ಕುಖ್ಯಾತ ಡ್ರಗ್ಸ್ ಪ್ಲೆಡರ್ ಬಂಧನ: 20ಲಕ್ಷ ಮೌಲ್ಯದ ಮಾದಕ ದ್ರವ್ಯ ವಶ

ಬೆಂಗಳೂರು, ಜ 30, ವಿದೇಶಿ ಮೂಲದ ಕುಖ್ಯಾತ ಪೆಡ್ಲರ್ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಾಂಜಾನಿಯಾ ಮೂಲದ ಎಜಿಕೆ ಸೆಲೆಸ್ಟೈನ್ (39) ಬಂಧಿತ ಆರೋಪಿ. ನಗರದ  ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೊರಮಾವು-ಅಗರದ ಬಾಡಿಗೆ ಮನೆಯೊಂದರಲ್ಲಿ ಆರೋಪಿ  ಎಜಿಕೆ, ಎಸ್ಟೀಸಿ ಎಂಬ ಮಾತ್ರೆಗಳನ್ನು ತನ್ನ ಪರಿಚಿತ ಗಿರಾಕಿಗಳಿಗೆ ಮಾರಾಟ  ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ನಗರ ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು  ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 20 ಲಕ್ಷ ರೂ ಮೌಲ್ಯದ ಎಸ್ಟೇಸಿ ಮಾತ್ರೆಗಳು, ಒಂದು ಕಾರು, ಎರಡು ಮೊಬೈಲ್ ಹಾಗೂ 5000 ರೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಸಿಬಿ ವಿಶೇಷ ವಿಚಾರಣಾ‌ ದಳದ ಸಹಾಯಕ ಪೊಲೀಸ್ ಆಯುಕ್ತ ಡಾ.ಹೆಚ್ ಎನ್ ವೆಂಕಟೇಶ್ ಪ್ರಸನ್ನ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.