ತುಮಕೂರು,ಅ 01: ತುಮಕೂರು ಡಿಸಿಸಿ ಬ್ಯಾಂಕಿನಿಂದ ಹರ್ಷ ಶುಗಸರ್್ ಕಂಪನಿಗೆ 25 ಕೋಟಿ ರೂ. ಸಾಲ ನೀಡಿದ್ದೇವೆ.ಈ ಹಿನ್ನೆಲೆಯಲ್ಲಿ ತಮಗೂ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಬಂದಿರಬಹುದು ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನನಗೆ ಜಾರಿ ನಿರ್ದೇಶನಾಲಯದಿಂದ ನೋಟೀಸ್ ಬಂದಿದೆ.ಸೆ 24 ನೇ ತಾರೀಕಿನಂದು ಕೋರಿಯರ್ ಸಮನ್ಸ್ ನೀಡಲಾಗಿದೆ. ಅಲ್ಲದೇ ಅಕ್ಟೋಬರ್ 8 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸಿನಲ್ಲಿ ತಿಳಿಸಿದ್ದಾರೆ.
ನಿನ್ನೆ ದೂರವಾಣಿ ಕರೆ ಮಾಡಿ 8 ರಂದು ದಸರಾ ಹಬ್ಬದ ಹಿನ್ನೆಲೆಯಲ್ಲಿ8ರ ರಾತ್ರಿ ವಿಚಾರಣೆಗೆ ಬರುವಂತೆ ಹೇಳಿದ್ದಾರೆ. ಯಾವ ಪ್ರಕರಣ, ಯಾವ ದಾಖಲೆ ಎನ್ನುವುದು ನನಗೆ ಮಾಹಿತಿ ಇಲ್ಲ, ನನ್ನ ಪ್ರಕಾರ ನಾವು ಲಕ್ಷ್ಮಿ ಹೆಬ್ಬಾಳಕರ್ ಒಡೆತನದ ಹರ್ಷ ಶುಗರ್ಸಗೆ ಕಂಪನಿಗೆ ಸಾಲ ನೀಡಿದ್ದರ ಬಗ್ಗೆ ಸಮನ್ಸ್ ನೀಡಿರಬಹುದು ಎಂದು ಅವರು ತಿಳಿಸಿದರು. ಇದೇ ವೇಳೆ ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕೆಂದು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಡಾ.ಜಿ.ಪರಮೇಶ್ವರ್ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು,ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದಾಗ ಏಕೆ ಮಧುಗಿರಿ ಜಿಲ್ಲೆಮಾಡಲಿಲ್ಲ. ಜಿಲ್ಲಾ ಉಸ್ತುವಾರಿಯಾಗಿದ್ದರು,ಕಾಂಗ್ರೆಸ್ ಪಕ್ಷದಲ್ಲಿ ನಂಬರ್ 1 ನಾಯಕರಾಗಿ ದ್ದರು ಎಂದು ಅವರು ಪ್ರಶ್ನಿಸಿದ್ದಾರೆ.
ಎಲ್ಲಾ ಅಧಿಕಾರ ಇದ್ದಾಗ ಜಿಲ್ಲೆ ರಚನೆಗೆ ಬಗ್ಗೆ ಮತಾಡದಿದ್ದವು ಈಗ ಜಿಲ್ಲೆ ಮಾಡಿ ಎನ್ನಲು ಅವರಿಗೆ ನೈತಿಕತೆ ಇಲ್ಲ.ನಾನು ಚುನಾವಣಾ ಪ್ರಣಾಳಿಕೆಯಲ್ಲಿ ಮಧುಗಿರಿ ಜಿಲ್ಲೆ ಮಾಡುವ ಪ್ರಸ್ತಾಪ ಮಾಡಿದ್ದೇವೆ.ಲೋಕೋಪಯೋಗಿ ಇಲಾಖೆ ವಿಭಾಗ, ಆಟರ್ಿಓ ವಿಭಾಗೀಯ ಕಚೇರಿ ಇದೆ, ಶೈಕ್ಷಣಿಕವಾಗಿ ಜಿಲ್ಲೆ ಮುಂದುವರೆದಿದೆ. ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕಚೇರಿ ಹೊರತುಪಡಿಸಿದರೆ ಮಧುಗಿರಿಯಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಸೌಲಭ್ಯ ಹಾಗೂ ಕಚೇರಿಗಳಿವೆ ಎಂದು ಅವರು ತಿಳಿಸಿದರು. ಇನ್ನು ಆ ಮನುಷ್ಯನೇ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇದ್ದಾಗ ಏಕೆ ಮಾಡಲಿಲ್ಲ, ಈಗ ತಾನು ಏನೋ ಮಾಡುವುದಕ್ಕೆ ಹೊರಟಿದ್ದೇನೆ ಎಂದು ತೋರಿಸಿಕೊಳ್ಳಲು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಮಧುಗಿರಿ ಜಿಲ್ಲೆ ಮಾಡಲು ನಾನೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ.
ಸೆಪ್ಟೆಂಬರ್ 09 ರಂದು ಭೇಟಿಯಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸುವ ಮೂಲಕ ಜಿಲ್ಲೆ ರಚನೆ ಬಗ್ಗೆ ತಮಗೂ ಆಸಕ್ತಿ ಇದೆ ಎಂದು ಅವರು ತಿಳಿಸಿದರು.