ತೀರ್ಪುನ ಬಗ್ಗೆ ತೃಪ್ತಿಯಿಲ್ಲ, ಆದರೂ ಸ್ವಾಗತಿಸುತ್ತೇವೆ; ಕಾನೂನು ಅಂಶಗಳ ಬಗ್ಗೆ ಸಲಹೆ ಪಡೆಯುತ್ತೇವೆ: ಸುನ್ನಿ ವಕ್ಫ್ ಬೋರ್ಡ್

ಲಕ್ನೋ, ನವೆಂಬರ್ 9 :   ಸುಪ್ರೀಂ ಕೋರ್ಟ್ನ್ ತೀಪು ಅಯೋಧ್ಯೆಯ ರಾಮದೇವಾಲಯದ ಪರವಾಗಿ ಬಂದಿರುವುದರ ಬಗ್ಗೆ ಅತ್ಯಂತ ಜಾಗರೂಕತೆಯಿಂದ ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಕಡೆಯವರು, ನ್ಯಾಯಾಲಯದ ತೀರ್ಪುನ ಕೆಲವು ಅಂಶಗಳ ಬಗ್ಗೆ ಕಾನೂನು ಸಲಹೆ ಪಡೆಯುವುದಾಗಿ ಘೋಷಿಸಿದ್ದಾರೆ. ಆದರೂ ಅವರು ತೀರ್ಪನ್ನು ಸ್ವಲ್ಪ ಮಟ್ಟಿಗೆ ಸ್ವಾಗತಿಸುವುದಾಗಿ ತಿಳಿಸಿದ್ದಾರೆ.  ದೆಹಲಿಯಲ್ಲಿರುವ ಸುನ್ನಿ ವಕ್ಫ್ ಮಂಡಳಿಯ ವಕೀಲ ಝಫರ್ ಯಾಬ್ ಜೀಲಾನಿ ಮಾತನಾಡಿ, ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ, ಆದರೆ ತೀರ್ಪುನ ಬಗ್ಗೆ ತೃಪ್ತರಾಗಿಲ್ಲ ಎಂದು ತಿಳಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ನಾವು ಕಾನೂನು ಸಲಹೆ ತೆಗೆದುಕೊಳ್ಳುತ್ತೇವೆ, ತೀರ್ಪುನ ಕೆಲವು ಅಂಶಗಳನ್ನು ಮುಸ್ಲಿಂ ಕಡೆಯವರು ಒಪ್ಪುವುದಿಲ್ಲ ಎಂದು ತಿಳಿಸಿದರು. ಆದಾಗ್ಯೂ, ಜನರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಸುಪ್ರೀಂಕೋರ್ಟ್ ತೀರ್ಪನ್ನು ಪೂರ್ಣ ಹೃದಯದಿಂದ ಸ್ವೀಕರಿಸಬೇಕು ಎಂದು ಅವರು ಹೇಳಿದರು.    ಮಂಡಳಿಯ ಕಾನೂನು ಸಮಿತಿಯು ತೀರ್ಪನ್ನು ಪರಿಶೀಲಿಸುತ್ತದೆ ಮತ್ತು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ (ಎಐಎಂಪಿಎಲ್ಬಿ)  ಕಾರ್ಯನಿವರ್ಾಹಕ ಸದಸ್ಯ ಮತ್ತು ಈದ್ಗಾ ಐಸ್ಬಾಗ್ ಲಕ್ನೋ ಮೌಲಾನಾ ಖಾಲಿದ್ ರಶೀದ್  ಫಿರಂಗಿ ಮಹಾಲಿ ಹೇಳಿದರು.    ಇದೊಂದು ಐತಿಹಾಸಿಕ ತೀಪು, ಇದರಲ್ಲಿ ಯಾವುದೇ ದೇವಾಲಯದ ಮೇಲೆ ಮಸೀದಿಯನ್ನು ನಿರ್ಮಿಸಲಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಸಹ ಒಪ್ಪಿಕೊಂಡಿದೆ" ಎಂದು ಮೌಲಾನಾ ಹೇಳಿದರು. ಈ ತೀರ್ಪುನಿಂದ ಹಿಂದೂ ಮತ್ತು ಮುಸ್ಲಿಮರ ನಡುವೆ ಸಹೋದರತ್ವವು ಹೊಸ ಹುರುಪಿನಿಂದ ಪ್ರಾರಂಭವಾಗಲಿದೆ ಎಂದು ಒಪ್ಪಿಕೊಂಡರು.    ಮತ್ತೊಂದೆಡೆ, ಅಯೋಧ್ಯೆಯಲ್ಲಿರುವ ಜಮೀನು ವಿವಾದದ ಫಿರ್ಯಾದಿ ಇಕ್ಬಾಲ್ ಅನ್ಸಾರಿ ಕೂಡ ಸುಪ್ರೀಂ ಕೋರ್ಟ್ತೀರ್ಪನ್ನು ಸ್ವಾಗತಿಸಿದ್ದಾರೆ. ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಭೂಮಿಯನ್ನು ನೀಡುವಂತೆ ಸ\ರ್ಕಾರಕ್ಕೆ ಸೂಚಿಸಿದ್ದು ಉತ್ತಮ ಕ್ರಮವಾಗಿದೆ ಎಂದು ಹೇಳಿದರು.   ನಾವು ಜನರಿಗೆ ಶಾಂತಿ ಕಾಪಾಡಿಕೊಳ್ಳಬೇಕು, ಸುಪ್ರೀಂ ಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳಬೇಕು, ಅದು ದೇಶಕ್ಕೆ ಒಳ್ಳೆಯದು ಎಂದು ಕರೆ ನೀಡಿದ್ದೇವೆ ಎಂದರು ಹೇಳಿದರು. ಮೌಲಾನಾ ಕ್ವಾಝಿಮ್ ಅಬ್ಬಾಸ್ ಮಾತನಾಡಿ, ಈ ಸಮಯದಲ್ಲಿ ಶಾಂತವಾಗಿರಲು ಮತ್ತು ತೀರ್ಪನ್ನು ಸ್ವಾಗತಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ಈ ಮಧ್ಯೆ, ಬಿಜೆಪಿ ಮುಖಂಡ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ವಿಜಯ್ ಕಟಿಯಾರ್ ಅವರು, ತೀರ್ಪನ್ನು ಸ್ವಾಗತಿಸಿದ್ದಾರೆ. "ಅಯೋಧ್ಯೆಯಲ್ಲಿ ಮಸೀದಿಯ ನಿರ್ಮಾಣಕ್ಕಾಗಿ ಭೂಮಿಯನ್ನು ಹುಡುಕುವುದು ಈಗ ಸರ್ಕಾರದ ಕರ್ತವ್ಯವಾಗಿದೆ" ಎಂದು ಅವರು ಹೇಳಿದರು, ಜನರು ಶಾಂತವಾಗಿರಲು ಮತ್ತು ತೀರ್ಪುನಿಂದ ಉದ್ವೇಗಕ್ಕೆ ಒಳಗಾಗದಂತೆ ಮನವಿ ಮಾಡಿದರು. ಬಿಜೆಪಿಯ ಫೈರ್ಬ್ರಾಂಡ್ ಎಂದೇ ಖ್ಯಾತರಾಗಿರುವ ಕಟಿಯಾರ್ ಯಾವುದೇ ವಿವಾದಾತ್ಮಕ ಹೇಳಿಕೆಗಳಿಂದ ದೂರವಿದ್ದಾರೆ. ಈಗಾಗಲೇ ಪಕ್ಷದ ಮುಖಂಡರು ಹೇಳಿಕೆ ನೀಡದಂತೆ ಕಟ್ಟಪ್ಪಣೆ ಮಾಡಿದ್ದಾರೆ.