ಕಲಬುರಗಿ; ಕೋವಿಡ್ -19 ಶಂಕಿತ ವ್ಯಕ್ತಿ ಸಾವು

 ಕಲಬುರಗಿ, ಮಾ ೧೧, ಹೈದ್ರಾಬಾದ್   ಖಾಸಗಿ ಆಸ್ಪತ್ರೆಗೆ  ಸ್ಥಳಾಂತರಗೊಳಿಸಲಾಗಿದ್ದ  ಕಲಬುರಗಿಯ  ೭೫ ವರ್ಷದ  ಕೊರೊನಾ ವೈರಸ್ ಸೋಂಕಿತ  ವ್ಯಕ್ತಿ ಮೃತಪಟ್ಟಿದ್ದಾರೆ  ಎಂದು ಜಿಲ್ಲಾ ಆರೋಗ್ಯ ಅಧಿಕಾರಿ  ಕಚೇರಿ ಮೂಲಗಳು  ಹೇಳಿವೆ. ಆದರೆ,  ರೋಗಿಯ ಸಾವಿಗೆ  ನಿಖರ ಕಾರಣ ಏನು ಎಂಬುದನ್ನು  ಇನ್ನೂ ಪತ್ತೆಹಚ್ಚಬೇಕಿದೆ.  ಮೃತ ವ್ಯಕ್ತಿ ರಕ್ತ, ಗಂಟಲು ದ್ರವ  ಮಾದರಿಗಳ    ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ. ಸೌದಿ ಅರೆಬಿಯಾದಿಂದ ಕಳೆದ  ಫೆ ೨೯ ರಂದು ಕಲಬುರಗಿಗೆ  ಹಿಂತಿರುಗಿದ್ದ  ವ್ಯಕ್ತಿಯಲ್ಲಿ ಕೊರೊನಾ ಸೋಂಕು ಲಕ್ಷಣಗಳು  ಕಾಣಿಸಿಕೊಂಡ ನಂತರ ಗುಲ್ಬರ್ಗ ವೈದ್ಯಕೀಯ  ವಿಜ್ಞಾನ  ಸಂಸ್ಥೆ ( ಜಿಮ್ಸ್)  ಐಸೊಲೇಷನ್  ವಾರ್ಡ್ ಗೆ  ದಾಖಲಿಸಲಾಗಿತ್ತು. ನಂತರ  ಆತನನ್ನು  ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಗೆ  ಸ್ಥಳಾಂತರಿಸಲಾಗಿತ್ತು.  ಅಲ್ಲಿ  ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ  ಎಂದು  ಮೂಲಗಳು ಹೇಳಿವೆ