ಹಕ್ಕುಗಳನ್ನು ಅನುಭವಿಸಿ ಕರ್ತವ್ಯ ಮಾಡದ ನಾವುಗಳು ಅದರ ದಿನಾಚರಣೆ ಮಾಡುವ ಯೋಗ್ಯತೆ ಉಳಿಸಿಕೊಂಡಿದ್ದೀವಾ?
ಮತ್ತೊಮ್ಮೆ ಸಂವಿಧಾನ ದಿನಾಚರಣೆಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ ನಾವುಗಳು ಅಂದು ಅವರು ನಮಗಾಗಿ ಬರೆದು ಹೋಗಿರುವ ಸಂವಿಧಾನದ ಪೂರ್ವ ಪೀಠಿಕೆಯನ್ನು ಓದಿ ಪ್ರತಿಜ್ಞೆ ಮಾಡಿ ಪುನೀತರಾಗಿದ್ದೇವೆ. ಜಗತ್ತಿನಲ್ಲಿಯೇ ಇಂಥಹ ಸಂವಿಧಾನ ಬೇರೊಂದಿಲ್ಲ ಎಂದು ಹಾಡಿ ಹೊಗಳಿ ಕೊಂಡಾಡಿದ್ದೇವೆ. ಬಾಬಾ ಸಾಹೇಬರನ್ನು ನೆನೆದು ಭಾವುಕರಾಗಿದ್ದೇವೆ. ಅವರ ಭಾವಚಿತ್ರಕ್ಕೊಂದು ಹೂಮಾಲೆ ಹಾಕಿ ಕೈ ಮುಗಿದು ನಿಂತಿದ್ದೇವೆ. ಅವರಿಲ್ಲದೇ ಹೋಗಿದ್ದರೆ? ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಎದುರಿದ್ದವರ ಆತ್ಮ ಪರಿವರ್ತನೆ ಮಾಡುವ ಹಾಗೆ ಭಾಷಣ ಬಿಗಿದಿದ್ದೇವೆ. ಆದರೆ ನನಗೆ ಈಗಲೂ ಅರಿ"ಗೆ ಬಾರದೇ ಉಳಿದಿರುವ ಒಂದು ಪ್ರಶ್ನೆ ಎಂದರೆ ಇಷ್ಟೆಲ್ಲ ಚಾಚೂ ತಪ್ಪದೆ ಪ್ರತಿವರ್ಷ ಮಾಡಿ ಮುಗಿಸುವ ನಾವುಗಳು ನಿಜಕ್ಕೂ ಆ ಸಂವಿಧಾನದ ಆಶಯವನ್ನು ಈಡೇರಿದ್ದಿವಾ? ಬಾಬಾಸಾಹೇಬರನ್ನು ಹಾಡಿ ಹೊಗಳುವ ನಾವುಗಳು ಅವರು ಹಾಕಿಕೊಟ್ಟ ಜೀವನ ಮಾರ್ಗದಲ್ಲಿ ನಡೆಯುವುದಕ್ಕೆ ಮನಸು ಮಾಡಿದ್ದೀವಾ? ಶಿಕ್ಷಣ, ಸಂಘಟನೆ, ಹೋರಾಟ ಎನ್ನುವ ಸೂತ್ರಗಳಲ್ಲಿ ಯಾವುದನ್ನಾದರೂ ನಾವು ಸರಿಯಾಗಿ ನಿಭಾುಸಿದ್ದೀವಾ? ಈ ದೇಶದ ಆಗಿನ ಸ್ಥಿತಿಯ ಜೊತೆಗೆ ಮುಂದಾಗಬೇಕಿದ್ದ ಬದಲಾವಣೆಯನ್ನು ಸೂಚಿಸಿ ರಚಿಸಲಾದ ಸಂವಿಧಾನವನ್ನು ನಿಜಕ್ಕೂ ನಾವು ಯಶಸ್ವಿ ಮಾಡಿದ್ದೀವಾ? ಧರ್ಮ ನಿರಪೇಕ್ಷ ಭಾರತದ ಎಂದು ಜಾತ್ಯತೀತ ಸಂ"ಧಾನವನ್ನು ನಮಗಾಗಿ ನೀಡಿದನ್ನು ನಾವು ಸತ್ಯವೆಂದು ಸಾಬೀತು ಮಾಡಿದ್ದೀವಾ? ಜಗತ್ತಿನ ಉತ್ಕೃಷ್ಟ ಸಂ"ಧಾನ ಎಂದು ಎದೆ ತಟ್ಟಿಕೊಂಡು ಹೇಳಿಕೊಳ್ಳುವಂತೆ ನಾವು ನಮ್ಮ ಸಂವಿಧಾನಕ್ಕೆ ಗೌರವ ತೋರಿಸಿದ್ದೀವಾ? ಸಂವಿಧಾನದ ಮೂಲಕ ಪಡೆದುಕೊಂಡ ಅಧಿಕಾರವನ್ನು ಸಮರ್ಥವಾಗಿ ಬಳಕೆ ಮಾಡುತ್ತ ಆ ಸಂ"ಧಾನದ ಯಶಸ್ಸಿಗಾಗಿ ನಾವೆಲ್ಲ ಶ್ರ"ುಸಿದ್ದೀವಾ? ಸಂವಿಧಾನದ ಮೂಲಕ ದೊರೆತ ಹಕ್ಕುಗಳಿಗೆ ಪ್ರತಿಯಾಗಿ ನಿಷ್ಠೆುಂದ ಕರ್ತವ್ಯ ಮಾಡಿದ್ದೀವಾ? ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಆಲೋಚನೆಗೆ ಇಳಿದಾಗ ಯಾವುದಕ್ಕೂ ಸ್ಪಷ್ಟವಾದ ಉತ್ತರ ಸಿಗುವುದಿಲ್ಲ. ಅಪ್ಪನಿಗೊಂದು ದಿನ, ಅಮ್ಮನಿಗೊಂದು ದಿನ, ಗೆಳಯನಿಗೊಂದುದಿನ, ಪ್ರೇಯಸಿಗೊಂದುದಿನ "ುಸಲಿರಿಸಿ ದಿನಾಚರಣೆಗಳನ್ನು ಮಾಡಿ ಮುಗಿಸುವಂತೆ ಸಂ"ಧಾನಕ್ಕೊಂದು ದಿನ "ುಸಲಿರಿಸಿ ಮರೆತು ಬಿಟ್ಟೆವಾ? ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ಹೌದ ಅಥವಾ ಇಲ್ಲ ಎನ್ನುವ ಉತ್ತರವನ್ನು ಪಡೆದುಕೊಳ್ಳಬೇಕು ಎಂದರೆ ಅವುಗಳನ್ನು ಕೇವಲ ನಾನು ಮಾತ್ರ ಕೇಳಿದರೆ ಸಾಲದು. ಬದಲಿಗೆ ನಮ್ಮ ದೇಶದ ಪ್ರತಿಯೊಬ್ಬ ಭಾರತೀಯನು ತನಗೆ ತಾನೇ ಕೇಳಿಕೊಳ್ಳಬೇಕು. ಆಗ ಮಾತ್ರ ಸಮರ್ಕವಾದ ಉತ್ತರವನ್ನು ಪಡೆದುಕೊಳ್ಳಬಹುದು.
ಭಾರತಕ್ಕೆ ಒಂದು ಉತ್ತಮವಾದ ಸಂವಿಧಾನ ಬೇಕು ಎಂದು 1946 ರಲ್ಲಿ ರಚನೆಯಾದ ಸಂವಿಧಾನ ಸ"ುತಿಯ 389 ಜನ ಸದಸ್ಯರು ಬೇರೆ ಬೇರೆ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಒಂದು ಬೃಹತ್ ಸಂ"ಧಾನವನ್ನು ನೀಡಿತು. ಅದರಲ್ಲೂ ಭಾರತದ ಸ್ಥಿತಿ ಇತರ ದೇಶಕ್ಕಿಂತ ಭಿನ್ನವಾಗಿರುವುದರಿಂದ ಯಾವ ರೀತಿಯ ಸಂ"ಧಾನವನ್ನು ನೀಡಬೇಕು ಎನ್ನುವುದನ್ನು ನಿರ್ಧಾರ ಮಾಡಿ ಈ ಅದ್ಭುತ ಆನೇಗಾತ್ರದ ಸಂ"ಧಾನವನ್ನು ನಮಗಾಗಿ ನೀಡಿದರು. ಆ ಸಂದರ್ಭದಲ್ಲಿ ಅಂದರೆ ಭಾರತದ ಸಂವಿಧಾನವನ್ನು ನಮಗೆ ನಾವೇ ಅರ್ಿಸಿಕೊಂಡು ಅಂಗೀಕರಿಸುವ ಸಂದರ್ಭದಲ್ಲಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವರದಿಗಾರನೊಬ್ಬ ಬಾಬಾ ಸಾಹೇಬರಿಗೆ ಒಂದು ಪ್ರಶ್ನೆ ಮುಂದಿಡುತ್ತಾನೆ. "ನೀವು ರಚಿಸಿರುವಂತೆ ಈ ಸಂ"ಧಾನ ಒಂದು ಶ್ರೇಷ್ಠ ಸಂ"ಧಾನವೆಂದು ನೀವು ಒಪ್ಪಿಕೊಳ್ಳುತ್ತೀರಾ?" ಎಂದು. ಈ ಮಾತನ್ನು ಕೇಳುತ್ತಲೇ ಉತ್ತರಿಸಿದ ಬಾಬಾಸಾಹೇಬರು "ಯಾವುದೇ ದೇಶದ ಸಂ"ಧಾನವನ್ನು ರಚಿಸುವಾಗ ಅತ್ಯುತ್ತಮವಾದ ಪದಪುಂಜಗಳನ್ನು ಬಳಸಿಕೊಂಡು ಬರೆದಿದ್ದರೂ ಕೂಡ ಅದನ್ನು ಜಾರಿಗೆ ತರುವ ಹಾಗೂ ಅದನ್ನು ಆಚರಿಸುವ ಜನಗಳ ಬುದ್ಧಿ ಮಟ್ಟ ಕಡಿಮೆಯದ್ದಾಗಿದ್ದರೆ ಅದು ಯಾವತ್ತೂ ಯಶಸ್ವಿ ಸಂವಿಧಾನವಾಗುದಕ್ಕೆ ಸಾಧ್ಯವಾಗುವುದಿಲ್ಲ. ಹಾಗೆಯೇ ಯಾವುದೇ ದೇಶದ ಸಂವಿಧಾನವನ್ನು ಎಷ್ಟೇ ನಿಕೃಷ್ಟ ಪದಗಳನ್ನು ಬಳಸಿಕೊಂಡು ಬರೆದಿದ್ದರೂ ಕೂಡ ಅದನ್ನು ಅನುಸರಿಸುವ ಮತ್ತು ಆಚರಿಸುವ ಜನಗಳ ಬುದ್ದಿಮಟ್ಟ ಉತ್ತಮವಾಗಿದ್ದೇ ಆದಲ್ಲಿ ಅದು ಖಂಡಿತವಾಗಿಯೂ ಯಶಸ್ವಿ ಸಂವಿಧಾನವಾಗುವುದರಲ್ಲಿ ಎರಡು ಮಾತಿಲ್ಲ. ಆ ನಿಟ್ಟಿನಲ್ಲಿ ಭಾರತ ಸಂವಿಧಾನವನ್ನು ನಮಗೆ ನಾವೇ ಅರ್ಿಸಿಕೊಳ್ಳುವ ಮೂಲಕ ಇದರ ಯಶಸ್ಸು ಅಪಯಶಸ್ಸನ್ನು ಜನರ ಕೈಗೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಜನಗಳು ನಡೆದುಕೊಳ್ಳು ರೀತಿಯ ಮೇಲೆ ಈ ಸಂವಿಧಾನದ ಭವಿಷ್ಯ ನಿಂತಿರುತ್ತದೆ" ಎಂದು ಹೇಳಿದರು. ನನಗೆ ಆ ಮಾತು ನಿಜಕ್ಕೂ ಅಧ್ಭುತ ಹಾಗೂ ವಾಸ್ತವಿಕವಾಗಿ ಒಪ್ಪಿಕೊಳ್ಳಲೇ ಬೇಕಾದ ಶ್ರೇಷ್ಠವಾದ ನುಡಿಗಳು ಎಂದೆನಿಸುತ್ತದೆ. ಕಾರಣ ಈ ದೇಶದ ಸಂ"ಧಾನದ ಯಶಸ್ಸು ನಮ್ಮ ಕೈಯಲ್ಲಿದೆ. ಅದಕ್ಕೆ ಹೇಳಿದ್ದು ಕೇವಲ ಸಂ"ಧಾನ ಒಪ್ಪಿಕೊಂಡ ದಿನವನ್ನು ಹಬ್ಬವನ್ನಾಗಿ ಆಚರಣೆ ಮಾಡುವ ಮುನ್ನ ಅದನ್ನು ನಾವು ಯಶಸ್ಸಿನ ಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದೀವಾ? ಎನ್ನುವುದರ ಕುರಿತು ಚಿಂತನೆ ಮಾಡುವುದು ಅವಶ್ಯಕವಾಗಿದೆ ಎಂದು.
ನಾನು ಈ ಮಾತು ಹೇಳುತ್ತಿರುವುದು ಏಕೆ ಎನ್ನುವುದು ನಿಮಗೀಗಾಗಲೇ ಅರ್ಥವಾಗಿರುತ್ತದೆ. ಏಕೆಂದರೆ ನಾವು ಕೂಡ ಈ ಸಂವಿಧಾನದನ ಒಂದು ಭಾಗವೇ ಅಲ್ಲವೆ? ಆದರೆ ಅವರೆಲ್ಲ 2ವರ್ಷ 11 ತಿಂಗಳು 18 ದಿನಗಳ ಕಾಲ ಶ್ರಮ ಹಾಕಿ ಮಾಡಿದ ಕಾರ್ಯವನ್ನು ನಾವು ಇಷ್ಟು ವರ್ಷಗಳಲ್ಲಿ ಯಶಸ್ವಿಗೊಳಿಸಿದ್ದೀವಾ? 1950ರಲ್ಲಿಯೇ ಸಂ"ಧಾನ ಜಾರಿಗೆ ಬಂದಿತು. ಅಂದಿನಿಂದ ಈ ಭಾರತವನ್ನು ಗಣರಾಜ್ಯ ಭಾರತ ಎಂದು ಕರೆದೆವು. ಆದರೆ ಅದರ ನಂತರದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ನೋಡಿದಾಗ ಅಂದು ನೀಡಿದ ಸಂವಿಧಾನ ಇಂದು ಅರ್ಥ ಕಳೆದುಕೊಳ್ಳುತ್ತಿದೆ. ಅಂದವರು ಮಾಡಿದ ಕಾರ್ಯ ಇಂದು ವ್ಯರ್ಥವಾಗುತ್ತಿದೆ ಎನಿಸುತ್ತಲಿದೆ. ಇದನ್ನು ಮೊದಲೇ ಅರ್ಥ ಮಾಡಿಕೊಂಡಿದ್ದ ಹಾಗೂ ಭಾರತೀಯರ ಮನಸ್ಥಿತಿಯನ್ನು ಅಧ್ಯಯನ ಮಾಡಿದ್ದ ಇಂಗ್ಲಂಡನ ಮಾಜಿ ಪ್ರಧಾನಿ ವಿನ್ಸಂಟ್ ಚರ್ಚಿಲ್ ಈ ದೇಶಕ್ಕೆ ಸ್ವಾತಂತ್ರ್ಯ ಕೊಡಬೇಕು ಎನ್ನುವುದರ ಕುರಿತು ಚರ್ಚೆ ಬಂದಾಗ ಈ ದೇಶದ ಮುಂದಿನ ಸ್ಥಿತಿಯನ್ನು ಅಂದೇ ನಿಖರವಾಗಿ ಹೇಳಿ ಮುಗಿಸಿದ್ದರು. ಪಾರ್ಲಿಮೆಂಟ್‌ನ ಮೇಜನ್ನು ಕುಟ್ಟಿ ಭಾರತದ ಭವಿಷ್ಯವನ್ನು ಇಡೀ ಜಗತ್ತಿಗೆ ಸಾರಿ ಸಾರಿ ಹೇಳಿದ್ದರು. ಆದರೆ ಆ ಭ"ಷ್ಯ ಸುಳ್ಳಾಗುತ್ತದೆ ಎಂದುಕೊಂಡು ನಮ್ಮವರು ನಮಗೆ ಸಂವಿಧಾನ ರಚಿಸಿ ಕೊಟ್ಟರು. ಆದರೆ ಸಂ"ಧಾನದ ಆಶಯವಾಗಲಿ ಅದನ್ನು ರಚಿಸಿ ನಮ್ಮ ಕೈಗಿತ್ತ ಧೀಮಂತರ ಕನಸಾಗಲಿ ನನಸಾಗದೇ ಉಳಿದಿರುವುದು ನಮ್ಮ ದೌರ್ಭಾಗ್ಯ. ಅಷ್ಟಕ್ಕೂ ಚಿರ್ಚಿಲ್ ಹೇಳಿದ ಆ ಮಾತುಗಳಾದರೂ ನೆನಪಿದೆಯೇ ನಿಮಗೆ? ನೆನಪಿದ್ದರೆ ಒಳಿತು. ಇಲ್ಲದೇ ಹೋಗಿದ್ದರೆ, ಅಥವಾ ಆ ಮಾತುಗಳನ್ನು ಯಾವತ್ತೂ ಕೇಳದೇ ಇದ್ದಿದ್ದರೆ ಒಂದು ಬಾರಿ ಓದಿ ಬಿಡಿ ನಿಮಗೇ ಅರ್ಥವಾಗುತ್ತದೆ. ನನಗಂತೂ ಆ ಮಾತುಗಳು ಪ್ರತೀಕ್ಷಣವು ಇನ್ನಿಲ್ಲದಂತೆ ಕೆಣಕುತ್ತವೆ. ಆ ವ್ಯಕ್ತಿ ಭಾರತದ ದೇಶದಲ್ಲಿರುವ ನಾಯಕರ ಹಾಗೂ ನಾಗರಿಕರ ಕುರಿತಾಗಿ ವಾತನಾಡಿದ್ದು ಭಾರತದ ಭ"ಷ್ಯವಾಣಿಯಾುತಾ? ಆ ಭವಿಷ್ಯವಾಣಿ ಪ್ರಸ್ತುತ ಸತ್ಯವಾುತಾ? ಎನ್ನುವ ಅನುಮಾನ ಕಾಡುತ್ತದೆ. ಬ್ರಿಟನ್ ಪಾರ್ಲಿಮೆಂಟ್ ಗದ್ದರಿಸುವಂತೆ ಅಬ್ಬರಿಸಿ ಮಾಡಿದ ಆ ಐತಿಹಾಸಿಕ ಭಾಷಣದಲ್ಲಿ ಉಲ್ಲೇಖವಾದ ಪದಗಳೆಂದರೆ "ಕಠಜಡಿ ತಿಟಟ ರಠ ಣಠ ಣಜ ಚಿಟಿ ಠ ಡಿಛಿಛಿಚಿ, ಡಿಠಣ, ಜಿಡಿಜಜಛಠರಣಜಢಿ; ಚಿಟಟ ಋಜಚಿಟಿ ಟಜಚಿಜಜಢಿ ತಿಟಟ ಛಜ ಠ ಟಠ ಛಿಚಿಟಛಜಡಿ ್ಘ ಟಜಟಿ ಠ ಣಡಿಚಿತಿ . ಖಿಜಥಿ ಚಿತಜ ತಿಜಜಣ ಣಠರಣ ್ಘ ಟಟಥಿ ಜಚಿಡಿ. ಖಿಜಥಿ ತಿಟಟ ಜಿರಣ ಚಿಟಠಣ ಣಜಜಟತ ಜಿಠ ಠಿಠಜಡಿ ್ಘ ಋಜಚಿ ತಿಟಟ ಛಜ ಟಣ ಟಿ ಠಿಠಣಛಿಚಿಟ ಚಿಡಣಚಿಛಛಟ. ಂ ಜಚಿಥಿ ತಿಠಟಜ ಛಿಠಜ ತಿಜಟಿ ಜತಜಟಿ ಚಿಡಿ ಚಿಟಿಜ ತಿಚಿಣಜಡಿ ತಿಠಟಜ ಛಜ ಣಚಿಥಜ ಟಿ ಋಜಚಿ" ಎಂದು ಹೇಳಿ ತಮ್ಮ ಮಾತುಗಳನ್ನು ಮುಗಿಸುತ್ತಾರೆ. ಅದರೊಂದಿಗೆ ಮುಂದೆ ಭಾರತ ಹೇಗಿರಲಿದೆ ಎನ್ನುವುದರ ಸ್ಪಷ್ಟ ಚಿತ್ರಣವನ್ನು ನಮಗೆ ತಿಳಿಸುತ್ತಾರೆ. ಅಂದವರು ಮಾಡಿದ ಭಾಷಣ ಭಾಷಣವಾಗಿರದೆ ಮುಂದಿನ ಭಾರತದ ಕಲ್ಪನೆಯಾಗಿತ್ತು. ಹಾಗೆಯೇ ಆ ಕಲ್ಪನೆ ಇಂದು ನಿಜವೂ ಆಗಿರುವುದು ನಮ್ಮ ದೌರ್ಭಾಗ್ಯ. ಅದಕ್ಕೆ ಕೇಳಿದ್ದು ಸಂ"ಧಾನ ದಿನಾಚರಣೆ ಆಚರಿಸುವ ನಾವುಗಳು ಆ ಸಂವಿಧಾನದ ಆಶಯಗಳನ್ನು ಈಡೇರಿಸಿದ್ದೀವಾ? ಬಾಬಾಸಾಹೇಬರು ಆಪತ್ರಕರ್ತನಿಗೆ ನೀಡಿದ ಉತ್ತರದಂತೆ ಈ ದೇಶದ ಸಂ"ಧಾನ ಜಗತ್ತಿನ ಶ್ರೇಷ್ಠವಾದ ಸಂವಿಧಾನ ಎನ್ನುವ ಹೆಗ್ಗಳಿಕೆಗೆ ಕಾರಣವಾಗುವಂತೆ ಮಾಡಿದ್ದೀವಾ? ಎಂದು.
ನವೆಂಬರ್ 29 ಬಂದಿತು ಎಂದು ಎಲ್ಲ ಶಾಲಾ ಕಾಲೇಜುಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನಿಟ್ಟು, ಸಂವಿಧಾನದ ಪೂರ್ವ ಪೀಠಿಕೆಯನ್ನು ಬೋಧನೆ ಮಾಡುವ ನಾವುಗಳು ಯಾವತ್ತಾದರೂ ಅದರಲ್ಲಿ ಬರುವ ಅಂಶಗಳಿಗೆ ತಕ್ಕಂತೆ ನಡೆದುಕೊಳ್ಳುತ್ತೀವಾ? ಅಥವಾ ನಡೆದುಕೊಂಡಿದ್ದೀವಾ? ಖಂಡಿತ ಇಲ್ಲ. ನಾವುಗಳು ಈ ದೇಶದಲ್ಲಿ ವಾಸಿಸುತ್ತಿದ್ದೇವೆ, ಈ ದೇಶದ ಅನ್ನ ತಿನ್ನುತ್ತಿದ್ದೇವೆ ಆದರೆ ಯಾವತ್ತೂ ಈ ದೇಶದ ಕಾನೂನನ್ನು ಗೌರವಿಸುವ ಕಾರ್ಯ ಮಾಡುತ್ತಿಲ್ಲ. ಅದಕ್ಕೆ ಹೇಳಿದ್ದು ಯಶಸ್ವಿ ಸಂವಿಧಾನ ಎಂದು ಕರೆಯುವ ಮುನ್ನ ಕೊಂಚ ಯೋಚನೆ ಮಾಡುವುದು ಒಳಿತು ಎಂದು. ಭಾರತ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಜಾತ್ಯತೀತ ಎನ್ನುವ ಪದವನ್ನು ಬಳಕೆ ಮಾಡುತ್ತೇವೆ. ಆದರೆ ನಮ್ಮ ಯಾರ ಬಳಿ ಆ ತತ್ವಗಳಿವೆ ಎಂದು ಹೇಳಿ ನೋಡೋಣ. ಎಲ್ಲರದು ಅವರವರ ಧರ್ಮದ ವಿಚಾರಗಳೆ. ಇರಲಿ ಬೇಡ ಎನ್ನುತ್ತಿಲ್ಲ. ಆದರೆ ಎಲ್ಲ ಕಡೆಯು ಧರ್ಮದ ಲೆಕ್ಕಾಚಾರವನ್ನು ಹಾಕಿಕೊಳ್ಳುತ್ತ ಬದುಕುವ ನಾವುಗಳು ಸಂವಿಧಾನದ ವಿಷಯ ಬಂದಾಗ ಮಾತ್ರ ಅದನ್ನು ಜಾತ್ಯತೀತ ಎಂದು ಕರೆದರೆ ಹೇಗೆ? ಇನ್ನು ಆರಾಧನಾ ಸ್ವಾತಂತ್ರ್ಯ ಎನ್ನುವುದನ್ನು ಭಾರತ ಸಂವಿಧಾನ ಒದಗಿಸಿದೆ. ಅದರ ಅರ್ಥ ನಮಗೇ ಬೇಕಾದ ಧರ್ಮವನ್ನು ಆಚರಣೆ ಮಾಡಬಹುದು. ಆದರೆ ಇಷ್ಟವಾದ ಧರ್ಮವನ್ನು ಆಚರಣೆ ಮಾಡುವುದನ್ನು ಬಿಟ್ಟು ಯಾರ ಇಷ್ಟಕ್ಕೋ ಕಷ್ಟ ಬಿದ್ದು ಮತಾಂತರಕ್ಕೆ ಒಳಗಾಗಿಸುವ ಪ್ರಕ್ರಿಯೆಗಳು ನಡೆದಾಗ ಈ ಆರಾಧನಾ ಸ್ವಾತಂತ್ರ್ಯವು ಕೂಡ ಅರ್ಥ ಕಳೆದುಕೊಳ್ಳುತ್ತದೆ ಅಲ್ಲವೇ? ರಾಜಕೀಯ ಸಮಾನತೆ ಅಥವಾ ರಾಜಕೀಯ ನ್ಯಾಯವನ್ನು ಸಂವಿಧಾನ ಒದಗಿಸುತ್ತದೆ. ಅದರನ್ವಯ 18 ವರ್ಷ ತುಂಬಿದ ಮತ್ತು 18 ವರ್ಷದ ನಂತರದ ಪ್ರತಿಯೊಬ್ಬ ಭಾರತೀಯನು ಮತ ಚಲಾುಸಬಹುದು. ಹಾಗೂ ಅದರನ್ವಯ ವಯಸ್ಸಿಗೆ ಅನುಗುನವಾಗಿ ಚುನಾವಣೆಗೆ ಸ್ಪರ್ಧಿಸುವ ಅವಕಾಶ ನೀಡುತ್ತದೆ. ಆದರೆ ಇಲ್ಲಿ ಮತ ಚಲಾುಸಬಹುದೇ ವಿನಃ ಸ್ಪರ್ಧೇ ಮಾಡಲು ಸಾಧ್ಯವಿಲ್ಲ. ಸ್ಪರ್ಧೇ ಮಾಡಬಹುದು ಆದರೆ ಗೆಲ್ಲುವುದಕ್ಕೆ ಸಾಧ್ಯವಾಗುವುದಿಲ್ಲ. ಕಾರಣ ಇಲ್ಲಿ ಏನೇ ಆದರೂ ದುಡ್ಡಿದ್ದವರಿಗೆ ಮಾತ್ರ ಅಧಿಕಾರ ಎನ್ನುವ ಹಾಗಾಗಿರುವುದು ಮತ್ತು ಅಪ್ಪ ಅಧಿಕಾರದಲ್ಲಿದ್ದರೆ ಮುಂದಿನ ಎಲ್ಲ ಅಧಿಕಾರ ಅವರ ಪೀಳಿಗೆಗೆ ದಕ್ಕುವುದು ಎನ್ನುವಂತಾದಾಗ ರಾಜಕೀಯ ನ್ಯಾಯಕ್ಕೆ ಅರ್ಥವಾದರು ಎಲ್ಲಿರುತ್ತದೆ ನೀವೇ ಹೇಳಿ? ಸಮಾಜವಾದ, ಭ್ರಾತೃತ್ವ ಎನ್ನುವ ಪದಗಳನ್ನು ಸಂ"ಧಾನದಲ್ಲಿ ಸೇರಿಸಿ ಬಂಡವಾಳಶಾ"ಗಳಿಗೆ ರತ್ನಗಂಬಳಿ ಹಾಸುವ ನಾವುಗಳು ಭ್ರಾತೃತ್ವ ಎನ್ನುವ ಪದಕ್ಕೆ ಬೆಂಕಿ ಹಚ್ಚಿ ಮ"ಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಾಗ ಈ ದೇಶದ ಸಂ"ಧಾನವನ್ನು ನಾವು ಯಶಸ್ವಿಗೊಳಿಸಿದ್ದೀವಾ ಎನ್ನುವ ಪ್ರಶ್ನೆ ನಮ್ಮಲ್ಲಿ ಹುಟ್ಟುವುದಿಲ್ಲವೆ ಹೇಳಿ? ಅದಕ್ಕೆ ಕೇಳಿದ್ದು ಸಂವಿಧಾನದ ಆಶಯಗಳನ್ನು ಈಡೇರಿಸದೆ ಬರೀ ಬಡಾು ಕೊಚ್ಚಿಕೊಂಡರೆ ಏನು ಲಾಭ ಎಂದು.
ಇರುವ ಮನೆಗೆ ಬಾಡಿಗೆ ಕಟ್ಟುತ್ತೇವೆ, ಕುಡಿಯುವ ನೀರಿಗೆ ಕರ ತುಂಬುತ್ತೇವೆ, ಬಳಸುವ ವಿದ್ಯುತ್‌ಗೆ ಬಿಲ್ ಪಾವತಿಸುತ್ತೇವೆ. ಆದರೆ ಪಡೆದುಕೊಂಡಿರುವ ಹಕ್ಕುಗಳಿಗೆ ಪ್ರತಿಯಾಗಿ ಕರ್ತವ್ಯಗಳನ್ನು ಮಾಡಿರಿ ಎಂದರೆ ಸುಮ್ಮನಾಗಿ ಬಿಡುತ್ತೇವೆ. ಇದ್ಯಾವ ನ್ಯಾಯ? ಮೂಲಭೂತ ಹಕ್ಕುಗಳ ಉಲ್ಲಂಘನೆಯಾದರೆ ಕೋರ್ಟಿಗೆ ಹೋಗಿ ಸಂವಿಧಾನದತ್ತವಾಗಿಯೇ ಅವುಗಳನ್ನು ಪಡೆದುಕೊಳ್ಳುತ್ತೇವೆ. ಆದರೆ ಅದೇ ಸಂವಿಧಾನ ನೀಡಿದ ಮೂಲಭೂತ ಕರ್ತವ್ಯಗಳನ್ನು ಮಾಡಬೇಕಾದರೆ "ಂದೆ ಮುಂದೆ ನೋಡುತ್ತೇವೆ. ಮುಲಾಜಿಲ್ಲದೇ ಅವುಗಳನ್ನು ಧೀಕ್ಕರಿಸಿ ನಡೆದು ಬಿಡುತ್ತೇವೆ. ಅಂದ ಮೇಲೆ ನಮಗೆ ಸಂವಿಧಾನ ಅಂಗೀಕಾರಗೊಂಡ ದಿನದ ಆಚರಣೆ ಮಾಡುವ ಅಧಿಕಾರ"ದೆಯಾ ಹೇಳಿ? ಚುನಾವಣೆಗಳಲ್ಲಿ ಧರ್ಮದ ಹೆಸರಲ್ಲಿ ಪ್ರಚಾರ ಕೇಳಬಾರದು ಎಂದು ಸಂವಿಧಾನ ಹೇಳುತ್ತದೆ. ಆದರೆ ಪ್ರತಿಯೊಂದು ಪಕ್ಷವು ಧರ್ಮದ ನಂಟಿನಿಂದಲೇ ಹುಟ್ಟಿಕೊಳ್ಳುತ್ತವೆ. ಮತಯಾಚನೆ ಮಾಡುವಾಗ ಜಾತಿ ಮುಂದೆ ತರಬಾರದು ಎಂದು ಸಂವಿಧಾನ ಹೇಳುತ್ತದೆ. ಆದರೆ ಪಕ್ಷದ ಟಿಕೇಟು ನೀಡುವಾಗ ಜಾತಿ ಲೆಕ್ಕಾಚಾರವನ್ನೇ ಮಾಡಲಾಗುತ್ತದೆ. ಪಾರದರ್ಶಕ ಮತದಾನ ನಡೆಯಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ದುಡ್ಡಿಗಾಗಿಯೇ ಮತಗಳ ಮಾರಾಟವಾಗುತ್ತದೆ. ಪಕ್ಷಾಂತರ ಪಿಡುಗನ್ನು ತಪ್ಪಿಸಬೇಕೆಂದು ಸಂವಿಧಾನ ಹೇಳುತ್ತದೆ. ಆದರೆ ಅಧಿಕಾರಕ್ಕಾಗಿ ಆ ಕಾಯ್ದೆಯನ್ನೇ ತುಳಿದು ಗದ್ದುಗೆ ಏರಲಾಗುತ್ತದೆ. ರಾಷ್ಟ್ರಗೀತೆಗೆ, ರಾಷ್ಟ್ರಧ್ವಜಕ್ಕೆ, ರಾಷ್ಟ್ರ ಲಾಂಛನಕ್ಕೆ ಗೌರವ ನಿಡಬೇಕು ಎಂದು ಸಂ"ಧಾನ ಹೇಳುತ್ತದೆ. ಆದರೆ ಅವುಗಳನ್ನು ನಾವು ಸಿಕ್ಕ ಸಿಕ್ಕ ಹಾಗೆ ಬಳಕೆ ಮಾಡಿಕೊಳ್ಳುತ್ತೇವೆ. ರ್್ಟರಾಯ ಸ್ಮಾರಕಗಳನ್ನು ರಕ್ಷಿಸಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಅವುಗಳನ್ನು ಧರ್ಮದ ಹೆಸರಲ್ಲಿ ನಂದು ನಿಂದು ಎಂದು ಕಿತ್ತಾಡಿ ಕೊನೆಗೆ ಸ್ಮಶಾನದ ಕುರುಹುಗಳನ್ನಾಗಿ ಮಾಡುತ್ತಿದ್ದೇವೆ. ಅಂದ ಮೇಲೆ ಈ ದೇಶದ ಸಂವಿಧಾನವನ್ನು ನಾವು ಉಳಿಸಿದ್ದೀವಾ? ಬೆಳೆಸಿದ್ದೀವಾ? ಯಶಸ್ವಿಗೊಳಿಸಿದ್ದೀವಾ? ಅದರ ಆಶಯಗಳಿಗೆ ಬೆಲೆ ಕೊಟ್ಟಿದ್ದೀವಾ? ಹೇಳಿ. ಯಾವುದು ಇಲ್ಲ. ಎಲ್ಲವೂ ಇಲ್ಲಿ ಬೂಟಾಟಿಕೆ. ಎಲ್ಲರದೂ ಇಲ್ಲಿ ಬಾು ಮಾತಿನ ಪ್ರಸಾದವಷ್ಟೆ. ಯಾರಿಗೂ ಈ ದೇಶದ ಸಂ"ಧಾನದ ಮೇಲೆ ಗೌರವವಿಲ್ಲ. ಇದ್ದೀದ್ದರೆ ಈ ದೇಶ ಅಭಿವೃದ್ಧಿಶೀಲವಾಗುಳಿಯುತ್ತಿರಲಿಲ್ಲ. ಬದಲಿಗೆ ಅಭಿವೃದ್ಧಿ ಹೊಂದಿದ ದೇಶವಾಗುತ್ತಿತ್ತು. ಇದೆಲ್ಲವನ್ನು ಕಂಡಾಗ ನಿಜಕ್ಕೂ ಚರ್ಚಿಲ್ ಹೇಳಿದ ಮಾತು ಸತ್ಯವಾಗುತ್ತಿದೆಯೇ ಎನ್ನುವ ಪ್ರಶ್ನೆ ನಮ್ಮನ್ನು ಕಾಡದೇ ಬಿಡುವುದಿಲ್ಲ.
ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಾಗ ನಡೆದ ಸಂಗ್ರಾಮ ಎಲ್ಲರಿಗೂ ಗೊತ್ತಿದೆ. ಹೋರಾಟದ ಪರಿ, ಸಾವು ನೋವುಗಳ ಲೆಕ್ಕಾಚಾರ, ವಿದೇಶಿಯರು ಅನಾಚಾರ, ನಮ್ಮವರೇ ನಮಗೆ ಮಾಡಿದ ಮೋಸದ ದುರಾಚಾರ ಎಲ್ಲವನ್ನು ಕಂಡಿದ್ದೇವೆ. ಆದರೂ ಈ ದೇಶದ ಮೂಲ ಪರಂಪರೆುಂದಾಗಿ ಜಗತ್ತಿನೆದುರು ತಲೆ ಎತ್ತಿ ನಿಂತಿದ್ದೇವೆ. ಆದರೆ ಅದನ್ನು ಮುಂದುವರಿಸಿಕೊಂಡು ಬರಬೇಕಾದ ನಾವುಗಳು ಎತ್ತ ಸಾಗುತ್ತಿದ್ದೇವೆ ಎನ್ನುವುದೇ ಅರ್ಥವಾಗುತ್ತಿಲ್ಲ. ದೇಶ ನಮಗೇನು ಮಾಡಿತು ಎನ್ನುವ ಪ್ರಶ್ನೆಯನ್ನಿಟ್ಟುಕೊಂಡು ಮಾತನಾಡುವ ನಮಗಳಿಗೆ ಈ ದೇಶಕ್ಕಾಗಿ ನಾನೇನು ಮಾಡಿದ್ದೇನೆ ಎನ್ನುವುದು ತಿಳಿಯಲೇ ಇಲ್ಲ. ಏನು ಮಾಡಬೇಕಾಗಿದೆ ಎನ್ನುವುದರ ಅರಿವು ಕೂಡ ಆಗಲಿಲ್ಲ. ಇದೇ ಕಾರಣದಿಂದಾಗಿ ಈ ದೇಶದ ಸಂ"ಧಾನ ತನ್ನ ಆಶಯವನ್ನು ಈಡೇರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಸರ್ವರಿಗೂ ಸಮಾನ ಸಂವಿಧಾನ"ದ್ದರೂ ಅದನ್ನು ಮನಸ್ಸಿಗೆ ಬಂದಂತೆ ನಮ್ಮದು ನಿಮ್ಮದು ಅವರದು ಇವರದು ಅವರಿಂದ ರಚಿತವಾಗಿರುವುದು ಇವರಿಂದ ನಿರ್ಮಾಣವಾಗಿರುವುದು ಎಂದು ಕಿತ್ತಾಡುತ್ತೇವೆ. ಸಂ"ಧಾನ ರಚನಾಕಾರರಿಗೆ ಇಲ್ಲದ ಜಾತಿಯನ್ನು ನಾವು ಅಂಟಿಸಿ ಬಾು ಬಡಿದುಕೊಳ್ಳುತ್ತೇವೆ. ಅದಕ್ಕೆ ತೋಂಟದ ಸಿದ್ದಲಿಂಗಪ್ಪನವರು ಹೇಳಿದ್ದು "ಜಾತಿ ಧರ್ಮ ನಿಮ್ಮ ನಿಮ್ಮ ಜಗಲಿ ಮ್ಯಾಗ, ಭಾರತ ಸಂವಿಧಾನ ನಿಮ್ ನಿಮ್ ಎದಿ ಮ್ಯಾಗ ಎಂದು" ಆದರೂ ಇದು ಇನ್ನೂ ನಮ್ಮವರಿಗೆ ಆರ್ಥವಾಗುತ್ತಿಲ್ಲ. ಬಾಬಾಸಾಹೇಬರು ಹೇಳಿದಂತೆ ನಮ್ಮ ಸಂವಿಧಾನ ಯಶಸ್ವಿಯೋ ಅಥವಾ ಅಪಯಶಸ್ವಿಯೋ ಎನ್ನುವುದಕ್ಕೆ ಮುಂದಿನ ದಿನಗಳಲ್ಲಿ ಕಾಲವೇ ಉತ್ತರ ನೀಡುತ್ತದೆ. ಆದರೆ ಕಾಲದ ಮಾತಿಗೆ ಓಗೊಟ್ಟಾಗ ಉತ್ತರ ನೀಡಬೇಕಾದವರು ನಾವುಗಳೆ. ಅದಕ್ಕೆ ಕೇಳುತ್ತಿದ್ದೇನೆ ಈ ದೇಶದ ಸಂವಿಧಾನವನ್ನು ನಾವು ಯಶಸ್ವಿ ಮಾಡಿದ್ದೀವಾ? ಈ ಸಂವಿಧಾನ ದಿನಾಚರಣೆ ಮಾಡುವ ಯೋಗ್ಯತೆಯನ್ನು ನಾವು ಉಳಿಸಿಕೊಂಡಿದ್ದೀವಾ?
ಮಂಜುನಾಥ ಮ. ಜುನಗೊಂಡ
ವಿಜಯಪುರ