ಧರ್ಮಸ್ಥಳ ಸಂಘದ ವತಿಯಿಂದ ಪೌಷ್ಟಿಕ ಆಹಾರ ಅರಿವು ಕಾರ್ಯಕ್ರಮ

ಧರ್ಮಸ್ಥಳ ಸಂಘದ ವತಿಯಿಂದ ಪೌಷ್ಟಿಕ ಆಹಾರ ಅರಿವು ಕಾರ್ಯಕ್ರಮ Nutritious food awareness program organized by the Dharmasthala Sangha

ಬೈಲಹೊಂಗಲ 18 :  ತಾಲೂಕಿನ ಜಾಲಿಕೊಪ್ಪ ಗ್ರಾಮದ  ಶಾಂಭವಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಪೌಷ್ಟಿಕ ಆಹಾರ ಅರಿವು ಕಾರ್ಯಕ್ರಮವನ್ನು ಕಲ್ಮೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷರಾದ  ದಾನಮ್ಮ ಛಬ್ಬಿ, ಉದ್ಘಾಟನೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಖ್ಯೋಪಾಧ್ಯಾಯರಾದ ಎ.ಎಂ ಜಕಾತಿ  ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಶೈಲಾ. ಜೆ  ವಲಯದ ಮೇಲ್ವಿಚಾರಕರಾದ ಮಾಂತೇಶ್ ಕಾಟಿ ಇವರ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.    

ತಾಲೂಕಿನ ಜ್ಞಾನವಿಕಾಸ ಸಮನ್ವಯಅಧಿಕಾರಿ ಶೈಲಾ ಮಾತನಾಡಿ  ಮನುಷ್ಯನ ಆರೋಗ್ಯಕರ ಜೀವನ ಶೈಲಿ ಬದಲಾವಣೆಯಲ್ಲಿ ಪೌಷ್ಟಿಕ ಆಹಾರ ಪ್ರಾಮುಖ್ಯತೆ  ಸ್ಥಳೀಯವಾಗಿ ಲಭ್ಯವಿರುವ ಆಹಾರ ಪದಾರ್ಥಗ ತಯಾರಿ ಮತ್ತು ಹಸಿರು ತರಕಾರಿ ಪೌಷ್ಟಿಕ ಆಹಾರ ಬಳಕೆ ಮಾಡುವ ವಿಧಾನಗಳನ್ನು ಅನುಸರಿಸಿ ಉತ್ತಮವಾದ ಆರೋಗ್ಯವನ್ನು ಪಡೆದುಕೊಳ್ಳಿ ಎಂದು ತಹೇಳಿದರು.      ಎ. ಎಂ  ಜಕಾತಿ ಅವರು  ಮಾತನಾಡಿ ಪೌಷ್ಟಿಕ ಆಹಾರದ ಮಹತ್ವ ಹಾಗೂ ಅದರ ಪಾತ್ರದ  ಬಗ್ಗೆ ಅಡುಗೆ  ಮನೆ ಆಸ್ಪತ್ರೆಯಾಗಿ ನಾವು ತಯಾರಿಸುವ ಆಹಾರವೇ ಓಷಧಿಯಾಗಿರಬೇಕು. ಹಾಗೂ ದಿನನಿತ್ಯ ಜೀವನದಲ್ಲಿ ಉತ್ತಮ ಪೋಷಕಾಂಶ ಇರುವ ಆಹಾರವನ್ನು ಸೇವಿಸೋಣ ವಿಟಮಿನ್ ಇರುವ ಆಹಾರ ಪದಾರ್ಥಗಳ ಬಳಕೆ ಹಸಿರು ತರಕಾರಿ ಹಾಲು ಹಣ್ಣು ಹಂಪಲ ಕಾಳುಗಳ ಮೊಳಕೆ ಬೆರೆಸಿ ತಿನ್ನೋದರ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. 

ಈ ಕಾರ್ಯಕ್ರಮದ ನಿರೂಪಣೆಯನ್ನು ಸೇವಾಪ್ರತಿನಿಧಿ   ಸಾವಕ್ಕ, ಸ್ವಾಗತ ಮಧು ಛಬ್ಬಿ , ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ಸಂದರ್ಭದಲ್ಲಿ ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯರು ತಾವೇ ತಯಾರಿಸಿದ ವಿವಿಧ ಪೌಷ್ಟಿಕ ಆಹಾರಗಳ ಪ್ರಾತ್ಯಕ್ಷಿಕೆಯನ್ನು ನೆರವೇರಿಸಿಕೊಟ್ಟರು. ಅಲ್ಲದೆ, ಆಯಾ ಆಹಾರ ಪದಾರ್ಥಗಳಲ್ಲಿ ಅಡಗಿರುವ ಪೌಷ್ಟಿಕಾಂಶಗಳು, ಅವುಗಳಿಂದ ಆರೋಗ್ಯಕ್ಕೆ ದೊರೆಯುವ ಪ್ರಯೋಜನಗಳು ಹಾಗೂ ತಯಾರಿಸುವ ವಿಧಾನದ ಕುರಿತು ಮಾಹಿತಿ ಹಂಚಿಕೊಂಡರು.