ಅಮಿತ್ ಶಾ ಸಮಾವೇಶ ವೇಳೆ 'ಗೋಲಿ ಮಾರೋ' ಘೋಷಣೆ, ಕೊಲ್ಕತ್ತದಲ್ಲಿ ಮತ್ತೊಬ್ಬನ ಬಂಧನ

ಕೊಲ್ಕತ್ತ, ಮಾ 3, ಭಾನುವಾರ ನಗರದಲ್ಲಿ ನಡೆದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಾವೇಶದಲ್ಲಿ ಭಾಗವಹಿಸಲು ತೆರಳುತ್ತಿದ್ದ ಬಿಜೆಪಿ ಬೆಂಬಲಿಗರ ಗುಂಪೊಂದು ಮೊಳಗಿಸಿದ್ದ "ಗೋಲಿ ಮಾರೋ" ಪ್ರಚೋದಾನಾತ್ಮಕ ಘೋಷಣೆ ಸಂಬಂಧ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಇದರಿಂದಾಗಿ ಒಟ್ಟು ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಅಲ್ಲದೆ ಪ್ರಚೋದನಕಾರಿ ಘೋಷಣೆ ಕೂಗಿದ ಪ್ರಕರಣದಲ್ಲಿ 25ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಗುರುತಿಸಿದ್ದಾರೆ ಎಂದು ಉನ್ನತ ಅಧಿಕಾರಿ ಮೂಲಗಳು ತಿಳಿಸಿವೆ. ನ್ಯೂ ಮಾರ್ಕೆಟ್ ಹಾಗೂ ಉತ್ತರ 24 ಪರಗಣದ ಘೋಲಾ ಪೊಲೀಸರು ಜಂಟಿಯಾಗಿ ಸೋಮವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು. ಬಂಧಿತನನ್ನು ಬಿಜೆಪಿ ನಾಯಕ ಸುಜಿತ್ ಬರುವಾ ಎಂದು ಗುರುತಿಸಲಾಗಿದೆ. ಹಿಂಸೆಯನ್ನು ಪ್ರಚೋದಿಸುವ ಯಾವುದೇ ವ್ಯಕ್ತಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದೇಶ ನೀಡಿದ ನಂತರ ಹೊಸದಾಗಿ ಈ ಬಂಧನ ಮಾಡಲಾಗಿದೆ. ಭಾನುವಾರ ಮಧ್ನಾಹ್ನ ಆಯೋಜಿಸಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಮೆರವಣಿಗೆಯಲ್ಲಿ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರು ಶಾಹೀನ್ ಮಿನಾರ್ ಬಳಿ "ಗೋಲಿ ಮಾರೋ ಸಾಲೋನ್ ಕೋ" ಎಂದು ಪ್ರಚೋದನಾಕಾರಿ ಘೋಷಣೆ ಕೂಗಿದ ಆರೋಪದ ಮೇಲೆ ಪೊಲೀಸರು ಒಟ್ಟು 25 ಆರೋಪಿಗಳನ್ನು ಗುರುತಿಸಿದ್ದಾರೆ ನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಗಳನ್ನು ಗುರುತಿಸಿ ಭಾನುವಾರ ರಾತ್ರಿಯಿಡೀ ದಾಳಿ ನಡೆಸಿ ನಗರದ ವಿವಿಧ ಭಾಗಗಳಲ್ಲಿ ಮೂವರನ್ನು ಬಂಧಿಸಿದ್ದರು.ಬಂಧತರನ್ನು ಸುರೇಂದ್ರ ಕುಮಾರ್ ತಿವಾರಿ, ಧೃಬಾ ಬೋಸ್ ಹಾಗೂ ಪಂಕಜ್ ಪ್ರಸಾದ್ ಎಂದು ಗುರುತಿಸಲಾಗಿದೆ. ಬಂಧಿತರು ಬಿಜೆಪಿ ವಕೀಲರ ಕೋಶದ ಸದಸ್ಯರಾಗಿದ್ದಾರೆ. ಈ ಮೂವರನ್ನು ನ್ಯೂ ಮಾರ್ಕೆಟ್, ಹರಿದೇಬ್ ಪುರ್ ಹಾಗೂ ಭೋವಾನಿ ಪುರ್, ಕೇಂದ್ರ ಹಾಗೂ ದಕ್ಷಿಣ ಕೊಲ್ಕತ್ತಾ ಪ್ರದೇಶಗಳಿಂದ ಕ್ರಮವಾಗಿ ಬಂಧಿಸಲಾಗಿತ್ತು. ಭಾರತೀಯ ದಂಡ ಸಂಹಿತೆ ಕಲಂ 153ಎ, 505, 506 ಹಾಗೂ 24 ರಡಿ ಇವರನ್ನು ಬಂಧಿಸಲಾಗಿದೆಈ ನಡುವೆ ಬಂಧಿತ ಆರೋಪಿ ಧೃಬಾ ಬೋಸ್ (73) ಅವರಿಗೆ ಷರತ್ತಿನ ಜಾಮೀನು ಲಭಿಸಿದ್ದು, ಇತರ ಆರೋಪಿಗಳನ್ನು ಮಾರ್ಚ್ 4 ರವರೆಗೆ ಪೊಲೀಸ್ ವಶಕ್ಕೆಒಪ್ಪಿಸಲಾಗಿದೆ