ಶಿಕ್ಷಣದ ಉದ್ದೇಶ ವ್ಯಕ್ತಿಯ ಸರ್ವಾಂಗೀಣ ಪ್ರಗತಿ: ದಮ್ಮೂರಮಠ

ಶಿಕ್ಷಣದ ಉದ್ದೇಶ ವ್ಯಕ್ತಿಯ ಸರ್ವಾಂಗೀಣ ಪ್ರಗತಿ: ದಮ್ಮೂರಮಠ OBJECTIVE OF EDUCATION All-round development of the individual: Dammura Math

 ತಾಳಿಕೋಟಿ 26: ಈ ನಮ್ಮ ಬದುಕು ಅತ್ಯದ್ಭುತವಾದದ್ದು ಇದನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿಕೊಂಡಾಗ ಮಾತ್ರ ಬದುಕು ಸುಂದರಗೊಳ್ಳಲು ಸಾಧ್ಯವಿದೆ ಎಂದು ಮುದ್ದೇಬಿಹಾಳ ಕ್ಷೇತ್ರ ಸಮನ್ವಯಾಧಿಕಾರಿ ಆರಿ​‍್ಬ. ದಮ್ಮೂರಮಠ ಹೇಳಿದರು.  

ತಾಲೂಕಿನ ಕೊಡಗಾನೂರ ಗ್ರಾಮದ ಬೇಲೂರ ಕ್ರಾಸ್ ಹತ್ತಿರ ಇರುವ ಜಿ ಎಸ್ ಎಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ, ಸಮೂಹ ಸಂಪನ್ಮೂಲ ಕೇಂದ್ರ ಕೊಡಗಾನೂರ ಹಾಗೂ ಜೆಎಸ್‌ಎಸ್ ಶಾಲೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ 2025-26 ನೇ ಸಾಲಿನ ಕೊಡಗಾನೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.  

ಶಿಕ್ಷಣವೆಂದರೆ ಕೇವಲ ಓದು ಬರೆದು ಒಳ್ಳೆಯ ಅಂಕಗಳನ್ನು ಪಡೆಯುವದಷ್ಟೇ ಅಲ್ಲ, ನಮ್ಮ ಬದುಕಿನ ಸರ್ವಾಂಗೀಣ ಪ್ರಗತಿ ಶಿಕ್ಷಣವಾಗಿದೆ. ಶಿಕ್ಷಣದ ಮೂಲಕ ಮಕ್ಕಳು ಈ ರೀತಿಯಾಗಿ ಬದಲಾಗಬೇಕೆಂಬ ಉದ್ದೇಶದಿಂದ ಸರ್ಕಾರ ಪ್ರತಿಭಾ ಕಾರಂಜಿ ಅಂತಹ ಕಾರ್ಯಕ್ರಮವನ್ನು ಕೊಟ್ಟಿದೆ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು ಎಂದ ಅವರು ಈ ಕಾರ್ಯಕ್ರಮದ ಯಶಸ್ವಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಟ್ಟ ಸಂಸ್ಥೆಯ ಅಧ್ಯಕ್ಷ ಗಬಸಾವಳಗಿ ಅವರಿಗೆ ಅಭಿನಂದಿಸುತ್ತೇನೆ ಎಂದರು.  

ಜೆಎಸ್‌ಎಸ್ ಶಾಲೆಯ ಮುಖ್ಯ ಗುರುಗಳಾದ ವಿನಾಯಕ ಪಟಗಾರ ಮಾತನಾಡಿ ಕೊಡಗಾನೂರ ಕ್ಲಸ್ಟರ್ ವ್ಯಾಪ್ತಿಯ 9 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದು ಇಲ್ಲಿ ನಿರ್ಣಾಯಕರು ಕೊಡುವ ನಿರ್ಣಯಗಳನ್ನು ವಿದ್ಯಾರ್ಥಿಗಳು ಗೌರವಿಸಬೇಕು ಎಲ್ಲಾ ಸ್ಪರ್ಧೆಗಳಲ್ಲಿ ಉತ್ಸಾಹ ಹಾಗೂ ಕ್ರಿಯಾಶೀಲತೆಯೊಂದಿಗೆ ಭಾಗವಹಿಸಬೇಕು ಎಂದರು. ಸಂಸ್ಥೆಯ ಅಧ್ಯಕ್ಷ ಸಿದ್ದನಗೌಡ ಎಸ್ ಗಬಸಾವಳಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  

ಕೊಡಗಾನೂರ ಕ್ಲಸ್ಟರ್ ವ್ಯಾಪ್ತಿಗೆ ಬರುವ ವಿವಿಧ ಶಾಲೆಯ ಮಕ್ಕಳು ಅವರಿಗಾಗಿಯೇ ಏರಿ​‍್ಡಸಿದ ಜಾನಪದ ನೃತ್ಯ, ಭಾವಗೀತೆ, ಚರ್ಚಾ ಸ್ಪರ್ಧೆ, ರಸಪ್ರಶ್ನೆ,ಕವ್ವಾಲಿ, ಸಂಸ್ಕೃತ ಮತ್ತು ಅರಬ್ಬಿಕ್ ಧಾರ್ಮಿಕ ಪಠಣ, ದೇಶಭಕ್ತಿ ಗೀತೆ, ಭಕ್ತಿಗೀತೆ ಮುಂತಾದ ಸ್ಪರ್ಧೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದರು. ಜೆಎಸ್‌ಎಸ್ ಸಂಸ್ಥೆ ಅಧ್ಯಕ್ಷ ಸಿದ್ದನಗೌಡ ಗಬಸಾವಳಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಇಸಿಓ ಎಂ.ಕೆ.ಬಾಗವಾನ, ಬಿಆರ್ ಸಿ ಕಾಶಿನಾಥ ಸಜ್ಜನ, ಶಿಕ್ಷಕರ ಪತ್ತು ಬೆಳೆಸುವ ಸಹಕಾರ ಸಂಘದ ಅಧ್ಯಕ್ಷ ಸುರೇಶ ವಾಲಿಕಾರ, ಸಿಆರ್ಸಿಗಳಾದ ಎಸ್ ಎಂ ಪಾಲ್ಕಿ, ಬಾಲಾಜಿ ವಿಜಾಪುರ, ರಾಜು ವಿಜಾಪುರ, ಇಬ್ರಾಹಿಂ ಆಲಮೇಲ, ಶಿಕ್ಷಕ ವಿಜಯ ಮಹಾಂತೇಶ ಸ್ಥಾವರಮಠ, ನಾವದಗಿ ಸರಕಾರಿ ಪ್ರಾಥಮಿಕ ಶಾಲೆ ಮುಖ್ಯ ಗುರುಮಾತೆ ಅಂಬಿಕಾ ಗೋಗಿ, ಜೆಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆ ಮುಖ್ಯಗುರುಮಾತೆ ವಿಜಯಲಕ್ಷ್ಮಿ ಸಾಹೇಬಗೌಡ ಗಬಸಾವಳಗಿ, ಜೆಎಸ್‌ಎಸ್ ಶಾಲೆಯ ಶಿಕ್ಷಕ ವರ್ಗ, ನಿರ್ಣಾಯಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.  ಚಂದ್ರಕಲಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಮುತ್ತುರಾಜ ಯಡ್ರಾಮಿ ನಿರೂಪಿಸಿದರು. ಶಿಕ್ಷಕ ಸಂತೋಷ ಹುಗ್ಗಿ ವಂದಿಸಿದರು.