ಮಂಡ್ಯ, ಫೆ 18, ಏಕ್ ಭಾರತ್ ಶ್ರೇಷ್ಠ ಭಾರತ್ ಅಭಿಯಾನದಡಿ ಫೆಬ್ರವರಿ 18 ರಿಂದ 22 ರವರೆಗೆ ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ರಾಷ್ಟ್ರೀಯ ಏಕೀಕರಣ ಶಿಬಿರ ನಡೆಯಲಿದೆ. ಕಬ್ಬಿನ ನಾಡು ಮಂಡ್ಯ ಜಿಲ್ಲೆಯ ನೆಹರೂ ಯುವ ಕೇಂದ್ರ ಮತ್ತು ಇತರ ಪೋಷಕ ಸಂಸ್ಥೆಗಳೊಂದಿಗೆ ಈ ಶಿಬಿರ ಆಯೋಜನೆಯಾಗಿದೆ.
ಐದು ದಿನಗಳ ಈ ಶಿಬಿರ ಯುವಕರನ್ನು ಸಂಪರ್ಕಿಸಿ, ಚರ್ಚಿಸಲು ಮತ್ತು ರಾಷ್ಟ್ರೀಯ ಏಕೀಕರಣದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಬೆಳೆಸಲು ಸಹಕಾರಿ ಎಂದು ಮಂಡ್ಯ ನೆಹರೂ ಯುವ ಕೇಂದ್ರದ ಜಿಲ್ಲಾ ಮುಖ್ಯ ಸಂಯೋಜಕ ಅನಂತಪ್ಪ ಅಭಿಪ್ರಾಯಪಟ್ಟಿದ್ದಾರೆ. ಧಾರ್ಮಿಕ ಮತ್ತು ಭಾಷಿಕ ಅಡೆತಡೆಗಳನ್ನು ನಿವಾರಿಸಲು ವಿವಿಧ ರಾಜ್ಯಗಳಿಂದ ಭೇಟಿ ನೀಡುವ ಯುವಕ ಯುವತಿಯರಿಂದ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯಗಳ ಆಕರ್ಷಕ ಅಂಶಗಳನ್ನು ವಿನಿಮಯ ಮಾಡಿಕೊಳ್ಳಲು ಐದು ದಿನಗಳ ಶಿಬಿರ ಏರ್ಪಾಡಾಗಿದೆ.