶಿವನಿಗೆ ಅತ್ಯಂತ ಪ್ರಿಯವಾದುದು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. 

ಮುಂಗಾರು ಆರಂಭವಾದರೂ ಸಮರ​‍್ಕ ಮಳೆಯಾಗದ ಕಾರಣ ರೈತರಲ್ಲಿ ಆತಂಕ ಮನೆ ಮಾಡಿದೆ. ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು, ಕೆರೆ-ಕಟ್ಟೆಗಳು ಬತ್ತುತ್ತಿರುವ ಪರಿಸ್ಥಿತಿಯಲ್ಲಿ ಉತ್ತಮ ಮಳೆಯಾಗಲೆಂದು ವಿಶೇಷ ಪ್ರಾರ್ಥನೆ ಆಯೋಜಿಸಲಾಯಿತು.ನೂರಾರು ಮುತ್ತೈದೆಯರು ಕುಂಭಮೇಳದೊಂದಿಗೆ ಕೃಷ್ಣಾ ನದಿ ದಡಕ್ಕೆ ತೆರಳಿ ಗಂಗಾಮಾತೆಗೆ ಅಭಿಷೇಕ ನೆರವೇರಿಸಿದರು. ಅರಿಶಿನ, ಕುಂಕುಮ, ಹೂವು ಹಾಗೂ ನೈವೇದ್ಯವನ್ನು ಅರ​‍್ಿಸಿ, ವರುಣ ದೇವರನ್ನು ಪ್ರಾರ್ಥಿಸಿ ನಾಡಿನಲ್ಲಿ ಉತ್ತಮ ಮಳೆಯಾಗಿ ಸಮೃದ್ಧಿ ನೆಲೆಸಲೆಂದು ಸಂಕಲ್ಪ ಮಾಡಿದರು.ಪೂಜೆ ಬಳಿಕ ಗ್ರಾಮಸ್ಥರು ಮತ್ತು ಮಹಿಳೆಯರು ಕೊಲ್ಹಾರದ ಕೃಷ್ಣಾ ನದಿ ದಡದಿಂದ ಹತ್ತಾರು ಕಿಲೋಮೀಟರ್‌ಗಳ ಪಾದಯಾತ್ರೆ ಮೂಲಕ ಮಟ್ಟಿಹಾಳ ಗ್ರಾಮಕ್ಕೆ ಆಗಮಿಸಿ, ಗ್ರಾಮದ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಮಳೆಗಾಗಿ ಪ್ರಾರ್ಥಿಸಿದರು. 

ಕಾರ್ಯಕ್ರಮದಲ್ಲಿ ಸಿದ್ದು ಬಿರಾದಾರ, ಈರ​‍್ಪ ಬಿರಾದಾರ, ಯಮನಪ್ಪ ಬಿರಾದಾರ, ಪರಸು ಗೋಳಗೊಂಡ, ಸಗಪ್ಪ ಅಂಗಡಗೇರಿ, ಸಿದ್ದು ರಾ. ಬಿರಾದಾರ, ಈರಣ್ಣ ಮನಗೂಳಿ, ಹಣಮಂತ ತೇಲಿ, ಪರಸು ಗು. ಗೋಳಗೊಂಡ, ಸಚಿನ್ ಬಿರಾದಾರ, ದುಂಡಪ್ಪ ಪೂಜಾರಿ, ಬೀರು ಪೂಜಾರಿ, ಸಂಗಪ್ಪ ಬಿರಾದಾರ, ಬಸು ಮಟ್ಟಿಹಾಳ ಹಾಗೂ ಹಣಮಂತ ಬಿರಾದಾರ ಸೇರಿದಂತೆ ಗ್ರಾಮಸ್ಥರು ಮತ್ತು ನೂರಾರು ಮಹಿಳೆಯರು ಭಾಗವಹಿಸಿದ್ದರು.