ನೋವೆಲ್‌ ಕರೋನಾವೈರಸ್‌: ಕೇರಳದಲ್ಲಿ 2,421 ಜನರ ಮೇಲೆ ನಿಗಾ

ತಿರುವನಂತಪುರಂ,  ಫೆ. 5,ಕೇರಳದಲ್ಲಿ ಮಂಗಳವಾರದವರೆಗೆ ನೋವಲ್ ಕರೊನಾವೈರಸ್‌ನ ಹೊಸ  ಪ್ರಕರಣಗಳು ವರದಿಯಾಗಿಲ್ಲವಾದರೂ, ರಾಜ್ಯದಲ್ಲಿ ಸುಮಾರು 2,421 ಜನರನ್ನು  ಕಣ್ಗಾವಲಿನಲ್ಲಿ ಇರಿಸಲಾಗಿದೆ. ಈ ಪೈಕಿ 100 ಮಂದಿಯನ್ನು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳಲ್ಲಿ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಬುಧವಾರ ತಿಳಿಸಿವೆ. "190 ರಕ್ತದ  ಮಾದರಿಗಳಲ್ಲಿ 118 ಅನ್ನು ಆಲಪ್ಪುಳದಲ್ಲಿರುವ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. 100  ರಕ್ತದ ಮಾದರಿಗಳು ನಕಾರಾತ್ಮಕವಾಗಿವೆ ಎಂದು ಅದು ತಿಳಿಸಿದೆ.ಪುಣೆಯ ನ್ಯಾಷನಲ್  ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಪ್ರಯೋಗಾಲಯಕ್ಕೆ ಶಂಕಿತ ಜನರ ರಕ್ತದ ಮಾದರಿಗಳನ್ನು ಕಳುಹಿಸಲಾಗಿದೆ.  ಅಲ್ಲಿಂದ ನಾವು ವರದಿಗಳಿಗಾಗಿ ಕಾಯುತ್ತಿದ್ದೇವೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಕೇರಳದಲ್ಲಿ ಮಾರಣಾಂತಿಕ ನೋವೆಲ್‌ ಕರೊನಾವೈರಸ್ ಹರಡುವುದನ್ನು ನಿಯಂತ್ರಿಸಲು ಆರೋಗ್ಯ  ಕೇಂದ್ರಗಳಲ್ಲಿ ಸೌಲಭ್ಯಗಳನ್ನು ಸ್ಥಾಪಿಸಲು ಹೆಚ್ಚಿನ ಹಣವನ್ನು ಒದಗಿಸುವಂತೆ ಆರೋಗ್ಯ  ಸಚಿವೆ ಕೆ.ಕೆ.ಶೈಲಜಾ ಕೇಂದ್ರವನ್ನು ಒತ್ತಾಯಿಸಿದ್ದಾರೆ.  ಚೀನಾದಿಂದ ಆಗಮಿಸಿದ ಮೂವರಲ್ಲಿ ಸೋಂಕಿನ ಸಕಾರಾತ್ಮಕ ಅಂಶ ಇರುವುದು ಪತ್ತೆಯಾಗಿದೆ. ಜನವರಿ 15 ರಂದು ಚೀನಾದಿಂದ ಕೇರಳಕ್ಕೆ ಮರಳಿದ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಭಾನುವಾರ ವಿದೇಶಕ್ಕೆ ಹಾರಿದ ಇಬ್ಬರು ವ್ಯಕ್ತಿಗಳು ನಾಪತ್ತೆಯಾದ ಬಗ್ಗೆ ತನಿಖೆ ನಡೆಸುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ.